Karnataka Times
Trending Stories, Viral News, Gossips & Everything in Kannada

UPI: ಮೊಬೈಲ್ ಕಳೆದುಕೊಂಡರೆ ಅದರಲ್ಲಿನ UPI ನಿಷ್ಕ್ರಿಯ ಮಾಡಲು ಈ ಸರಳ ಕ್ರಮ ಅನುಸರಿಸಿ!

advertisement

ಇತ್ತೀಚಿನ ದಿನದಲ್ಲಿ ಮೊಬೈಲ್ ತುಂಬಾ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿದೆ. ದಿನ ನಿತ್ಯ ಮುಂಜಾನೆ ಆರಂಭ ಆಗೋದೆ ಮೊಬೈಲ್ ಮೂಲಕ. ಹಾಗಾಗಿ ಮೊಬೈಲ್ ಬಳಕೆದಾರರು ಅಧಿಕ ಆಗುತ್ತಿದೆ. ಇದು ಮಾರುಕಟ್ಟೆಯಲ್ಲಿ ಮೊಬೈಲ್ ಬೇಡಿಕೆ ಅಧಿಕ ಮಾಡಿ ಆರ್ಥಿಕತೆಗೆ ಉತ್ತೇಜನೆಯನ್ನು ಸಹ ನೀಡುತ್ತಿದೆ. ಮೊಬೈಲ್ ಮೇಲೆ ಅವಲಂಬನೆ ಅಧಿಕ ಆದಂತೆ ಅದನ್ನು ದುರುಪಯೋಗ ಮಾಡಿಕೊಳ್ಳುವವರು ಸಹ ಈ ಹಿಂದಿಗಿಂತ ಹೆಚ್ಚಾಗುತ್ತಿದ್ದಾರೆ. ಎಷ್ಟೋ ಬಾರಿ ನಮಗೆ ಅರಿವಿಲ್ಲದಂತೆ ಫೋನ್ ಕಳ್ಳತನವಾದರೇ ಇನ್ನು ಕೆಲ ಸಂದರ್ಭಗಳಲ್ಲಿ ಫೋನ್ ಬೇಕಂತಲೇ ಕಳ್ಳತನ ಮಾಡಿ ಮೋಸ ಮಾಡುತ್ತಾರೆ.

ಚಿಂತಿಸಿ ಪ್ರಯೋಜನವಿಲ್ಲ:

ಫೋನ್ ಕಳ್ಳತನ ವಾದರೆ ಅದರಲ್ಲಿ ನಿಮಗೆ ಬೇಕಾದ ಅನೇಕ ಕಾಂಟ್ಯಾಕ್ಟ್ ನಂಬರ್, ಬ್ಯಾಂಕ್ ಮಾಹಿತಿ, ಖಾಸಗಿ ಮಾಹಿತಿ ಎಲ್ಲವೂ ಕೂಡ ಅಳವಡಿಕೆ ಆಗಿರುತ್ತದೆ‌. ಫೋನ್ ಮೌಲ್ಯಕ್ಕಿಂತಲೂ ಅದರಲ್ಲಿರುವ ದಾಖಲೆಗಳ ಮೌಲ್ಯ ಮತ್ತು ಅಧಿಕ ಇರುತ್ತದೆ. ಹೀಗೆ ಮೊಬೈಲ್ ಕಳೆದುಕೊಂಡರೆ ದೂರು ಹಾಕುವ ಮೊದಲು ನಿಮ್ಮಿಂದಲೇ ಮೊಬೈಲ್ ಹುಡುಕಲು ಕೆಲ ಯೋಜನೆಗಳಿವೆ. ಹಾಗಾಗಿ ಚಿಂತಿಸಿ ವ್ಯಥೆ ಪಡೆಯುವ ಬದಲು ಈ ಉಪಾಯ ಅನುಸರಿಸಿ.

ಈ ಕ್ರಮ ಅನುಸರಿಸಿ:

 

advertisement

 

ಅನೇಕ ಬಾರಿ ಕಳೆದು ಕೊಂಡ ಮೊಬೈಲ್ ನ ಮೂಲಕ UPI ನ ಸಹಾಯದಿಂದ ಹಣ ವರ್ಗಾವಣೆ ಮಾಡಿಕೊಂಡ ಅನೇಕ ಪ್ರಕರಣ ಕಾಣುತ್ತೇವೆ. ಇಂತಹ ಸಂದರ್ಭಗಳಲ್ಲಿ ಜಾಸ್ತಿ ಚಿಂತನೆ ಮಾಡದೇ ಸುರಕ್ಷಿತವಾಗಿ ಹಣ ಜಾಗೃತವಾಗಿ ಇರಿಸಿಕೊಳ್ಳಿ. ಹಾಗಾಗಿ ನಾವಿಂದು ಹೇಳುವ ಸರಳ ಕ್ರಮ ಅನುಸರಿಸಿದರೆ ಹಣಕಾಸಿನ ಅಪಾಯದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.

