Karnataka Times
Trending Stories, Viral News, Gossips & Everything in Kannada

UPI: ನಿಮ್ಮ ಖಾತೆಗೆ ಅಪರಿಚಿತರಿಂದ ಹಣ ಜಮೆ ಆದ್ರೆ ಜಾಗೃತೆ ವಹಿಸಿ, ಇದು ಅನ್ ಲೈನ್ ಖದೀಮರ ಹೊಸ ತಂತ್ರ!

advertisement

ಇಂದು ಎಲ್ಲಾ ವ್ಯವಹಾರಗಳೂ ಕೂಡ ಆನ್ ಲೈನ್ ನಲ್ಲೇ ಆಗುತ್ತಿರುವ ಕಾರಣ ಆನ್ ಲೈನ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡ ‌ಜನರು ಬಹಳಷ್ಟು ಮಂದಿ ಇದ್ದಾರೆ. ಸಣ್ಣ ವಹಿವಾಟುಗೂ UPI ಸ್ಕ್ಯಾನ್ ಮಾಡಿ ಹಣ ಕಳುಹಿಸುತ್ತಾರೆ. ತದನಂತರ ಖಾತೆಯಿಂದ ಹಣ ಕಡಿತ ಆದ ನಂತರವೇ ಮೋಸದ ಬಗ್ಗೆ ತಿಳಿಯುತ್ತದೆ. ಇಂದು ನನಾ ರೀತಿಯಲ್ಲಿ ಹಣ ಕದಿಯುವ ವಂಚನೆ ಹೆಚ್ಚಾಗಿದ್ದು ಖದೀಮರು ಹೊಸ ಮಾರ್ಗ ಕಂಡು ಕೊಂಡಿದ್ದಾರೆ.

ಯಾವುದು ಈ ತಂತ್ರ:

 

 

ಹೌದು ಇಂದು ಡಿಜಿಟಲ್ ಯುಗ, ಆನ್‌ ಲೈನ್‌ ವಹಿವಾಟು ಗಳು ಪ್ರತಿನಿತ್ಯ ಹೆಚ್ಚಾಗಿದ್ದು ಅದೇ ರೀತಿ ವಂಚಕರು ಕೂಡ ದಿನದಿಂದ ದಿನಕ್ಕೆ ಜನರನ್ನು ಮೋಸ ಮಾಡುತ್ತಿದ್ದಾರೆ. ಆನ್‌ ಲೈನ್‌ ನಲ್ಲಿ ವಂಚಕರು ಜನರನ್ನು ಮೋಸ ಮಾಡಲು ಅವರ ಖಾತೆಗೆ ಹಣ ವರ್ಗಾವಣೆ ಮಾಡಿ, ಹಣವನ್ನ ವಾಪಸ್‌ ಕಳಿಸುವಂತೆ ಕೇಳುತ್ತಾರೆ. ಈ ಮೂಲಕ ಓಟಿಪಿ ಬ್ಯಾಂಕ್ ವಿವರಗಳನ್ನು ಕೇಳಿ ಖಾತೆಯಲ್ಲಿದ್ದ ಎಲ್ಲ ಹಣವನ್ನು ದೋಚಿಕೊಳ್ಳುತ್ತಾರೆ.

advertisement

UPI Pin ಬಗ್ಗೆ ಎಚ್ಚರಿಕೆಯಿಂದಿರಿ:

UPI Pin, OTP ಅಥವಾ Password ಅನ್ನು ಯಾರ ಜೊತೆಗೂ ಹಂಚಿಕೊಳ್ಳದಿರಿ. ಇನ್ನು UPI ಅಪ್ಲಿಕೇಶನ್ ಅನ್ನು ಆಪ್ಡೇಟ್ ಮಾಡಿ ಮತ್ತು ಪಾಸ್ ವರ್ಡ್ ಗಳನ್ನು ಕ್ರಿಯೇಟ್ ಮಾಡುವಾಗ ನಿಮ್ಮ ಸಿಕ್ರೇಟ್ ನಂ.ಗಳನ್ನು ಬಳಸಿ. ಅದೇ ರೀತಿ ಇಂದು ಸರ್ಪ್ರೈಸ್ ಆಗಿ ಉಡುಗೊರೆ ಕಳುಹಿಸುವ ಮೂಲಕ ಆನ್ ಲೈನ್ ಬುಕ್ಕಿಂಗ್ ಮೂಲಕ ಈ ಉಡುಗೊರೆ ನಿಮ್ಮ ಮನೆಹತ್ರ ಬಂದಾಗ ಸರ್ವಿಸ್ ಚಾರ್ಜ್ ಮಾಡುವಾಗ ಡೆಬಿಟ್ ಕಾರ್ಡ್ ಬಳಕೆ ಮಾಡುವಾಗ ಎಚ್ಚರಿಕೆ ವಹಿಸಿ.

ನಕಲಿ ಸೈಟ್ ಬಗ್ಗೆ ಜಾಗೃತೆ ವಹಿಸಿ:

ಯಾವುದೇ Email ಅಥವಾ SMS ಬಂದರೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ರತ್ಯುತ್ತರ ನೀಡದಿರಿ. ನಕಲಿ ಸೈಟ್ ಮೂಲಕ ಮೋಸ ಮಾಡುವ ವಂಚನೆಗಳು ಕೂಡ ಇಂದು ಹೆಚ್ಚಾಗಿದೆ. ಅದೇ ರೀತಿ ಅನ್​ಲೈನ್​ನಲ್ಲಿ ಆ್ಯಪ್ ಮೂಲಕ ಸಾಲ ನೀಡುವುದಾಗಿ ಹೇಳಿ ಸಾಲ ನೀಡುವಂಥ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಿಕೊಂಡು ಹಣ ಲಪಾಟಯಿಸುವ ಸೈಬರ್ ಖದೀಮರು ನಿಮ್ಮ ಖಾತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಹಾಗಾಗಿ ಅನ್ ಲೈನ್ ವಹಿವಾಟು ಸರಳ ವಿಧಾನ ನಿಜ, ಆದರೆ ಈ ಬಗ್ಗೆ ಜನರು ಜಾಗೃತೆ ವಹಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಈ ಬಗ್ಗೆ ಬ್ಯಾಂಕ್ ಗಳು ಕೂಡ ಎಚ್ಚರಿಕೆ ಸಂದೇಶ ನೀಡುತ್ತಲೆ ಬಂದಿದೆ.

advertisement

Leave A Reply

Your email address will not be published.