Karnataka Times
Trending Stories, Viral News, Gossips & Everything in Kannada

PhonePe: ಆಧಾರ್ ಕಾರ್ಡ್ ಅನ್ನು ಬಳಸಿ PhonePe UPI ಅನ್ನು ಸಕ್ರಿಯಗೊಳಿಸುವ ಸುಲಭ ವಿಧಾನ ಇಲ್ಲಿದೆ!

advertisement

ಇಂದು ಆಧಾರ್ ಕಾರ್ಡ್ (Aadhaar Card) ಬಳಕೆ ಎಲ್ಲೆಲ್ಲಾ ಚಾಲ್ತಿ ಯಲ್ಲಿದೆ ಎಂಬುಂದು ಪ್ರತಿಯೊಬ್ಬ ವ್ಯಕ್ತಿಗೂ ತಿಳಿದೆ ಇದೆ.ಬಸ್ ಪ್ರಯಾಣದಿಂದ ಹಿಡಿದು ರೇಷನ್ ಖರೀದಿ ವರೆಗೂ ಈ ಆಧಾರ್ ಕಾರ್ಡ್ ಬಹಳಷ್ಟು ಪ್ರಮುಖ ವೆನಿಸಿದೆ.ಅದೇ ರೀತಿ ಇಂದು ಬ್ಯಾಂಕಿನ ವಹಿವಾಟುಗಳಿಗೂ ಈ ಕಾರ್ಡ್ ಪ್ರಮುಖ ವೆನಿಸಿದೆ. ಇಂದು ಡಿಜಿಟಲ್ ಪಾವತಿಯತ್ತ ಹೆಚ್ಚಿನ ಜನರು ಮುಖ ಮಾಡಿದ್ದು ಬ್ಯಾಂಕ್ ಖಾತೆಗೂ ಆಧಾರ್ ಲಿಂಕ್ ಪ್ರಮುಖ ಎನಿಸಿದೆ. ಇದೀಗ ಆಧಾರ್ ಕಾರ್ಡ್ ಬಳಸಿಯು ನೀವು ಪೋನ್ ಪೇ ಸಕ್ರಿಯ ಗೊಳಿಸಬಹುದು.ಈ ಬಗ್ಗೆ ಮಾಹಿತಿ ಇಲ್ಲಿದೆ.

ಯುಪಿಐ ಆ್ಯಕ್ಟೀವ್:

ಯುಪಿಐ ನ ದೃಢೀಕರಣ ಪೂರ್ಣಗೊಳಿಸಲು UIDAI ಮತ್ತು ಬ್ಯಾಂಕ್‌ಗಳಿಂದ OTP ಬರಲಿದ್ದು ಈ ಎರಡೂ OTP ಗಳನ್ನು ಯಶಸ್ವಿಯಾಗಿ ನಮೂದಿಸುವ ಮೂಲಕ‌ ಗ್ರಾಹಕರ ಬ್ಯಾಂಕ್ ಖಾತೆಯು UPI ಸೇವೆಗೆ ಆಕ್ಟಿವೇಟ್ ಮಾಡಲಿದೆ.

ಓಟಿಪಿ ಬಳಸಿ ಸಕ್ರಿಯ ಗೊಳಿಸಿ:

advertisement

ಆಧಾರ್ ಕಾರ್ಡ್ ಬಳಸಿಕೊಂಡು OTP ದೃಢೀಕರಣವನ್ನು ಮಾಡಿಕೊಂಡು ನೀವು ಪೋನ್ ಪೇ ಬಳಕೆ ಮಾಡಬಹುದು. ಇದಕ್ಕಾಗಿ ನಿಮಗೆ ಡೆಬಿಟ್ ಕಾರ್ಡ್‌ (Debit Card) ನ ಅವಶ್ಯಕತೆ ಬೇಕಾಗಿಲ್ಲ. ಇಂದು ಆಧಾರ್ ಕಾರ್ಡ್ ಇ-ಕೆವೈಸಿಯು ಅಗತ್ಯವಾಗಿದ್ದು ಬಳಕೆದಾರರು ಈ‌ಮೂಲಕ ಡಿಜಿಟಲ್ ವಹಿವಾಟುಗಳನ್ನು ಸರಳಗೊಳಿಸುವ ಮೂಲಕ ಎಲ್ಲಾ UPI ವೈಶಿಷ್ಟ್ಯಗಳನ್ನು ಪಡೆಯಬಹುದಾಗಿದೆ‌

ಹೀಗೆ ಮಾಡಿ:

 

 

ಮೊದಲಿಗೆ ನಿಮ್ಮ ಪೋನ್ ನಲ್ಲಿ ಪೋನ್ ಪೇ (PhonePe) ಅಪ್ಲಿಕೇಶನ್ ತೆರೆಯಿರಿ. ತದನಂತರ PhonePe ಪ್ರೊಫೈಲ್ ಪುಟಕ್ಕೆ ಹೋಗಿ ಪೇಮೆಂಟ್ ಇನ್ಟ್ರುಮೆಂಟ್ ಎಂಬ ಆಯ್ಕೆ ಕಾಣಿಸುತ್ತದೆ. ಇದರಲ್ಲಿ ನಿಮ್ಮ ಬ್ಯಾಂಕ್ ಅನ್ನು ಆಯ್ಕೆಮಾಡಿ ಮತ್ತು OTP ದೃಢೀಕರಣವನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ PhonePe ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಖಚಿತ ಪಡಿಸಿಕೊಳ್ಳುತ್ತದೆ. ಇನ್ನೂ ನೀವು UPI ಪಿನ್ ಪಡೆಯಲು ಡೆಬಿಟ್ ಕಾರ್ಡ್ ವಿವರ ಅಥವಾ ಆಧಾರ್ ಕಾರ್ಡ್ ವಿವರದ ಆಯ್ಕೆ ಇರಲಿದ್ದು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ಆರು ಅಂಕೆಗಳನ್ನು ನಮೂದಿಸಿ. ತದನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ. OTP ಅನ್ನು ಸಲ್ಲಿಸಿ ನಿಮ್ಮ UPI ಪಿನ್ ಅನ್ನು ಸೇರಿಸಿ ಸಕ್ರಿಯ ಗೊಳಿಸಿ.

advertisement

Leave A Reply

Your email address will not be published.