Karnataka Times
Trending Stories, Viral News, Gossips & Everything in Kannada

UPI: ಯುಪಿಐ ಮೂಲಕ ಪೇಮೆಂಟ್ ಮಾಡುವವರಿಗೆ ಸಿಗಲಿದೆ ದುಪ್ಪಟ್ಟು ಬೆನಿಫಿಟ್!

advertisement

ಯುಪಿಐ ಪೇಮೆಂಟ್ (UPI Payment) ಮೆಥಡ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ ಇಂದು ಸುಲಭವಾಗಿ ಯಾರು ಯಾರಿಗೆ ಬೇಕಾದರೂ ಹಣ ವರ್ಗಾವಣೆ ಮಾಡಲು ಯುಪಿಐ ಪೇಮೆಂಟ್ ನಿಂದ ಸಾಧ್ಯ. ಇನ್ನ ಯುಪಿಐ ಬಳಕೆ ಮಾಡಲು ಇರುವಂತಹ ಗೂಗಲ್ ಫೋನ್ ಮೊದಲಾದ ಥರ್ಡ್ ಪಾರ್ಟಿ ಪೇಮೆಂಟ್ ಅಪ್ಲಿಕೇಶನ್ ಗಳು ಹೆಚ್ಚು ಪ್ರಚಲಿತದಲ್ಲಿವೆ.

ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಯಾಗಲು ಗೂಗಲ್ ಪೇ ಮಾಸ್ಟರ್ ಪ್ಲಾನ್:

ಗೂಗಲ್ ಪೇ (Google Pay) ಇದೀಗ, National Payments Corporation of India ದ ಸಹಯೋಗದಲ್ಲಿ ಎಂ ಓ ಯು ಗೆ ಸಹಿ ಮಾಡಿದೆ. ಇದರಿಂದಾಗಿ ಭಾರತೀಯ ಪ್ರವಾಸಿಗರು ಕೂಡ ಪೇಮೆಂಟ್ ಮಾಡಿಕೊಳ್ಳಲು ಸಹಾಯವಾಗುತ್ತದೆ.

NPCI, ಪ್ರಮುಖ ಉದ್ದೇಶಗಳನ್ನು ಇಟ್ಟುಕೊಂಡು ಗೂಗಲ್ ಪೇ (Google Pay) ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪೇಮೆಂಟ್ ಸುಲಭಗೊಳಿಸಲು ಅನುಮೋದನೆ ನೀಡಿದೆ. ಇದರಿಂದಾಗಿ ಜನರು ಯಾವುದೇ ಭಾಗಕ್ಕೆ ಸುಲಭವಾಗಿ ಪ್ರಯಾಣಿಸಬಹುದು.

 

advertisement

 

ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ಯುಪಿಐ ಪೇಮೆಂಟ್ (UPI Payment) ಮಾದರಿಯನ್ನು ಪರಿಚಯಿಸುವ ಸಲುವಾಗಿ ಎನ್‌ಪಿಸಿಐ ಹೊಸ ಪೇಮೆಂಟ್ ಮೆಥಡ್ ಜಾರಿಗೆ ತಂದಿದೆ. ಇದರಿಂದಾಗಿ ಇತರ ದೇಶಗಳಲ್ಲಿಯೂ ಕೂಡ ಭಾರತೀಯ ಪ್ರವಾಸಿಗರು ಸುಲಭವಾಗಿ ಯುಪಿಐ ಪೇಮೆಂಟ್ ಮಾಡಲು ಗೂಗಲ್ ಪೇ ಬೆಂಬಲ ನೀಡುತ್ತದೆ.

ಇತರ ದೇಶದಲ್ಲಿ ಯುಪಿಐ ಪೇಮೆಂಟ್ (UPI Payment) ಮಾದರಿಯನ್ನು ರಿಯಾಯಿತಿ ದರದಲ್ಲಿ ಬಳಕೆ ಮಾಡಿಕೊಳ್ಳಬಹುದು. ಪ್ರದೇಶಗಳಲ್ಲಿ ಯುಪಿಐ ಪೇಮೆಂಟ್ ಮೂಲಸೌಕರ್ಯವನ್ನು ಒದಗಿಸಿಕೊಡುವುದು ಈ ಒಪ್ಪಂದದ ಮೂಲ ಉದ್ದೇಶವಾಗಿದೆ. ವಿದೇಶದಲ್ಲಿಯೂ ಕೂಡ ಭಾರತೀಯ ಪೇಮೆಂಟ್ ಮಾಡಲು ಯುಪಿಐ ಬಳಸಿಕೊಳ್ಳಬಹುದು. ಇದರಿಂದ ಭಾರತೀಯರಿಗೆ ಹಾಗೂ ವಿದೇಶಿಕರಿಗೆ ಇಬ್ಬರಿಗೂ ಕೂಡ ಲಾಭ ಸಿಗಲಿದೆ.

ಗೂಗಲ್ ಪೇ ಫೋನ್ ಪೇ ಪೇಟಿಎಂ ಮೊದಲದ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳ ಮೂಲಕ ಯುಪಿಐ ಪೇಮೆಂಟ್ ಅನ್ನು ವಿದೇಶದಲ್ಲಿಯೂ ಕೂಡ ಇನ್ನು ಮುಂದೆ ಬಳಸಿಕೊಳ್ಳಬಹುದು ಹಾಗೂ ಇದರ ಜೊತೆಗೆ ಇನ್ನಷ್ಟು ಪ್ರಯೋಜನಗಳನ್ನು ಕೂಡ ನೀಡಲು ಕಾರ್ಯಯೋಜಿಸಲಾಗಿದೆ.

advertisement

Leave A Reply

Your email address will not be published.