Karnataka Times
Trending Stories, Viral News, Gossips & Everything in Kannada

New Traffic Rule: ಹೆಲ್ಮೆಟ್ ಹಾಕಿದ್ರು ಬೀಳುತ್ತೆ 2,000 ರೂಪಾಯಿ ದಂಡ, ಹೊಸ ನಿಯಮ ಜಾರಿಗೆ!

advertisement

ಸರ್ಕಾರ ಮಾಡಿರುವ ನಿಯಮಗಳನ್ನು ಜನರು ಪಾಲಿಸಬೇಕು ಎಂದು ಸರ್ಕಾರಗಳು ಬಯಸುತ್ತವೆ. ಸರ್ಕಾರಗಳು ನಿಯಮಗಳನ್ನು ಮಾಡಬೇಕಾದರೆ ಇದು ಜನರ ಒಳಿತಿಗಾಗಿಯೇ ಮಾಡಿರುತ್ತವೆ. ಈ ನಿಯಮಗಳ ಪಾಲನೆ ಆಗದೆ ಇದ್ದಲ್ಲಿ ದಂಡ ವಿಧಿಸುವ ಮೂಲಕ ಇಂತಹ ನಿಯಮಗಳ ಪಾಲನೆ ಕಟ್ಟು ನಿಟ್ಟಾಗಿ ಆಗಬೇಕು ಎಂದು ಸರ್ಕಾರಗಳು ದಂಡ ವಿಧಿಸುತ್ತವೆ. ಹೀಗೆ ಸರ್ಕಾರಗಳು ನಮ್ಮ ಸುರಕ್ಷತೆಗೆ ರಸ್ತೆ ನಿಯಮಗಳನ್ನು ಬಹಳ ಮೊದಲೇ ಆರಂಭಿಸಿವೆ. ಇದನ್ನು ನಾವು ಪಾಲಿಸದೆ ಇದ್ದಲ್ಲಿ ದಂಡ ವಿಧಿಸಬೇಕಾಗುತ್ತದೆ.

ರಸ್ತೆಯ ಮೇಲೆ ಸುರಕ್ಷಿತವಾಗಿ ಹೋಗಬೇಕು ಎಂದಾದಲ್ಲಿ ಅದರಲ್ಲೂ ಮುಖ್ಯವಾಗಿ ದ್ವಿ ಚಕ್ರ ವಾಹನಗಳಲ್ಲಿ ಸುರಕ್ಷತೆಗೆ ಹೆಲ್ಮೆಟ್ ಧರಿಸುವುದು ಬಹಳ ಅಗತ್ಯ ಆಗಿರುತ್ತದೆ. ಜನರು ತಮ್ಮ ಶೋಕಿಗೆ ಅಥವಾ ಇನ್ಯಾವುದೋ ಕಾರಣಕ್ಕೆ ಹೆಲ್ಮೆಟ್ (Helmet) ಧರಿಸದೆ ಹೋಗಿ ಅಂತಹ ಸಂದರ್ಭದಲ್ಲಿ ಅಪಘಾತ ಆದಾಗ ಅವರ ಕುಟುಂಬಕ್ಕೆ ಆಗುವ ನಷ್ಟ ಬಹಳ ದೊಡ್ಡದು. ಇಂತಹ ಸನ್ನಿವೇಶಗಳು ಯಾರಿಗೂ ಬರಬಾರದು ಎನ್ನುವ ಕಾರಣಕ್ಕೆ ಸರ್ಕಾರ ಹೆಲ್ಮೆಟ್ ಧಾರಣೆಯನ್ನು ಕಡ್ಡಾಯಗೊಳಿಸಿ ಜನರು ಅದನ್ನು ಮಾಡದೆ ಇದ್ದಾಗ ದಂಡ ವಿಧಿಸುವ ಮೂಲಕವಾದರೂ ಎಲ್ಲರೂ ನಿಯಮಗಳನ್ನು (Traffic Rules) ಪಾಲನೆ ಮಾಡಬೇಕು ಎನ್ನುವ ಉದ್ದೇಶ ಹೊಂದಿರುತ್ತವೆ.

