Karnataka Times
Trending Stories, Viral News, Gossips & Everything in Kannada

LML Star: ಒಂದೇ ಚಾರ್ಜಿಂಗ್ ನಲ್ಲಿ 156 ಕಿ.ಮೀ.ಪ್ರಯಾಣಿಸುವ ಎಲೆಕ್ಟ್ರಿಕ್ ಸ್ಕೂಟರ್, ಆಕರ್ಷಕ ಲುಕ್ ಹಾಗೂ ಕಡಿಮೆ ಬೆಲೆಗೆ!

advertisement

ಇತ್ತೀಚಿನ ದಿನದಲ್ಲಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಸ್ಕೂಟರ್ ಗಳ ಅಬ್ಬರ ಈ ಹಿಂದಿಗಿಂತಲೂ ಹೆಚ್ಚಾಗುತ್ತಿದೆ. ಸಾಮಾನ್ಯ ಸ್ಕೂಟರ್ ಗೆ ಹೋಲಿಸಿದರೆ ಎಲೆಕ್ಟ್ರಾನಿಕ್ ಸ್ಕೂಟರ್ ಗಳು ನೋಡಲು ಸ್ಟೈಲೀಶ್ ಲುಕ್ ನೀಡುವ ಜೊತೆ ಜೊತೆಗೆ ಕಡಿಮೆ ಖರ್ಚಿನ ಮೂಲಕ ನಿಮಗೆ ದೀರ್ಘಾವಧಿಯಲ್ಲಿ ಅಧಿಕ ಉಳಿತಾಯದ ಲಾಭ ನೀಡಲಿದೆ. ಇಂದು ಪ್ರಪಂಚದಾದ್ಯಂತ ಇಂತಹ ಸ್ಕೂಟರ್ ಗೆ ಬಾರೀ ಮಟ್ಟದಲ್ಲಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಇದರ ಉತ್ಪಾದನೆ ಕಡೆ ಅನೇಕ ಕಂಪೆನಿ ಗಮನಹರಿಸಿ ಉತ್ತಮ ಸ್ಪರ್ಧಾತ್ಮಕ ಪೈಪೋಟಿ ನಡೆಸುತ್ತಿದೆ.

ಯಾವುದು ಈ ಸ್ಕೂಟಿ

ಇತ್ತೀಚಿನ ದಿನದಲ್ಲಿ ಬಾರೀ ಮಟ್ಟದಲ್ಲಿ ಒಂದು ಸ್ಕೂಟಿ ಸುದ್ದಿ ಮಾಡಿತ್ತು. ಇದರ ಹೆಸರು LML ಸ್ಟಾರ್ (LML Star) ಎಲೆಕ್ಟ್ರಾನಿಕ್ ಸ್ಕೂಟರ್ ಎಂದು. ಮಾರುಕಟ್ಟೆಯಲ್ಲಿ ಇತರ ದೈತ್ಯ ಕಂಪೆನಿಗಳಿಗೆ ಪ್ರಬಲ ಪೈಪೋಟಿ ನೀಡುವ ಸಲುವಾಗಿ ಈ ಒಂದು ಇಲೆಕ್ಟ್ರಾನಿಕ್ ಸ್ಕೂಟರ್ ಬಹಳ ಪ್ರಾತಿನಿಧ್ಯ ಪಡೆಯುತ್ತಿದೆ. ಇದರಲ್ಲಿ ಇರುವ ಫೀಚರ್ಸ್ ಗ್ರಾಹಕರನ್ನು ತುಂಬಾ ಆಕರ್ಷಿಸಲಿದ್ದು 156KM ನಲ್ಲಿ ಅತ್ಯುತ್ತಮ ಬ್ಯಾಟರಿ ಪ್ಯಾಕಪ್ ಸೇವೆ ಸಹ ನೀಡಲಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

advertisement

ಆಕರ್ಷಕ ವೈಶಿಷ್ಟ್ಯ

  • ಒಂದೇ ಚಾರ್ಜಿಂಗ್ ನಲ್ಲಿ 156km ವರೆಗೆ ಪ್ರಯಾಣ ಮಾಡಬಹುದು.
  • ಉತ್ತಮ ಗುಣಮಟ್ಟದ ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದೆ.
  • ಸ್ಕೂಟರ್ ನ ವಿನ್ಯಾಸವು ಬಹಳ ಆಕರ್ಷಕವಾಗಿದೆ.
  • ಈ ಒಂದು ಸ್ಕೂಟರ್ ನಲ್ಲಿ ನ್ಯಾವಿಗೇಶನ್ ಬಾರ್ , ಡಿಜಿಟಲ್ ಸ್ಪೀಡೋ ಮೀಟರ್, ಚಾರ್ಜ್ ಮಾಡಲು USB ಪೋರ್ಟ್, ಸ್ಟಾರ್ಟಿಂಗ್ ಬಟನ್, LED ಲೈಟಿಂಗ್ , LED ಟೈಲ್ ಲೈಟಿಂಗ್, ಪುಶ್ ಸ್ಪೀಡ್ ಹಾಗೂ ಮೊಬೈಲ್ ಕನೆಕ್ಟಿವಿಟಿ ಇದರಲ್ಲಿ ಹೊಂದಿರುವುದನ್ನು ಕಾಣಬಹುದು.
  • LML ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ತನ್ನ ಪೈಪೋಟಿಯನ್ನು ಹೆಚ್ಚು ಮಾಡಿದೆ.ಇದರ ವೈಶಿಷ್ಟ್ಯ ವು ವಿಭಿನ್ನವಾಗಿದ್ದು ಬೈಕ್ ಪ್ರೀಯರನ್ನು ಮತ್ತಷ್ಟು ಸೆಳೆದಿದೆ.

ಬೆಲೆ ಹೇಗಿದೆ?

LML Star ev ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು ವಾಹನ ಪ್ರೀಯರನ್ನು ಗಮನ ಸೆಳೆದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ 100,000 ದಲ್ಲಿ ಖರೀದಿ ಮಾಡಬಹುದಾಗಿದೆ. ಇದು ವೇಗದ ಚಾರ್ಜಿಂಗ್ ಸೌಲಭ್ಯದೊಂದಿಗೆ ಉತ್ತಮ‌ ರೀತಿಯಲ್ಲಿ ರೈಡ್ ಮಾಡಬಹುದಾಗಿದೆ.

advertisement

Leave A Reply

Your email address will not be published.