Karnataka Times
Trending Stories, Viral News, Gossips & Everything in Kannada

Gold Loan: ದೇಶಾದ್ಯಂತ ಗೋಲ್ಡ್ ಲೋನ್ ಮಾಡುವವರಿಗೆ ಹೊಸ ರೂಲ್ಸ್!

advertisement

ಇಂದು ಚಿನ್ನ ಅಮೂಲ್ಯ ವಾದ ವಸ್ತುವಾಗಿದ್ದು ಚಿನ್ನದ ಬೇಡಿಕೆ ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಬಂದಿದೆ. ಚಿನ್ನದ ಬೆಲೆ ಹೆಚ್ಚಾದರೂ ಇಂದು ಖರೀದಿ ಮಾಡುವ ಸಂಖ್ಯೆ ಕಡಿಮೆ ಯಾಗಿಲ್ಲ.‌ ಅಷ್ಟು ಬೇಡಿಕೆಯನ್ನು‌ ಹೊಂದಿರುವ ಪ್ರಮುಖ ವಸ್ತುವಾಗಿದೆ. ಕಷ್ಟದ ಸಮಯದಲ್ಲಿಯು ಚಿನ್ನ ಬಹಳಷ್ಟು ಕೈ ಹಿಡಿಯಲಿದೆ. ಹಾಗಾಗಿ ಚಿನ್ನ ತೊಡುವ ಉದ್ದೇಶ ಮಾತ್ರವಲ್ಲ.‌ ಆರ್ಥಿಕತೆಯ ಮೂಲ ಉದ್ದೇಶ ಕೂಡ ಆಗಿದೆ.

ಚಿನ್ನದ ಸಾಲ (Gold Loan) ಉತ್ತಮ

ಇಂದು ಅಗತ್ಯವಾಗಿ ಹಣ ಬೇಕು ಅಂದಾಗ ಹಲವಾರು ವಿಭಿನ್ನ ಸಾಲದ ಆಯ್ಕೆ ಇದ್ದರು ಚಿನ್ನದ ಸಾಲವೇ (Gold Loan) ಆಯ್ದು ಕೊಳ್ಳುತ್ತಾರೆ.‌ ಯಾಕಂದರೆ ಚಿನ್ನದ ಮೇಲೆ ಸಾಲವನ್ನು ತೆಗೆದುಕೊಳ್ಳುವುದು ಸುರಕ್ಷಿತ ಮತ್ತು ಬಡ್ಡಿಯು‌ ಕೂಡ ಕಡಿಮೆ ಯಾಗಿದೆ.ಹಣ ಕಾಸಿನ‌ ಅಗತ್ಯ ಇದ್ದ ಸಂದರ್ಭದಲ್ಲಿ ನೀವು ಕಡಿಮೆ ಬಡ್ಡಿದರದಲ್ಲಿ ಚಿನ್ನದ ಮೇಲೆ ಸಾಲವನ್ನು ಪಡೆಯಲು ಅವಕಾಶ ಇದೆ.

Image Source: Studycafe

advertisement

ಬಡ್ಡಿ ಕಡಿಮೆ

ಚಿನ್ನದ ಸಾಲದ ಬಡ್ಡಿ ದರವು ಇತರ ಸಾಲಗಳಿಗೆ ಹೋಲಿಸಿದರೆ ಕಡಿಮೆ.ಅದೇ ರೀತಿ‌ ಚಿನ್ನದ ಸಾಲದ ಪ್ರಕ್ರಿಯೆ ಸುಲಭ ವಾಗಿದ್ದು ಮರು ಪಾವತಿಯು ಅನುಕೂಲಕರ. ಚಿನ್ನದ ಸಾಲದ ಮೊತ್ತವು ನೀವು ಅಡಮಾನ ಇಟ್ಟಿರುವ ಚಿನ್ನದ ಮೇಲೆ ಅವಲಂಬಿಸಿರುತ್ತದೆ.

ಯಾಕಾಗಿ ಆಯ್ಕೆ ಮಾಡಬೇಕು?

  • ಮದುವೆಯ ವೆಚ್ಚಗಳಿಗಾಗಿ ಇತರ ಬ್ಯಾಂಕ್ ನಲ್ಲಿ ಸಾಲ ಸಿಗುವುದು‌ಕಷ್ಟ. ಇಂತಹ ಸಂದರ್ಭದಲ್ಲಿ ‌ ಚಿನ್ನವನ್ನು ಅಡವಿಟ್ಟು ಕಡಿಮೆ ಬಡ್ಡಿಗೆ ಸಾಲ ಪಡೆಯುವುದು ಉತ್ತಮ
  • ಕೆಲವೊಮ್ಮೆ ತುರ್ತು ವೈದ್ಯಕೀಯ ಸಂದರ್ಭದಲ್ಲಿ ಅಲ್ಪಾವಧಿಯಲ್ಲಿ ಸಾಲ ಸಿಗದ ಸಂದರ್ಭದಲ್ಲಿ ಚಿನ್ನದ ಸಾಲ ಪಡೆಯಬಹುದು‌
  • ಉದ್ಯೋಗ ಮಾಡುವ ವ್ಯಾಪಾರಸ್ಥರಿಗೆ ನಗದು ಅವಶ್ಯಕತೆ ಇರುತ್ತದೆ.ಅಂತಹ ಸಂದರ್ಭಗಳಲ್ಲಿ ಚಿನ್ನದ ಸಾಲವೇ ಸೂಕ್ತ.
  • ಶಿಕ್ಷಣಕ್ಕೂ‌ ಕೂಡ ಚಿನ್ನದ ಸಾಲ ಉತ್ತಮ
  • ಮನೆಯನ್ನು ನವೀಕರಿಸಲು ಚಿನ್ನದ ಮೇಲೆ ಸಾಲವನ್ನು ತೆಗೆದು ಕೊಳ್ಳುವುದು ಉತ್ತಮ
  • ಕೃಷಿಗೂ ಸಾಕಷ್ಟು ಹೂಡಿಕೆಯ ಅಗತ್ಯವಿದ್ದು ಚಿನ್ನದ ಸಾಲ ಉತ್ತಮ
  • ವಾಹನವನ್ನು ಖರೀದಿ ಮಾಡಲು ಚಿನ್ನದ ಸಾಲ ಉತ್ತಮ

advertisement

Leave A Reply

Your email address will not be published.