  • ಕಳೆದು ಹೋದ ಮೊಬೈಲ್ ನಲ್ಲಿ ನೀವು ಮಾಡಬೇಕಾದ ಮೊದಲ ಕೆಲಸ ಎಂದರೆ ಸಿಮ್ ಬ್ಲಾಕ್ ಮಾಡಿರಿ. ಅದಕ್ಕಾಗಿ ನೀವು ಟೆಲಿಕಾಂ ಪೂರೈಕೆ ದಾರರ ಗ್ರಾಹಕರ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿರಿ. ಫೋಮ್ ನಂಬರ್ ಅನ್ನು ನಿಷ್ಕ್ರಿಯ ಗೊಳಿಸಲು ತಿಳಿಸಿರಿ.
  • ಸಿಮ್ ಬ್ಲಾಕ್ ಆದ ಬಳಿಕ OTP ಆ್ಯಕ್ಸಸ್ ಇರುವ ಅಷ್ಟು ಆ್ಯಪ್ ನಿಷ್ಕ್ರಿಯ ಮಾಡಬಹುದು. ಇದು ಗೌಪ್ಯತೆ ಮತ್ತು ಸುರಕ್ಷತೆಗೆ ಅಧಿಕ ಪ್ರಾತಿನಿಧ್ಯ ದೊರಕಲಿದೆ.
  • ಈ ಪ್ರಕ್ರಿಯೆ ಕೆಲ ಸಮಯ ಹಿಡಿಯುತ್ತದೆ ಇದಾದ ಬಳಿಕ ಮೊದಲು ಪೊಲೀಸ್ ಸ್ಟೇಷನ್ ಗೆ ಹೋಗಿ FRI ದಾಖಲಿಸಿ. ಆಗ ನಿಮ್ಮ ಫೋನ್ ಕಳ್ಳತನ ಆದಾಗ FRI ನ ಒಂದು ಕಾಪಿ ಎನ್ನುವುದು ನಿಮಗೆ ಸಾಕ್ಷಿ ಆಗಿ ಕೆಲಸ ಮಾಡಲಿದೆ.
  • UPI ಪೇಮೆಂಟ್ ನಿಷ್ಕ್ರಿಯ ಗೊಳಿಸಿ. ಅದಕ್ಕಾಗಿ ನೀವು ಅರ್ಜಿಯನ್ನು ಕೂಡಲೇ ಸಲ್ಲಿಸಬೇಕು ಇಲ್ಲವಾದರೆ ದುರುಪಯೋಗ ಆಗುವ ಸಾಧ್ಯತೆ ಅಧಿಕ ಇದೆ.
  • ಪೇಟಿಎಂ,ಗೂಗಲೆ ಪೇ, ಫೋನ್ ಪೇ, ಭೀಮ್ ಇತರ ಆ್ಯಪ್ ನಿಮ್ಮ ಪಾವತಿ ಪ್ರಕ್ರಿಯೆ ಮಾಡಿದ್ದರೂ ಮೊಬೈಲ್ ಕಳೆದುಕೊಂಡಾಗ ಇದು ನಿಮಗೆ ಅಪಾಯ ತಂದೊಡ್ಡಲಿದೆ.
  • ಕೂಡಲೇ UPI ಕಸ್ಟಮರ್ ಕೇರ್ ಗೆ ಕರೆ ಮಾಡಿ ತಿಳಿಸಬೇಕು ಆಗ ಒಂದೇ ಬಾರಿಗೆ ಎಲ್ಲ ಡೇಟಾ ನಿಷ್ಕ್ರಿಯ ಆಗಲಿದೆ. ಆ್ಯಡ್ರಾಯ್ಡ್ ಬಳಕೆದಾರರು ಇದಕ್ಕಾಗಿ android.com/find ಮೇಲೆ ಕ್ಲಿಕ್ ಮಾಡಿ,
    ಆಗ ಅದು ನಿಮ್ಮ ಜೀಮೆಲ್ ಅಕೌಂಟ್ ಗೆ ಲಾಗಿನ್ ಆಗಲಿದೆ. ನಿಮ್ಮ ಫೋನ್ ನಲ್ಲಿ ಎಲ್ಲ ದಾಖಲಾತಿ ಅಳಿಸಲಿದೆ.
  • IPhone ಬಳಕೆದಾರರು icloud.com/find ನಲ್ಲಿ ನಿಮ್ಮ Apple ID ಬಳಸಿ ಸೈನ್ ಇನ್ ಆಗಬೇಕು. ಆಗ ಅದರ ಮೂಲಕವೇ ಎರೈಸ್ ದಿಸ್ ಡಿವೈಸ್ ಕ್ಲಿಕ್ ಮಾಡಿದರೆ ಎಲ್ಲ ಮಾಹಿತಿ ಕ್ಲಿಯರ್ ಆಗಲಿದೆ

ಈ ಎಲ್ಲ ಪ್ರಕ್ರಿಯೆ ನೀವು ಅನುಸರಿಸುವ ಮೂಲಕ ಕಳೆದುಕೊಂಡ ಮೊಬೈಲ್ ಫೋನ್ ನಲ್ಲಿರುವ ಗೌಪ್ಯ ಮಾಹಿತಿ, ಹಣಕಾಸಿನ ವಿಚಾರವನ್ನು ಹೆಚ್ಚು ಸುರಕ್ಷಿತವಾಗಿ ಇಡಬಹುದಾಗಿದೆ. ಮೊಬೈಲ್ ಕಳ್ಳತನ ಆದ ಕೂಡಲೇ ಚಿಂತಿಸುತ್ತಾ ಅವರಿವರ ಸಹಾಯ ಕೇಳುವ ಮುನ್ನ ಹಣಕಾಸಿನ ವಿಚಾರದಲ್ಲಿ ಮೋಸ ಹೋಗದಂತೆ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯವಾಗಿದೆ.

advertisement

Leave A Reply

Your email address will not be published.