Karnataka Times
Trending Stories, Viral News, Gossips & Everything in Kannada

HSRP: ಹಳೆ ವಾಹನಕ್ಕೆ ಎಚ್ಎಸ್ಆರ್ ಪಿ ಕಡ್ಡಾಯ, ಪಾಲನೆ ಮಾಡದಿದ್ದರೆ ದೊಡ್ಡ ಮೊತ್ತದ ದಂಡ ಬರಿಸಲೇಬೇಕು!

advertisement

ಸಂಚಾರ ವ್ಯವಸ್ಥೆ ಸುಸ್ಥಿತಿಯಲ್ಲಿ  ಇಡುವ ಜೊತೆಗೆ ವಾಹನ ಸವಾರರಿಗೆ ಅಪಘಾತ ಸಾಂಭವ್ಯ ತಪ್ಪಿಸುವ ಉದ್ದೇಶದಿಂದ ಹಳೆ ವಾಹನಗಳಿಗೆ ಸುರಕ್ಷತಾ ದೃಷ್ಟಿಯಿಂದ HSRP Number Plate ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದ್ದು ಇನ್ನು ಮುಂದೆ ನಿಗಧಿತ ದಿನಾಂಕದ ಒಳಗೆ ಹಳೆ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡಲೇ ಬೇಕು ಒಂದು ವೇಳೆ ನೀವು ಹಳೆ ವಾಹನ ಸವಾರರಾಗಿದ್ದು ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಹೋದರೆ ಯಾವ ರೀತಿಯಾದ ಸಮಸ್ಯೆ ಕಾಡಲಿದೆ ಎಂದು ಈ ಲೇಖನದ ಮೂಲಕ ನಾವಿಂದು ತಿಳಿಸಲಿದ್ದೇವೆ.

What is HSRP?

 

 

ವಾಹನಗಳ ವಿಚಾರದಲ್ಲಿ ಇಂತಿಷ್ಟು ವರ್ಷಕ್ಕಿಂತ ಅಧಿಕ ಬಳಸಿದ್ದ ವಾಹನಗಳಿಗೂ ಕೂಡ ನಿರ್ದಿಷ್ಟ ನೀತಿ ನಿರ್ಬಂಧಗಳನ್ನು ವಿಧಿಸಲಾಗುತ್ತಿದ್ದು ಅದಕ್ಕಾಗಿಯೇ HSRP Number Plate ಅಳವಡಿಕೆಯನ್ನು ಕಡ್ಡಾಯಮಾಡಲಾಗಿದೆ. ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಎಂದು ಕರೆಯಲಾಗುತ್ತದೆ ಅಂದರೆ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಎಂಬ ಹೆಸರಿನ ಮೂಲಕ ಕರೆಯಲಾಗುತ್ತದೆ. 2019ಕ್ಕಿಂತ ಹಳೆ ಮಾಡಲ್ ಗಾಡಿಗಳಿಗೆ ಎಚ್ ಎಸ್ ಆರ್ ಪಿ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ.

advertisement

ಈ ವಾಹನಗಳಿಗೆ ನಿಯಮ ಕಡ್ಡಾಯ:

ಹಳೆ ಮಾಡೆಲ್ ಗಾಡಿಗಳ ಸಾಲಿನಲ್ಲಿ ಲಘು ಮೋಟಾರ್ , ವಾಣಿಜ್ಯ ವಾಹನ, ಟ್ರ್ಯಾಕ್ಟರ್ ಎಲ್ಲ ಕೂಡ ಅತಿ ಸುರಕ್ಷಿತ ನೋಂದಣಿ ಫಲಕವಾದ (HSRP) ಅಳವಡಿಕೆಯನ್ನು ಇದೇ ಎಪ್ರಿಲ್ ಒಂದರೊಳಗಾಗಿ ಕಡ್ಡಾಯವಾಗಿ ಮಾಡಿಸಲೇ ಬೇಕು ಎಂಬ ನಿಯಮ ಇದೆ. ಸಾರಿಗೆ ಇಲಾಖೆ ಫೆಬ್ರವರಿ 17ರ ಒಳಗೆ ನೋಂದಣಿ ಮಾಡಿಸಲು ಗಡುವು ನೀಡಲು ಮುಂದಾಗಿದೆ. ಹಾಗಿದ್ದರೂ ವಾಹನ ಮಾಲಿಕರು ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ಹೊಸ ಕ್ರಮಕ್ಕೆ ಸಹ ಮುಂದಾಗಿದೆ.

ನಿಯಮ ಪಾಲಿಸದಿದ್ದರೆ ಏನಾಗುವುದು?

ಅಳವಡಿಸದೇ ಇದ್ದರೆ ಆಗ ವಾಹನ ಹೆಸರು ನೋಂದಣಿ, ಮಾರಾಟ ಪ್ರಕ್ರಿಯೆ, ವಿಳಾಸ ಬದಲಾವಣೆ, ಅರ್ಹತಾ ಪತ್ರ ನವೀಕರಣ ಇತ್ಯಾದಿ ಪ್ರಕ್ರಿಕೆ ಮಾಡಲು ಸಾಧ್ಯವಿಲ್ಲ. ಇತ್ತೀಚಿನ ದಿನದಲ್ಲಿ ನಕಲಿ ತಾಣಗಳ ಸಂಖ್ಯೆ ಅಧಿಕವಾದ ಹಿನ್ನೆಲೆಯಲ್ಲಿ  ಇದಕ್ಕೂ ಕೂಡ ಕೆಲ ನಿರ್ದಿಷ್ಟವಾದ ಮಾನದಂಡಗಳನ್ನು ತಿಳಿಸಲಾಗಿದೆ. ಇಂಡಿಯಾ, ಹಲೋಗ್ರಾಮ್ ಇರುವ ಎಚ್ಎಸ್ಆರ್ ಪಿ  ಯನ್ನು ಯಾವುದೇ ಕಾರಣಕ್ಕೂ ಮಾನ್ಯ ಮಾಡಲಾಗದು.

advertisement

Leave A Reply

Your email address will not be published.