Karnataka Times
Trending Stories, Viral News, Gossips & Everything in Kannada

Kia Ray EV: ಟಾಟಾ ನ್ಯಾನೋ ಲುಕ್ ಇರುವ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದ ಕಿಯಾ, ಬೆಲೆ ಎಷ್ಟು?

advertisement

ಕಾರು ಕೊಳ್ಳಬೇಕು ಎಂಬುದು ಬಹುತೇಕರ ಕನಸ್ಸು ಹಾಗಿದ್ದರೂ ಬಜೆಟ್ ಫ್ರೆಂಡ್ಲಿ ಮತ್ತು ಕಡಿಮೆ ವೆಚ್ಚ ನೀಡುವ ಕಾರನ್ನು ಅರಸುವ ಅನೇಕರು ನಮ್ಮ ನಡುವೆ ಇದ್ದಾರೆ. ಈಗ ಇಂಧನ ಚಾಲಿತ ವಾಹನಕ್ಕಿಂತಲೂ ನೈಸರ್ಗಿಕ ಎಲೆಕ್ಟ್ರಾನಿಕ್ ಕಾರುಗಳಿಗೆ ಬೇಡಿಕೆ ಅಧಿಕವಾಗಿ ಇದೆ ಎನ್ನಬಹುದು. ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಕಾರು ಹುಡುಕಾಟ ಮಾಡುತ್ತಿರುವವರಿಗೆ ಕಡಿಮೆ ಬೆಲೆಯ ಅತ್ಯಧಿಕ ವೈಶಿಷ್ಟ್ಯ ಉಳ್ಳಂತಹ Kia Ray EV ಕಂಪೆನಿಯ ಎಲೆಕ್ಟ್ರಾನಿಕ್ ಕಾರು ಒಂದೊಳ್ಳೆ ಆಯ್ಕೆ ಆಗಲಿದೆ.

ಈ ಒಂದು ಕಾರು ನೋಡಲು ಬಹಳ ಆಕರ್ಷಕವಾಗಿದ್ದು ಮಿನಿ ಎಲೆಕ್ಟ್ರಾನಿಕ್ ಕಾರು (Electric Car) ಖರೀದಿ ಮಾಡಬೇಕು ಎಂದು ಅಂದುಕೊಂಡವರಿಗೆ ಈ ಕಾರು ದಿ ಬೆಸ್ಟ್ ಚಾಯ್ಸ್ ಆಗಲಿದೆ. ಕಿಯಾ ರೇ ಇವಿ ಕಾರನ್ನು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು ಮಾರುತಿ ಆಲ್ಟೋಗಿಂತ ಇದರ ಬೆಲೆ ತುಂಬಾನೇ ಕಡಿಮೆ ಇರಲಿದೆ. ಹಾಗೆಯೇ ಇದರ ವಿನ್ಯಾಸವು ಟಾಟಾ ಕಂಪೆನಿಯ ನ್ಯಾನೋಗಿಂತ ಚಿಕ್ಕವಿನ್ಯಾಸ ಕಾಣಬಹುದು. ಇದರ ವಿನ್ಯಾಸ, ಬೆಲೆ ಇತರ ಮಾಹಿತಿಯನ್ನು ಈ ಲೇಖನ ತಪ್ಪದೇ ಪೂರ್ತಿ ಓದಿ.

ವಿನ್ಯಾಸ ಹೇಗಿದೆ?