ಇಂಥ ಹಲವು ರಸ್ತೆ ಸುರಕ್ಷತಾ ನಿಯಮಗಳು ಇದ್ದರೂ ಕೂಡ ಹಲವು ಬಾರಿ ಜನರು ಇಂತಹ ನಿಯಮಗಳ ಉಲ್ಲಂಘನೆ ಮಾಡುತ್ತಾರೆ. ಏನೂ ಆಗುವುದಿಲ್ಲ ಎಂಬ ಮೊಂಡು ಹಟ ಜನರಲ್ಲಿ ಇರುತ್ತದೆ. ಇಂತಹ ಅಜಾಗರೂಕತೆಯ ಕಾರಣದಿಂದಲೇ ಬಹಳ ಮಂದಿ ಪ್ರಾಣ ಕಳೆದುಕೊಳ್ಳುವುದು ಅಥವಾ ಅಂಗವಿಕಲರಾಗುವುದನ್ನು ನೀವು ನಿಮ್ಮ ಸುತ್ತಲ ಸಮಾಜದಲ್ಲಿ ನೋಡಿರಬಹುದು. ಮೊದಲಿಗೆ ಹೆಲ್ಮೆಟ್ ಧರಿಸದೇ ಇದ್ದಾಗ ಸಣ್ಣ ಮೊತ್ತದ ದಂಡ ಇತ್ತು ಆದರೆ ಸಣ್ಣ ಪ್ರಮಾಣದ ದಂಡ ಸಾಕಾಗದೆ ಇದ್ದಲ್ಲಿ ಹೆಚ್ಚಿನ ದಂಡ ವಿಧಿಸುವ ಮೂಲಕ ಆದರೂ ಜನರು ನಿಯಮಗಳನ್ನು ಪಾಲಿಸಲಿ ಎಂದು ಸರ್ಕಾರ ಬಯಸುತ್ತದೆ.

ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆಗೆ 2,000 ದ ದಂಡ ವಿಧಿಸಬಹುದು:

 

advertisement

 

ಈಗ ಹೆಲ್ಮೆಟ್ ಧರಿಸುವ ನಿಯಮಗಳನ್ನು (Traffic Rules) ಸರ್ಕಾರ ಬದಲಾಯಿಸಿ ಫೈನ್ ನ ಮೊತ್ತವನ್ನು ಹೆಚ್ಚಿಸಿದೆ 194 ಡಿ ಎಂ ವಿ ಎ ಅಡಿಯಲ್ಲಿ ಹೆಲ್ಮೆಟ್ ಧರಿಸದೇ ಇದ್ದಾಗ ಸಾವಿರ ರೂಪಾಯಿಗಳು ಹಾಗೂ ಧರಿಸಿದ ಹೆಲ್ಮೆಟ್ ದೋಷಪೂರಿತವಾದದಲ್ಲಿ ಒಂದು ಸಾವಿರ ರೂಪಾಯಿಗಳ ಚಲನ್ ಅನ್ನು ನೀಡಬಹುದು. ಹೆಲ್ಮೆಟ್ ಧರಿಸಿವುದು ಹೇಗೆ ಅಗತ್ಯವೋ ಧರಿಸಿದ ಹೆಲ್ಮೆಟ್ ನ ಗುಣಮಟ್ಟ ಚೆನ್ನಾಗಿರುವುದು ಕೂಡ ಅಷ್ಟೇ ಅಗತ್ಯ. ಹೀಗೆ ಒಟ್ಟಾಗಿ 2,000 ಗಳ ಚಲನ್ ಅನ್ನು ಕೂಡ ನಿಮಗೆ ಕೊಡಬಹುದಾಗಿದೆ.

Overload Penalty:

ಇದೇ ರೀತಿ ವಾಹನಗಳಲ್ಲಿ ಹೆಚ್ಚಿನ ಲೋಡ್ ಮಾಡಿಕೊಂಡು ಹೋದಾಗಲೂ ಕೂಡ ನೀಡುವ ಫೈನ್ ಅನ್ನು ಹೆಚ್ಚಿಸಲಾಗಿದ್ದು ಈಗ ಇದರ ಗರಿಷ್ಟ ಮೊತ್ತ 20,000 ಆಗಿದೆ. ಅಂದರೆ ಪ್ರತಿ ಟನ್ ಹೆಚ್ಚುವರಿ ಲೋಡಿಗೆ 2,000 ಗಳನ್ನು ನೀಡಬೇಕಾಗುತ್ತದೆ ಹೀಗೆ 10 ಟನ್ ಹೆಚ್ಚು ತೂಕ ಹಾಕಿದಲ್ಲಿ 20,000 ಗಳ ದಂಡ ಕಟ್ಟಬೇಕಾಗುತ್ತದೆ.

advertisement

Leave A Reply

Your email address will not be published.