Karnataka Times
Trending Stories, Viral News, Gossips & Everything in Kannada

Profitable Crop: ಒಂದೇ ಗಿಡದಲ್ಲಿ 40,000 ಆದಾಯ! ಈ ಕೃಷಿ ಮಾಡಿ ಲಾಭ ಗಳಿಸಿ

advertisement

ಇಂದು ಬದುಕು ಆಧುನಿಕತೆಯಾದರೂ ಕೃಷಿ ಬಗ್ಗೆ ಆಸಕ್ತಿ ಕಡಿಮೆ ಯಾಗಿಲ್ಲ‌.ಭಾರತದಲ್ಲಿ ಕೃಷಿಗೆ ಅತೀ ಹೆಚ್ಚಿನ ಒಲವು ‌ತೋರಿಸುವ ಜನರಿದ್ದೂ ಕೃಷಿಯಲ್ಲಿ ಲಾಭ ವಾದರೂ ನಷ್ಟ ವಾದರೂ ಪ್ರೀತಿಯಿಂದ ಗಿಡಗಳನ್ನು ಪೋಷಿಸಿ ಸಲಹೆ ಮಾಡುತ್ತಾರೆ.‌ಕೃಷಿ ಅಂತ ಬಂದಾಗ ಹಲವು ರೀತಿಯ ಪದ್ದತಿ ಇದ್ದು ತೆಂಗು,ಕಂಗು,ತರಕಾರಿ, ಹಣ್ಣು ಡ್ರೈ ಪ್ರೂಟ್ಸ್ ಇತ್ಯಾದಿ ಹಲವು ಬಗೆಯ ಕೃಷಿಯತ್ತ ಜನರು‌ಒಲವು ತೋರಿಸುತ್ತಾರೆ . ಅದೇ ರೀತಿ ಈ ಕೃಷಿಯನ್ನು ನೀವು ಮಾಡುವ ಮೂಲಕ ಒಂದೇ ಗಿಡದಲ್ಲಿ ನೀವು 40 ಸಾವಿರದ ವರೆಗೆ ಆದಾಯವನ್ನು ಪಡೆಯಬಹುದಾಗಿದೆ.

ಖರ್ಜೂರ ಕೃಷಿ?

ಕೇವಲ ಮರಳುಗಾಡಿನಲ್ಲಿ ಮಾತ್ರವೇ ಬೆಳೆಯುವ ಈ ಪೌಷ್ಠಿಕಾಂಶವುಳ್ಳ ಈ ಖರ್ಜೂರವನ್ನು ನಮ್ಮ ರಾಜ್ಯದಲ್ಲೂ ಬೆಳೆದು‌ಕೂಡ ಹೆಚ್ಚಿನ‌ ಲಾಭ ವನ್ನು ಗಳಿಸಬಹುದಾಗಿದೆ. ಖರ್ಜೂರದ ಸೇವನೆ ಆರೋಗ್ಯಕರ, ಪ್ರಪಂಚದಾದ್ಯಂತ ಖರ್ಜೂರವನ್ನು ಬಹಳಷ್ಟು ಮಾರಾಟ ಮಾಡಲಾಗುತ್ತಿದ್ದು ಅನೇಕ ದೇಶಗಳು ಖರ್ಜೂರವನ್ನು ಮಾರಾಟ ಮಾಡುವ ಮೂಲಕ ಬಹಳಷ್ಟು ಲಾಭ ವನ್ನು ಗಳಿಸುತ್ತಿದೆ.

ಪರ್ಯಾಯ ಬೆಳೆಯು ಹಾಕಬಹುದು

ಖರ್ಜೂರದ ಜತೆಗೆ ಇತರ ಹಣ್ಣುಗಳನ್ನು ಕೂಡ ನೀವು ಪರ್ಯಾಯ ವಾಗಿ ಬೆಳೆಯಬಹುದಾಗಿದೆ. ನೇರಳೆ, ಸೀಬೆ, ಕಬ್ಬು ಸೇರಿದಂತೆ ನಾನಾ ಹಣ್ಣುಗಳನ್ನು ತೋಟದಲ್ಲಿ ನೀವು ಬೆಳೆಯ ಬಹುದಾಗಿದೆ. ಖರ್ಜೂರಕ್ಕೆ ಮರಳುಮಿಶ್ರಿತ ಭೂಮಿಯೇ ಬೇಕು ಅಂತೇನೂ ಇಲ್ಲ. ಕರ್ನಾಟಕದಲ್ಲಿಯು ಬೆಳೆದು ಲಾಭ ಗಳಿಸಿದ ಬಹಳಷ್ಟು ಮಂದಿ ರೈತರು ಇದ್ದಾರೆ.

advertisement

Image Source: GIPS

ಕೃಷಿ ಹೇಗೆ?

ಖರ್ಜೂರದ ಬರ್ಹಿ ಅನ್ನೋ ತಳಿ ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಸಲೀಸಾಗಿ ಬೆಳೆಯುತ್ತದೆ.ಒಮ್ಮೆ ಇದನ್ನು ನೆಟ್ಟರೆ 35-40 ವರ್ಷದವರೆಗೆ ಉತ್ತಮ ಫಸಲು ಪಡೆಯಬಹುದಾಗಿದೆ.ಸುಮಾರು 100 ಖರ್ಜೂರ ಗಿಡಗಳಿದ್ದರೂ 3 ರಿಂದ 4 ಟನ್ ವರೆಗೆ ಖರ್ಜೂರ ಹಣ್ಣು ಸಿಗಲಿದ್ದು ರೈತರು ವರ್ಷಕ್ಕೆ 10 ಲಕ್ಷ ರೂ. ಆದಾಯ ಗಳಿಸಬಹುದು. ಪ್ರತಿ ವರ್ಷದ ಜುಲೈ ಮತ್ತು ಆಗಸ್ಟ್ ವೇಳೆಗೆ ಖರ್ಜೂರ ಕಟಾವಿಗೆ ಬರಲಿದ್ದು ಹೆಚ್ಚಿನ ಲಾಭವನ್ನು ನೀವು ಗಳಿಸಬಹುದಾಗಿದೆ.

ಹೀಗೆ ಮಾಡಿ

ಖರ್ಜೂರ ಮೂಲತಃ ತಾಳೆ ಜಾತಿಗೆ ಸೇರಿದ ಗಿಡ ವಾಗಿದ್ದು ಖರ್ಜೂರದ ಕೃಷಿಗೆ ಸಾಕಷ್ಟು ಬಿಸಿಲು ಮತ್ತು ಕಡಿಮೆ ಮಳೆಯ ಅಗತ್ಯವಿರುತ್ತದೆ.ಇದಕ್ಕೆ ಬೇಕಾದ ಮಣ್ಣಿನ ಹೊಂಡಗಳನ್ನು ತೆಗೆಯುವ ಮೂಲಕ ಸಸಿ ದೊಡ್ಡದಾಗುತ್ತ ಬರುತ್ತಿದ್ದಂತೆ ಜೀವಾಮೃತ ಹಾಕಿದರೆ ಉತ್ತಮ ಫಸಲು ನೀಡಲಿದೆ.ಇದಕ್ಕೆ ಕ್ರೀಮಿ ಕೀಟಗಳ ಭಾದೆಯು ಕಡಿಮೆ ಇರಲಿದೆ.

advertisement

Leave A Reply

Your email address will not be published.