Karnataka Times
Trending Stories, Viral News, Gossips & Everything in Kannada

Aadhaar Card: ನಿಮ್ಮ ಬಳಿ ಇರುವ ಆಧಾರ್ ಅಸಲಿಯೇ ನಕಲಿಯೇ ಎಂದು ಪರೀಕ್ಷಿಸಿಕೊಳ್ಳಿ, ಬಹಳ ಸುಲಭದ ದಾರಿ ಇಲ್ಲಿದೆ!

advertisement

ನಿಮ್ಮ ಗುರುತಿನ ಪ್ರಮುಖ ದಾಖಲೆ ಆಗಿ ಆಧಾರ್ ಕಾರ್ಡ್ (Aadhaar Card) ಅನ್ನು ಈಗ ಎಲ್ಲಾ ಕಡೆ ಕೇಳುತ್ತಾರೆ. ಅದೇ ರೀತಿ ನಿಮಗೂ ಯಾವುದಾದರೂ ವಹಿವಾಟು ಮಾಡಬೇಕು ಎಂದಾದಲ್ಲಿ ಇನ್ನೊಬ್ಬ ವ್ಯಕ್ತಿಯ ಆಧಾರ್ ಕಾರ್ಡನ್ನೇ ನೀವು ಅವನ ಗುರುತು ಆಗಿ ಪರಿಗಣಿಸಬೇಕಾಗುತ್ತದೆ. ಆದರೆ ನೀವು ನೀಡುತ್ತಿರುವ ಆಧಾರ್ ಕಾರ್ಡ್ ಅಥವಾ ನಿಮಗೆ ನಿಮ್ಮ ಮುಂದೆ ಇರುವ ವ್ಯಕ್ತಿ ನೀಡುತ್ತಿರುವ ಆಧಾರ್ ಕಾರ್ಡ್ ಅಸಲಿಯೇ ಅಥವಾ ನಕಲಿಯೇ ಎಂದು ಹೇಗೆ ತಿಳಿದುಕೊಳ್ಳಬಹುದು ? ಈ ಬಗ್ಗೆ ನಿಮಗೆ ತಿಳಿದಿಲ್ಲ ಎಂದಾದಲ್ಲಿ ತಿಳಿದುಕೊಳ್ಳುವುದು ಬಹಳ ಅಗತ್ಯ.

ಬೇರೆಯವರು ನೀಡಿರುವ ಆಧಾರ್ ನ ಬಗ್ಗೆ ಮಾತ್ರವಲ್ಲದೆ ನಿಮ್ಮಲ್ಲಿರುವ ನಿಮ್ಮ ಕಾರ್ಡ್ ಕೂಡ ಅಸಲಿಯೇ ನಕಲಿಯೇ ತಿಳಿದುಕೊಳ್ಳಬೇಕು. ಇದು ಮುಂದೆ ಆಗುವ ಸಮಸ್ಯೆಗಳನ್ನು ಈಗಲೇ ನಿವಾರಿಸುತ್ತದೆ. ನಿಮ್ಮ ಕಾರ್ಡ್ ನಲ್ಲಿ ಇರುವ ಎಲ್ಲಾ ಮಾಹಿತಿಗಳು ಸರ್ಕಾರಿ ದಾಖಲೆಗಳಲ್ಲಿಯೂ ಒಳಗೊಂಡಿದೆಯೇ ಎಂದು ಪರೀಕ್ಷಿಸುವುದು ಬಹಳ ಮುಖ್ಯ ಆಗುತ್ತದೆ. ಹೀಗೆ ನಿಮ್ಮಲ್ಲಿರುವ ಆಧಾರ್ ಕಾರ್ಡ್ (Aadhaar Card) ಅಸಲಿಯೇ ಅಥವಾ ನಕಲಿಯೇ ಎಂದು ಈ ರೀತಿ ಪರೀಕ್ಷಿಸಬಹುದು.

advertisement

ಈ ಬಗ್ಗೆ ಪರಿಶೀಲಿಸುವುದು ಬಹಳ ಸುಲಭದ ಕೆಲಸ ಆಗಿದ್ದು ಈ ಕೆಳಗಿನ ಕೆಲವು ಹಂತಗಳನ್ನು ಪಾಲಿಸಿದರೆ ಅಸಲಿಯತ್ತಿನ ಬಗ್ಗೆ ತಿಳಿಯುತ್ತದೆ.

