Karnataka Times
Trending Stories, Viral News, Gossips & Everything in Kannada

HSRP: ವಾಹನ ಸವಾರರಿಗೆ ನಂಬರ್ ಪ್ಲೇಟ್ ಹಾಕಿಸುವ ಅವಧಿ ವಿಸ್ತರಣೆ, ಈ ದಿನದವರೆಗೆ ಅವಕಾಶ!

advertisement

ಇಂದು ವಾಹನಗಳು ಪ್ರತಿಯೊಬ್ಬರಿಗೂ ಅಗತ್ಯ ವಸ್ತು. ಆದೇ ರೀತಿ ರಸ್ತೆಯಲ್ಲಿ ಚಲಿಸುವ ವಾಹನಗಳ ಸಂಖ್ಯೆ ಯು ಇಂದು ಅಧಿಕ ವಾಗಿದೆ. ಹೀಗಾಗಿ ವಾಹನ ಸಾವರರಿಗೆ ಸಾರಿಗೆ ಇಲಾಖೆಯು ಅನೇಕ ನೀತಿ ನಿಯಮಗಳನ್ನು ಜಾರಿಗೆ ತರುತ್ತಲೆ ಇದೆ.ಅದೇ ರೀತಿ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಹಾಕಿಸುವ ಸುದ್ದಿ ಬಹಳಷ್ಟು ಜೋರಾಗಿತ್ತು. ಇದೀಗ ವಾಹನ ಸವಾರರಿಗೆ ನಂಬರ್ ಪ್ಲೇಟ್ ಹಾಕಿಸುವ ಬಗ್ಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಿದೆ.

ಕಡ್ಡಾಯ ಮಾಡಲಾಗಿತ್ತು:

ಹಳೆಯ ನಂಬರ್‌ ಪ್ಲೇಟ್‌ಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ (HSRP) ಅಳವಡಿಕೆ ಕಡ್ಡಾಯ.ಒಂದು ವೇಳೆ ಈ ಹೆಚ್‌ಎಸ್‌ಆರ್‌ಪಿ ವಾಹನಗಳಿಗೆ ಮಾಡದೇ ಇದ್ದಲ್ಲಿ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, Fake RC, Insurance ಹಾಗೂ ಇನ್ನಿತರ ಯಾವುದೇ ವಾಹನದ ಡ್ಯಾಕುಮೆಂಟ್ ಮಾಡಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕ ವಾಹನಗಳ ಸುರಕ್ಷತೆ ನಿಟ್ಟಿನಲ್ಲಿ ಅಪರಾಧ ತಡೆಗೆ ಈ ನಿಯಮ ಜಾರಿಗೆ ತಂದಿದೆ.

ತಾಂತ್ರಿಕ ಸಮಸ್ಯೆ:

ನೀವು ಅಳವಡಿಕೆ ಮಾಡಿರುವ ಈ HSRP ನಂಬರ್ ಪ್ಲೇಟ್‌ನಲ್ಲಿ ನಿಮ್ಮ ವಾಹನದ ಕಾರು/ಬೈಕ್ ಬಗ್ಗೆ ಸಂಪೂರ್ಣ ಎಲ್ಲ ಮಾಹಿತಿ ಇರುತ್ತದೆ. 2019ರ ಏಪ್ರಿಲ್ ತಿಂಗಳ ಮೊದಲು ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ HSRP Number Plate ಹಾಕಿಸಿ ಕೊಳ್ಳುವುದು ಕಡ್ಡಾಯವಾಗಿದೆ. ಈ ಹಿಂದೆಯೂ ಕೂಡ ಹಳೇ ವಾಹನಗಳಿಗೆ HSRP ಅಳವಡಿಸಲು ಸಾರಿಗೆ ಇಲಾಖೆ ಅನೇಕ ಸಲ ಮಾಹಿತಿ ನೀಡಿತ್ತು.‌ ಈ ಭಾರಿಯು ಗಡುವು ನಿಗದಿ ಮಾಡಿತ್ತು. ಆದರೆ ಈ ನೊಂದಣಿಗೆ ತಾಂತ್ರಿಕ ಸಮಸ್ಯೆ ಹೆಚ್ಚಾಗಿದ್ದು ಅದನ್ನು ವಿಸ್ತರಿಸುವಂತೆ ವಾಹನ ಮಾಲೀಕರು ಒತ್ತಾಯ ಮಾಡಿದ್ದರು.

