Karnataka Times
Trending Stories, Viral News, Gossips & Everything in Kannada

Mahindra Thar EV: ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ ಮಹಿಂದ್ರ ಎಲೆಕ್ಟ್ರಿಕ್ ಥಾರ್; ಒಂದೇ ಚಾರ್ಜಿನಲ್ಲಿ 400KM ಓಡುವ ಸಾಮರ್ಥ್ಯ!

advertisement

ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರದ ವೆಹಿಕಲ್ ಬಗ್ಗೆ ವಿಶೇಷವಾಗಿ ಹೇಳಬೇಕಾದ್ದೇನು ಇಲ್ಲ. ಯಾಕಂದ್ರೆ ಉತ್ತಮ ಗುಣಮಟ್ಟದ ವಾಹನ ತಯಾರಿಸುವಲ್ಲಿ ಮಹಿಂದ್ರ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಮಹಿಂದ್ರಾದ ಥಾರ್ (Mahindra Thar) ಜನರಲ್ಲಿ ದೊಡ್ಡ ಸೆನ್ಸೇಷನ್ ನ್ನೇ ಕ್ರಿಯೇಟ್ ಮಾಡಿತ್ತು. ಇದೀಗ ನೀವು ಥಾರ್ ನಎಲೆಕ್ಟ್ರಿಕ್ ಮಾದರಿಗಾಗಿ ನೀವು ಕಾಯಬಹುದು.

ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ, ಮಹೀಂದ್ರ ಥಾರ್ ಎಲೆಕ್ಟ್ರಿಕ್:

ಹೌದು, ಥಾರ್ ನಂತಹ ಬಲಿಷ್ಠ ಕಾರನ್ನು ಇಷ್ಟಪಡುವವರಿಗೆ ಇದು ಶುಭ ಸುದ್ದಿ. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಗ್ಲೋಬಲ್ ಫ್ಯೂಚರ್ಸ್ಕೇಪ್ ಸಮಾರಂಭ ನಡೆಸಲಾಗಿದ್ದು, ಇದರಲ್ಲಿ ಮಹೇಂದ್ರದ ಎಲೆಕ್ಟ್ರಿಕ್ ಥಾರ್ (Mahindra Thar EV) ಅನಾವರಣಗೊಂಡಿದೆ. ಐದು ಬಾಗಿಲುಗಳನ್ನು ಒಳಗೊಂಡಿರುವ ಹೊಸ ಥಾರ್ ಇನ್ನು ಕೆಲವು ತಿಂಗಳುಗಳಲ್ಲಿ ಭಾರತವನ್ನು ಪ್ರವೇಶಿಸಲಿದೆ.

ಹೊಸ ಮಾದರಿಯ ಎಲೆಕ್ಟ್ರಿಕ್ ಥಾರ್:

 

 

advertisement

ಈ ಹಿಂದೆ ಕೇವಲ ಮೂರು ಬಾಗಿಲುಗಳನ್ನು ಥಾರ್ ಕಾರಿನಲ್ಲಿ ನೀಡಲಾಗಿತ್ತು. ಈಗ ಐದು ಬಾಗಿಲುಗಳನ್ನು ನೀಡಲಾಗಿದೆ. ಥಾರ್ ನ EV ಯಲ್ಲಿ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಹೊರ ಭಾಗದಲ್ಲಿ ಚೌಕಕಾರದ LED ಡೇ ಟೈಮ್ ರನ್ನಿಂಗ್ ಲೈಟ್ ಮಾತ್ರವಲ್ಲದೆ ಟ್ರಿಪಲ್ ಎಲ್ಇಡಿ ಲೈಟ್ ಸ್ಲಾಟ್ ಗಳನ್ನು ಕಾಣುತ್ತೀರಿ. ಇನ್ನೊಂದಡೆ ಉತ್ತಮವಾಗಿ ವಿನ್ಯಾಸಗೊಂಡಿರುವ ಅಲಾಯಿ ವೀಲ್ಗಳು ಹಾಗೂ ಸ್ಟೇರಿಂಗ್ ವೀಲ್ ಜೊತೆಗೆ ಮೊಬೈಲ್ ಬ್ಲೂಟೂತ್ ಕನೆಕ್ಷನ್ ಹೊಂದಿರುವ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೊಡಲಾಗಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಕೂಡ ಅಳವಡಿಸಲಾಗಿದೆ.

ಒಂದೇ ಚಾರ್ಜ್ ನಲ್ಲಿ 400 ಕಿಲೋಮೀಟರ್ ವ್ಯಾಪ್ತಿ:

 

 

ಈ ಹಿಂದೆ ಬಳಕೆಯಲ್ಲಿ ಇರುವ ಮಹಿಂದ್ರಾದ ಥಾರ್, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದ್ದು, ಈಗ ಹೊಸದಾಗಿ ಬಿಡುಗಡೆ ಆಗಲಿರುವ ಎಲೆಕ್ಟ್ರಿಕ್ ಥಾರ್ (Mahindra Thar EV) ನಲ್ಲಿಯೂ ಕೂಡ ನೀವು ಅದೇ ಬಲಿಷ್ಠತೆಯನ್ನು ನಿರೀಕ್ಷಿಸಬಹುದು. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 400 ಕಿಲೋಮೀಟರ್ ವ್ಯಾಪ್ತಿ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ದೊಡ್ಡದಾಗಿರುವ ಬ್ಯಾಟರಿ ಪ್ಯಾಕ್ ಹಾಗೂ ಡುಯಲ್ ಎಲೆಕ್ಟ್ರಿಕ್ ಮೋಟಾರ್ ಗಳನ್ನು ಅಳವಡಿಸಲಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಅಂದರೆ ಕೇವಲ ಒಂದು ವರ್ಷಗಳಲ್ಲಿ ಫೇಸ್ ಲಿಫ್ಟ್ ಎಕ್ಸ್ಯುವಿ 300, ಐದು ಡೋರ್ ಇರುವ ಥಾರ್, ಎಕ್ಸ್ಯುವಿ 300 EV ಹಾಗೂ XUV.e8 ಅನ್ನು ಬಿಡುಗಡೆ ಮಾಡಲು ಮಹಿಂದ್ರ ಕಂಪನಿ ಸಿದ್ಧವಾಗಿದೆ. ಇನ್ನು ಮಹಿಂದ್ರದ ಥಾರ್ ev ಬೆಲೆ 20ರಿಂದ 25 ಲಕ್ಷಗಳ ವರೆಗೆ ಇರಬಹುದು ಎಂದು ಊಹಿಸಲಾಗಿದೆ.

advertisement

Leave A Reply

Your email address will not be published.