• ಭಾರತದ ನಾಗರಿಕರಿಗೆ ಆಧಾರ್ ಕಾರ್ಡನ್ನು ನೀಡುವ ಯು ಐ ಡಿ ಎ ಐ ಅಧಿಕೃತ ವೆಬ್ ಸೈಟ್ ಆದ myaadhaar.uidai.gov.in/verifyAadhaar ಭೇಟಿ ನೀಡಿ
• ಮೊದಲು ಇಲ್ಲಿ ನೀವು ಲಾಗಿನ್ ಆಗಬೇಕಾಗುತ್ತದೆ
• 12 ಅಂಕೆಗಳ ನಿಮ್ಮ ಆಧಾರ್ ಕಾರ್ಡ್ ನ ನಂಬರನ್ನು ನಮೂದಿಸಿ ಲಾಗಿನ್ ಆಗಿ
• ನಿಮ್ಮ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಒಂದು ಓ ಟಿ ಪಿ ಬರುತ್ತದೆ
• ಒ ಟಿ ಪಿ ಯನ್ನು ಇಲ್ಲಿ ನಮೂದಿಸಿ ಲಾಗ್ ಇನ್ ಆಗಿ
• ಇದಾದ ನಂತರ ಸರ್ವಿಸಸ್ ನ ಆಯ್ಕೆ ಮೇಲೆ ಕ್ಲಿಕ್ ಮಾಡಿ
• ಇಲ್ಲಿ ಹಲವಾರು ಆಯ್ಕೆಗಳು ನಿಮ್ಮ ಮುಂದೆ ಬರುತ್ತವೆ, ಇಲ್ಲಿ ವೆರಿಫೈ ಆಧಾರ್ ನ ಮೇಲೆ ಕ್ಲಿಕ್ ಮಾಡಿ
• ಇಲ್ಲಿ ಇನ್ನೊಮ್ಮೆ ನಿಮ್ಮ ಬಳಿ ಆಧಾರ್ ನಂಬರನ್ನು ಕೇಳಲಾಗುತ್ತದೆ
• ನಂಬರ್ ಅನ್ನು ಭರ್ತಿ ಮಾಡಿ ಇದಾದ ನಂತರ ನಿಮ್ಮ ಮುಂದೆ ಹೊಸತೊಂದು ಪೇಜ್ ಓಪನ್ ಆಗುತ್ತದೆ
• ಅಲ್ಲಿ ನಿಮ್ಮ ಆಧಾರ್ ಅಸಲಿಯೇ ಅಥವಾ ನಕಲಿಯೇ ಎಂದು ಗೊತ್ತಾಗುತ್ತದೆ.

ನಮ್ಮ ಬಳಿ ದಾಖಲೆಗಳು ಇರುವುದು ಮಾತ್ರವಲ್ಲ ಅದರಲ್ಲಿರುವ ಮಾಹಿತಿಗಳು ನಿಖರವಾಗಿವೆಯೇ ಎನ್ನುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಸರ್ಕಾರಿ ದಾಖಲೆಗಳಲ್ಲಿರುವಂತೆಯೇ ನಮ್ಮ ದಾಖಲೆಗಳೂ ಇವೆಯೇ ಎಂದು ಪರೀಕ್ಷಿಸುವುದು ಅಗತ್ಯ. ಇದೇ ರೀತಿ ಎಲ್ಲಾ ದಾಖಲೆಗಳನ್ನೂ ಪರೀಕ್ಷಿಸಿ

advertisement

Leave A Reply

Your email address will not be published.