Karnataka Times
Trending Stories, Viral News, Gossips & Everything in Kannada

Gayatri Mantra: ರಾಯರು ನಿಮ್ಮ ಕನಸಿನಲ್ಲಿ ಬಂದು ಸಂಕಷ್ಟಗಳನ್ನು ದೂರ ಮಾಡಬೇಕಾದರೆ ಈ ಮಂತ್ರವನ್ನು ಪಠಿಸಿ!

advertisement

ಜೀವನದಲ್ಲಿ ಏರುಪೇರುಗಳು ಸಹಜ. ಹಾಗಂತ ಮಾತ್ರಕ್ಕೆ ಜೀವನವು ಸದಾ ಕಷ್ಟಗಳಿಂದಲೇ ಕೂಡಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ದೇವರ ಆಶೀರ್ವಾದವಿದ್ದರೆ ಜೀವನದಲ್ಲಿರುವ ಕಷ್ಟಕಾರ್ಪಣ್ಯವು ದೂರವಾಗಿ ಸಂತೋಷವು ನೆಲೆಸುತ್ತದೆ. ಹೌದು, ಈ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಾಕ್ಷಾತ್ ಗುರು ರಾಯರು (Guru Rayaru) ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಬಗೆ ಹರಿಸುತ್ತಾರೆ. ಹಾಗಾದ್ರೆ ಅದು ಯಾವ ಮಂತ್ರ, ಆ ಮಂತ್ರವನ್ನು ಪಠಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದರ ಕಂಪ್ಲೀಟ್ ಮಾಹಿತಿಯು ಇಲ್ಲಿದೆ.

ಯಾವ ಮಂತ್ರವನ್ನು ಪಠಿಸಿದರೆ ರಾಯರ ಕೃಪೆ ಸಾಧ್ಯ

advertisement

ರಾಘವೇಂದ್ರ ರಾಯ (Raghavendra Raya) ರ ಮಹಿಮೆ ತುಂಬಾ ಅಪಾರವಾದದ್ದು, ಈಗಾಗಲೇ ರಾಯರನ್ನು ನಂಬಿ ಜೀವನದಲ್ಲಿ ಏಳಿಗೆಯನ್ನು ಕಂಡವರು ಹಲವರಿದ್ದಾರೆ. ಗುರು ರಾಯರನ್ನು ನೆನೆಯಲು ಹಲವಾರು ಮಂತ್ರಗಳು ಇದೆ. ಅದರಲ್ಲಿ ರಾಘವೇಂದ್ರ ಗಾಯತ್ರಿ ಮಂತ್ರ (Gayatri Mantra) ಬಹಳ ಶ್ರೇಷ್ಠವಾದದ್ದು. ರಾಘವೇಂದ್ರ ಗಾಯತ್ರಿ ಮಂತ್ರವನ್ನು ಒಂದು ಬಾರಿ ಮೂರು ಬಾರಿ ಐದು ಬಾರಿ ಒಂಬತ್ತು ಬಾರಿ ಇಪ್ಪತ್ತೊಂದು ಬಾರಿ ಹಾಗೂ ಸಾವಿರದ ಎಂಟು ಬಾರಿ ಜಪ ಮಾಡಬಹುದು. ಗಾಯತ್ರಿ ಮಂತ್ರವನ್ನು ಪಠಿಸಿದರೆ ಶ್ರೀ ಗುರು ರಾಯರು ನಿಮ್ಮ ಕನಸಿನಲ್ಲಿ ಬಂದು ಅನುಗ್ರಹಿಸಿ ನಿಮ್ಮ ಸಕಲ ಸಂಕಷ್ಟಗಳು ದೂರವಾಗುತ್ತವೆ. ಗುರು ರಾಯರ ವಿಶೇಷ ದಿನವಾದ ಗುರುವಾರದಂದು ಈ ಮಂತ್ರವನ್ನು ಪಠಿಸಬೇಕು. ಇಲ್ಲಿ ಮುಖ್ಯವಾಗಿ 48 ದಿನಗಳು ಪಠಿಸಿದರೆ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ.

ರಾಘವೇಂದ್ರ ಗಾಯತ್ರಿ ಮಂತ್ರದ ವ್ರತವನ್ನು ಆರಂಭಿಸಲು ಗುರುವಾರ ಅಥವಾ ಶುಕ್ಲ ಪಕ್ಷ ಪುಷ್ಯ ನಕ್ಷತ್ರ ದಿನವು ತುಂಬಾ ಒಳ್ಳೆಯದು. ದಿನಕ್ಕೆ ಸತತ ಸಾವಿರದ ಒಂದು ಬಾರಿ ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರವಾದ ‘ಓಂ ಓಂ ವೆಂಕಟನಾಥಯ ವಿಧ್ಮಹೇ ತಿಮ್ಮಣ್ಣ ಪುತ್ರಾಯ ಧಿಮಹಿ ತನ್ನೋ ರಾಘವೇಂದ್ರಯ ಪ್ರಚೋದಯಾತ್. ಅಲ್ಲದೆ ಓಂ ಪ್ರಹ್ಲಾದಾಯ ವಿಧ್ಮಹೆ ವ್ಯಾಸರಾಜ ಧಿಮಹಿ ತನ್ನೋ ರಾಘವೇಂದ್ರಾಯ ಪ್ರಚೋದಯಾತ್’ ಇದನ್ನು 48 ದಿನಗಳ ವರೆಗೆ ಪಠಿಸುತ್ತಾ ಶ್ರೀ ಗುರು ರಾಘವೇಂದ್ರ ರಾಯರು ನಿಮ್ಮ ಕನಸಿನಲ್ಲಿ ಬರುವುದು ಖಂಡಿತ. ನಿಮ್ಮ ಕನಸಿನಲ್ಲಿ ಬಂದು ರಾಯರು ನಿಮ್ಮ ಸಕಲ ಸಂಕಷ್ಟಗಳನ್ನು ದೂರ ಮಾಡುತ್ತಾರೆ. ಹೀಗಾಗಿ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯು ನೆಲೆಸುತ್ತದೆ.

advertisement

Leave A Reply

Your email address will not be published.