Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ವಂಚಿತ ಮಹಿಳೆಯರ ಬೆನ್ನಿಗೆ ನಿಂತ ಸರ್ಕಾರ, ಹೊಸ ಬದಲಾವಣೆ!

advertisement

ಕಾಂಗ್ರೆಸ್‌ ಗ್ಯಾರಂಟಿ (Congress Guarantee Scheme) ಯೋಜನೆಗಳಲ್ಲೊಂದಾಗಿರುವ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) 2 ಸಾವಿರ ರೂಪಾಯಿಯ ಲಾಭವನ್ನು ಇಂದು ಲಕ್ಷಾಂತರ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಗೃಹಲಕ್ಷ್ಮಿ (Gruha Lakshmi) ಯೋಜನೆ ಸೌಲಭ್ಯ ಪಡೆಯಲು ಅರ್ಹತೆ ಹೊಂದಿ ನಾಲ್ಕು ಕಂತು ಜಮೆಯಾಗಿದ್ದು, ಐದನೇ ಕಂತಿನ ಹಣ ಜಮೆಯಾಗುತ್ತಿದೆ. ಆದರೆ, ಕೆಲವರಿಗೆ ತಮ್ಮ ಖಾತೆಗೆ ಹಣ ಬಂದಿದೆಯೇ? ಇಲ್ಲವೇ? ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ.

ನೆಟ್‌ ಬ್ಯಾಂಕಿಂಗ್‌ (Net Banking), ಮೊಬೈಲ್‌ ಬ್ಯಾಂಕಿಂಗ್‌ (Mobile Banking) ವ್ಯವಸ್ಥೆಗಳನ್ನು ಇಟ್ಟುಕೊಳ್ಳದ ಕೆಲವರು ಇದರ ಬಗ್ಗೆ ಮಾಹಿತಿ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಇನ್ನೂ ಕೆಲವರಿಗೆ ತಾಂತ್ರಿಕ ದೋಷದಿಂದ ಇದುವರೆಗೂ ಹಲವಾರು ಮಹಿಳೆಯರಿಗೆ 2000 ತಲುಪಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದೀಗ ರಾಜ್ಯ ಸರ್ಕಾರ ಅರ್ಹರಾಗಿರುವ ಸಂಬಂಧ ಪಟ್ಟ ಐಟಿಜಿಎಸ್‌ಟಿ ಪ್ರಾಧಿಕಾರಿಗಳಿಂದ ತಾವು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ದೃಢೀಕರಣ ಪತ್ರ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ದೃಢೀಕರಣ ಪತ್ರ ನೀಡುತ್ತಿರೋದೇಕೆ ?

 

 

advertisement

‘ಗೃಹಲಕ್ಷ್ಮಿ’ ಯೋಜನೆಯ ತಾಂತ್ರಿಕ ಕಾರಣದಿಂದಾಗಿ ರಾಜ್ಯದ ಸಹಸ್ರಾರು ಮಹಿಳೆಯರು ಮಾಸಿಕ ತಲಾ 2 ಸಾವಿರ ರು. ಪಡೆಯುವುದರಿಂದ ವಂಚಿತರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ (EDCS )ನಿರ್ದೇಶನಾಲಯದೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಮುಂದಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾಗಿದ್ದು, ವಾಸ್ತವವಾಗಿ ತೆರಿಗೆ ಪಾವತಿಸದಿದ್ದರೂ ಐಟಿ (IT) ಅಥವಾ ಜಿಎಸ್‌ಟಿ (GST)  ತೆರಿಗೆದಾರರರೆಂದು ಪೋರ್ಟಲ್‌ನಲ್ಲಿ ತೋರಿಸುತ್ತಿತ್ತು. ಇದರಿಂದಾಗಿ ಯೋಜನೆಗೆ ಫಲಾನುಭವಿಗಳಾಗಲು ನೋಂದಣಿ ಮಾಡಿಸಿ ಆರು ತಿಂಗಳಾಗಿದ್ದರೂ ಬಹಳಷ್ಟು ಮಹಿಳೆಯರು ಸರ್ಕಾರದಿಂದ ಹಣ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ  ನಿರ್ದೇಶನಾಲಯದೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ.

ದೃಢೀಕರಣ ಪತ್ರ ಪಡೆದ ಮಹಿಳೆಯರು ಹೇಗೆ ಮಾಡಿ.

ಆ ಪ್ರಕಾರ ಯೋಜನೆಗೆ ಅರ್ಹರಾಗಿರುವವರು ಸಂಬಂಧಪಟ್ಟ ಐಟಿ/ಜಿಎಸ್‌ಟಿ ಪ್ರಾಧಿಕಾರಗಳಿಂದ ತಾವು ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ದೃಢೀಕರಣ ಪತ್ರ ಪಡೆದು ಆಯಾ ತಾಲೂಕು ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನಾ ಕಚೇರಿಗೆ ಸಲ್ಲಿಸಬೇಕು. ಈ ಕಚೇರಿಯವರು ತಮ್ಮ ತಾಲೂಕಿಗೆ ಸಂಬಂಧಪಟ್ಟ ಅರ್ಹರ ದಾಖಲೆಗಳನ್ನು ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ತಲುಪಿಸಬೇಕಿದೆ.

ಜಿಲ್ಲಾ ಉಪ ನಿರ್ದೇಶಕರು ತಮ್ಮ ಜಿಲ್ಲೆ ವ್ಯಾಪ್ತಿಯ ಪ್ರಕರಣಗಳ ಮಾಹಿತಿಯನ್ನು ಪ್ರಧಾನ ಕಚೇರಿಗೆ ಸಲ್ಲಿಸಬೇಕು. ಇಲ್ಲಿಂದ ಇ-ಆಡಳಿತ ಇಲಾಖೆಯ ಕುಟುಂಬ ತಂತ್ರಾಂಶದ ವಿಭಾಗಕ್ಕೆರವಾನೆಯಾಗಲಿದ್ದು ಅರ್ಜಿಗಳ ಪುನರ್ ಪರಿಶೀಲನೆ ನಡೆಯಲಿದೆ. ಬಳಿಕ ಅರ್ಹರಿಗೆ ಯೋಜನೆಯ ಹಣ ಪಾವತಿಯಾಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

advertisement

Leave A Reply

Your email address will not be published.