Karnataka Times
Trending Stories, Viral News, Gossips & Everything in Kannada

Google Pixel 7: 50MP ಕ್ಯಾಮೆರಾ ಹೊಂದಿರುವ ಈ ಫೋನಿನ ಮೇಲೆ 20,000 ರೂಪಾಯಿ ರಿಯಾಯಿತಿ!

advertisement

ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ಇ-ಕಾಮರ್ಸ್‌ ತಾಣವಾಗಿ ಫ್ಲಿಪ್‌ಕಾರ್ಟ್‌ (Filpkart) ಎಲ್ಲರ ಮನಸ್ಸನ್ನು ಗೆದ್ದುಕೊಂಡಿದೆ. ಈಗಾಗಲೇ ಆನ್‌ಲೈನ್‌ ಶಾಪಿಂಗ್‌ ಗ್ರಾಹಕರಿಗಾಗಿ ವಿಶೇಷ ಸೇಲ್‌ಗಳನ್ನು ಫ್ಲಿಪ್‌ಕಾರ್ಟ್‌ ನಡೆಸುತ್ತಾ ಬಂದಿದೆ. ಇದೀಗ ಫ್ಲಿಪ್‌ಕಾರ್ಟ್‌ ನಲ್ಲಿ ಆಂಡ್ರಾಯ್ಡ್ ಪ್ರೀಮಿಯಂ ಲೀಗ್ ಮಾರಾಟ ನಡೆಯುತ್ತಿದೆ. ಈ ಸೇಲ್ ಡಿಸೆಂಬರ್ 31 ರವರೆಗೆ ನಡೆಯಲಿದ್ದು, ಸ್ಮಾರ್ಟ್ ಫೋನ್ ಗಳ ವಿಶೇಷ ರಿಯಾಯಿತಿಯನ್ನು ಘೋಷಿಸಿದೆ. ಅದರಲ್ಲಿಯು Google Pixel 7 ಫೋನ್‌ ಮೇಲೆ ಭಾರಿ ಮೊತ್ತದ ರಿಯಾಯಿತಿಯನ್ನು ನೀಡಲಾಗುತ್ತಿದ್ದು ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

Google Pixel 7 ಫೋನ್‌ ಎಷ್ಟು ರಿಯಾಯಿತಿ ಲಭ್ಯ

Google Pixel 7 ಫೋನ್‌ ಮೇಲೆ ವಿಶೇಷ ರಿಯಾಯಿತಿಯನ್ನು ಘೋಷಿಸಿದ್ದು, 128 GB ಸ್ಟೋರೇಜ್ ರೂಪಾಂತರದ ಬೆಲೆಯನ್ನು ಫ್ಲಿಪ್‌ಕಾರ್ಟ್‌ನಲ್ಲಿ 59,999 ರೂಪಾಯಿಯಾಗಿದ್ದು ಆದರೆ ರಿಯಾಯಿತಿ ದರದಲ್ಲಿ ಖರೀದಿಸಿ ಗ್ರಾಹಕರು ಹಣವನ್ನು ಉಳಿಸಬಹುದಾಗಿದೆ. ಈ ಸೇಲ್ ನಲ್ಲಿ 33 ಪ್ರತಿಶತದ ರಿಯಾಯಿತಿಯ ಬಳಿಕ ಕೇವಲ 39,999 ರೂಗೆ ಫೋನ್ ಖರೀದಿಸುವ ಮೂಲಕ ಸರಿಸುಮಾರು 20 ಸಾವಿರ ರೂಪಾಯಿಯನ್ನು ಉಳಿಸಬಹುದಾಗಿದೆ.

advertisement

ಅದಲ್ಲದೇ, ಬ್ಯಾಂಕ್ ಕೊಡುಗೆಯು ಲಭ್ಯವಿದ್ದು, ಶೇಕಡಾ 10% ರಿಯಾಯಿತಿಯನ್ನು ಪಡೆಯಬಹುದು. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ 2,000 ರೂ.ಗಳ ಹೆಚ್ಚುವರಿ ರಿಯಾಯಿತಿಯು ಲಭ್ಯವಿದೆ. ಇನ್ನು ಉಳಿದಂತೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯವಿದೆ. ಅದಲ್ಲದೇ ಈ ಸೇಲ್ ನಲ್ಲಿ 33,400 ರೂಪಾಯಿಗಳ ವಿನಿಮಯ ಕೊಡುಗೆಯನ್ನು ನೀಡಲಾಗುತ್ತಿದ್ದು, ಖರೀದಿದಾರರು ತಮ್ಮ ಹಣವನ್ನು ಉಳಿತಾಯ ಮಾಡಬೇಕೆಂದುಕೊಂಡಿದ್ದರೆ ಈ ರಿಯಾಯಿತಿ ಕೊಡುಗೆಗಳನ್ನು ಬಳಸಬಹುದಾಗಿದೆ.

Google Pixel 7 ನ ವೈಶಿಷ್ಟ್ಯಗಳು

Google Pixel 7 ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ 6.3 ಇಂಚಿನ ಪೂರ್ಣ HD ಪ್ಲಸ್ ಡಿಸ್‌ಪ್ಲೇ ನೊಂದಿಗೆ ಗೂಗಲ್ ಟೆನ್ಸರ್ ಜಿ 2 (Google Tensor G2) ಪ್ರೊಸೆಸರ್ ಅನ್ನು ಹೊಂದಿದೆ. ಅದಲ್ಲದೇ, 12 GB RAM ಮತ್ತು 128 GB ಸಂಗ್ರಹದೊಂದಿಗೆ ಫೋನ್ ಲಭ್ಯವಿದ್ದು, ಅದರೊಂದಿಗೆ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಟ್ರಿಪಲ್ ಹಿಂಬದಿಯ ಕ್ಯಾಮೆರಾದ ಸೆಟಪ್ ನೀಡಲಾಗಿದೆ. ಮೊದಲ ಕ್ಯಾಮರಾವು 50MP ಹೊಂದಿದ್ದು, ಸೆಲ್ಫಿಗಾಗಿ ಮುಂಭಾಗದ ಕ್ಯಾಮರಾವು 10.8MP ನೊಂದಿಗೆ ಲಭ್ಯವಿದ್ದು, ಈ ಫೋನ್ 4,270mAh ನ ಅತ್ಯುತ್ತಮ ಬ್ಯಾಟರಿಯನ್ನು ಹೊಂದಿದೆ.

advertisement

Leave A Reply

Your email address will not be published.