 

 

Kia Ray EV ಕಾರನ್ನು 2023ರ ಆಗಸ್ಟ್ ನಲ್ಲೇ ಬಿಡುಗಡೆ ಮಾಡಲಾಗಿತ್ತು. ಆಗ ಇಸು ಕಿಯಾ ಕಂಪೆನಿಯ ಪೆಟ್ರೋಲ್ ಮಾದರಿ ಹಾಗೂ ವಿನ್ಯಾಸದ ಕಾರನ್ನೇ ಹೋಲುವಂತಿತ್ತು. ಬಳಿಕ ಇದನ್ನು ನ್ಯಾನೋ ವಿನ್ಯಾಸಕ್ಕೆ ಬದಲಿಸಲಾಗಿದೆ. ಈ ಕಾರಿನಲ್ಲಿ 7ಕಿಲೋ ವ್ಯಾಟ್ ಪೋರ್ಟಲ್ ಚಾರ್ಜಿಂಗ್ ಆಯ್ಕೆ ನಿಮಗೆ ಸಿಗಲಿದೆ. 6 ಗಂಟೆಯಲ್ಲಿ ಪೂರ್ಣ ಚಾರ್ಜ್ ಆಗಲಿದೆ. 150 kW ನ ವೇಗದ ಚಾರ್ಜಿಂಗ್ ಮೂಲಕ 40 ನಿಮಿಷದಲ್ಲಿ 10% ಇದ್ದ ಚಾರ್ಜ್ ಅನ್ನು 80% ಗೇ ಏರಿಸಲು ಸಹ ವಿಶೇಷ ಆಪ್ಶನ್ ನಿಮಗೆ ದೊರೆಯಲಿದೆ.

advertisement

ಬೆಲೆ ಎಷ್ಟು?

 

 

Kia Ray EV ಕಾರು ನಿಮಗೆ ಆರು ವಿಭಿನ್ನವಾದ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಆದರೆ ಹೆಚ್ಚು ಆಕರ್ಷಣೀಯ ವಾಗಿರುವುದು ಬಿಳಿಯ ಬಣ್ಣದಲ್ಲಿ ಎನ್ನಬಹುದು. ಇದರಲ್ಲಿ ಪೋಲ್ಡಿಂಗ್ ಸೀಟ್ ವ್ಯವಸ್ಥೆ ಇದೆ. ಕೈಗೆಟುಕುವ ಬೆಲೆಗೆ ಕಾಂಪ್ಯಾಕ್ಟ್ ವಿನ್ಯಾಸಕ್ಕೆ ಈ ಕಾರು ಬಹಳ ಪ್ರಸಿದ್ದಿ ಪಡೆದಿದೆ. ಈ ಒಂದು ಕಾರಿನ ಬೆಲೆಯು 7.98ಲಕ್ಷ ರೂಪಾಯಿ ಆಗಿದೆ. ಈ ಮೂಲಕ ಎಲೆಕ್ಟ್ರಾನಿಕ್ ವಾಹನದಲ್ಲಿ ಯಾವುದು ಉತ್ತಮ ಇದೆ ಎಂಬ ಹುಡುಕಾಟ ಮಾಡುವವರಿಗೆ ಈ ಆಯ್ಕೆ ಇಷ್ಟ ಆಗಲಿದೆ.

ಎಷ್ಟು ವರ್ಷದ ಬಾಳ್ವಿಕೆ ಇದೆ:

ಇದರ ವ್ಯಾರೆಂಟಿ ವಿಚಾರಕ್ಕೆ ಬಂದರೆ 2 ಲಕ್ಷ ಕಿಲೋಮೀಟರ್ ಸಂಚಾರ ಮಾಡಲಿದೆ ಅಂದರೆ ಬರೋಬ್ಬರಿ 10 ವರ್ಷ ದೀರ್ಘಾವಧಿಯ ವ್ಯಾರೆಂಟಿ ನಿಮಗೆ ಸಿಗಲಿದೆ. ಹಾಗಾಗಿ ನಿಮಗೆ ದೀರ್ಘಾವಧಿಯ ಪ್ರಯಾಣಕ್ಕೆ ಅನುಕೂಲ ನೀಡುವ ನ್ಯಾನೋ ವಿನ್ಯಾಸದ ಕಾರು ಇದು ಎನ್ನ ಬಹುದು.

advertisement

Leave A Reply

Your email address will not be published.