advertisement

ಸಮಯ ವಿಸ್ತರಣೆ:

 

 

ಈ ಬಗ್ಗೆ ಸಾರಿಗೆ ಸಚಿವರು ಮಾಹಿತಿ ನೀಡಿದ್ದು, HSRP Number Plate ಅಳವಡಿಕೆಗಾಗಿ ಫೆಬ್ರವರಿ 17 ರ ವರೆಗೆ ಸಮಯ ನೀಡಲಾಗಿದ್ದು ಈಗ ಮುಂದೂಡಿಕೆ ಮಾಡಲಾಗಿದೆ 3 ತಿಂಗಳ ವರೆಗೆ ಸಮಯವಕಾಶ ನೀಡುದಾಗಿ ಹೇಳಿದ್ದಾರೆ. ಈ ಹಿಂದೆ ನಂಬರ್ ಪ್ಲೇಟ್ ಹಿನ್ನೆಲೆ ಸರಿಯಾದ ಸಮಯಕ್ಕೆ ಮಾಡದೇ ಇದ್ದಲ್ಲಿ ಒಂದು ಸಾವಿರ ರೂಪಾಯಿ ದಂಡ ಗ್ಯಾರಂಟಿ ಎಂಬುದು ಕೂಡ ವಾಹನ ಸವಾರರಿಗೆ ತಿಳಿಸಲಾಗಿತ್ತು. ಇನ್ನೂ ವಾಹನ ಸವಾರರು ಎಚ್‌ ಎಸ್‌ಆರ್‌ಪಿ ನಂಬರ್ ಪ್ಲೇಟ್ ಮಾಡಿಸಲು ಸಾರಿಗೆ ಇಲಾಖೆ ಲಿಂಕ್ ಮೂಲಕ https://transport.karnataka.gov.in ಅಥವಾ www.siam.in ಮೂಲಕ ನೋಂದಣಿ ಮಾಡಬಹುದಾಗಿದೆ

ಹೆಚ್‌ಎಸ್‌ಆರ್‌ಪಿ (HSRP) ಎಂದರೇನು?

ಇದು ವಾಹನಗಳ ನೋಂದಣಿ ಕ್ರಿಯೆ ಆಗುದ್ದು ಇದರಲ್ಲಿ ನಂಬರ್ ಪ್ಲೇಟ್ ಅಳವಡಿಸಲಾಗುತ್ತದೆ. ಹೈ ಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್‌ ಸೆಕ್ಯೂರ್ ಆದ ಗುರುತಿನ ನಂಬರ್ ಆಗಿರುತ್ತದೆ.ಇದು ಅಲ್ಯೂಮಿನಿಯಂ ಲೋಹದಲ್ಲಿ ತಯಾರಿಸಿದ ನಂಬರ್ ಪ್ಲೇಟ್‌ ಆಗಿದ್ದು ಬಳಕೆಯಿಲ್ಲದ ಎರಡು ಲಾಕ್‌ಗಳನ್ನು ಹೊಂದಿದೆ.ಇದನ್ನು ಸುರಕ್ಷತೆ ದೃಷ್ಟಿಯಿಂದ ಅಳವಡಿಸಲಾಗಿರುತ್ತದೆ. ಮುಂಭಾಗದ ಮತ್ತು ಹಿಂಭಾಗದ ನಂಬರ್ ಪ್ಲೇಟ್‌ನ ಎಡಬದಿಯ ಮೇಲೆ ಕ್ರೋಮಿಯಂ ಹಾಲೋಗ್ರಾಂ ಹೊಂದಿದ್ದು, ಅದರಲ್ಲಿ ಆಶೋಕಚಕ್ರದ ಚಿತ್ರಣ ಕೂಡ ಇದೆ.

advertisement

Leave A Reply

Your email address will not be published.