Karnataka Times
Trending Stories, Viral News, Gossips & Everything in Kannada

Bank Holiday: ಮಾರ್ಚ್ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್ ರಜೆ ಇರಲಿದೆ ಗೊತ್ತಾ? ಲಿಸ್ಟ್ ಇಲ್ಲಿದೆ!

advertisement

2023ನೇ ಸಾಲಿನ ಇಯರ್ ಎಂಡ್ ಕಾಲಕ್ಕೆ ಇನ್ನೇನು ಸಮೀಪದಲ್ಲೇ ಇದ್ದೇವೆ. ಮಾರ್ಚ್, ಎಪ್ರಿಲ್ ವೇಳೆಯಲ್ಲಿ ಬಹುತೇಕ ಆರ್ಥಿಕ ವ್ಯವಹಾರಗಳು ಲೆಕ್ಕಾಚಾರದ ಹಂತಕ್ಕೆ ತಲುಪಿರಲಿದ್ದು ಬ್ಯಾಂಕ್ ಹಾಗೂ ಕಾರ್ಪೋರೆಟ್ ಕಂಪೆನಿಗಳ ಆರ್ಥಿಕ ವ್ಯವಹಾರಗಳು ಲೆಕ್ಕಾಚಾರ ನಡೆಯಲಿದೆ‌. ಈ ನಡುವೆ ಬ್ಯಾಂಕ್ ವಹಿವಾಟುಗಳಿಗಾಗಿ ಓಡಾಟ ಮಾಡುವವರು ಸಹ ಅಧಿಕ ಇದ್ದಾರೆ ಹಾಗಾಗಿ ಮಾರ್ಚ್ ತಿಂಗಳಲ್ಲಿ ನೀವು ಬ್ಯಾಂಕ್ ವ್ಯವಹಾರಕ್ಕಾಗಿ ಭೇಟಿ ನೀಡುವವರಾಗಿದ್ದರೆ ಯಾವೆಲ್ಲ ದಿನ ರಜೆ ಮತ್ತು ಯಾವೆಲ್ಲ ದಿನ ಸಾಮಾನ್ಯ ಕೆಲಸ ಕಾರ್ಯ ನಡೆಯಲಿದೆ ಎಂಬ ಬಗ್ಗೆ ಮೊದಲೇ ಖಾತರಿ ಪಡಿಸಿಕೊಳ್ಳಿ.

RBI ಪ್ರತೀ ತಿಂಗಳು ಆರಂಭದಲ್ಲಿ ಬ್ಯಾಂಕ್ ಗಳ ರಜಾ ಪಟ್ಟಿಯನ್ನು ಪ್ರಕಟ ಮಾಡುತ್ತಲಿದ್ದು ಮಾರ್ಚ್ ನ ರಜಾ ದಿನ ತಿಳಿದುಕೊಂಡು ಬ್ಯಾಂಕ್ ಗೆ ಹೋಗುವುದು ಬಹುಮುಖ್ಯ ವಾಗಿದೆ. ಬ್ಯಾಂಕ್ ರಜಾ ದಿನ (Bank Holiday) ಪರಿಶೀಲಿಸದೇ ಹೋದರೆ ಹೋದ ಬಳಿಕ ಬೇಜಾರು ಆಗುವ ಸಂಗತಿಗಳು ಆಗಲಿದೆ. ಮಾರ್ಚ್ ನಲ್ಲಿ ಒಟ್ಟು 14 ದಿನಗಳ ಕಾಲ ರಜೆ ಇರಲಿದ್ದು ಈ ಅವಧಿಯಲ್ಲಿ ನಿಮಗೆ ಬ್ಯಾಂಕ್ ಸೇವೆ ಅಲಭ್ಯವಾಗಲಿದೆ.

ಈ ಹಬ್ಬಗಳಿಗೆ ರಜೆ ಇರಲಿದೆ:

 

 

advertisement

ಮಾರ್ಚ್ ನಲ್ಲಿ ಶಿವರಾತ್ರಿ, ರಂಜಾನ್, ಹೋಳಿ ಹುಣ್ಣಿಮೆ, ಗುಡ್ ಫ್ರೈಡೆ ಎಂಬ ಅನೇಕ ಧರ್ಮಗಳ ಆಚರಣೆ ಹಬ್ಬ ಇರುವ ಕಾರಣ ರಜೆ ಇರಲಿದೆ.

  • ಮಾರ್ಚ್ 3: ಭಾನುವಾರ ರಜಾ ದಿನ.
  • ಮಾರ್ಚ್ 8: ಈ ದಿನದಂದು ಶಿವರಾತ್ರಿ ಕಾರಣಕ್ಕೆ ರಜೆ ಇರಲಿದೆ. ಬೆಂಗಳೂರು, ಅಹಮದಾಬಾದ್, ಬೇಲಾಪುರ್, ಭೋಪಾಲ್, ಭುವನೇಶ್ವರ, ಚಂಡೀಗಢ, ಡೆಹ್ರಾಡೂನ್, ಹೈದ್ರಾಬಾದ್, ಜಮ್ಮು, ಕಾನ್ಪುರ, ಶಿಮ್ಲಾ , ಶ್ರೀನಗರ, ರಾಯ್ಪುರ, , ತಿರುವನಂತಪುರ ಇತ್ಯಾದಿ ಭಾಗದಲ್ಲಿ ಮಹಾ ಶಿವರಾತ್ರಿ ಕಾರಣ ರಜೆ ಇರಲಿದೆ.
  • ಮಾರ್ಚ್ 9: ಎರಡನೇ ಶನಿವಾರದ ಕಾರಣ ಬ್ಯಾಂಲ್ ರಜೆ ಇರಲಿದೆ.
  • ಮಾರ್ಚ್ 10: ಭಾನುವಾರದ ರಜಾ ದಿನ ಇರಲಿದೆ.
  • ಮಾರ್ಚ್ 17: ಭಾನುವಾರದ ರಜಾ ದಿನ ಇರಲಿದೆ.
  • ಮಾರ್ಚ್ 22: ಬಿಹಾರದ ದಿನ ಪಾಟ್ನಾದಲ್ಲಿ ರಜೆ ಇರಲಿದೆ.
  • ಮಾರ್ಚ್ 23: ನಾಲ್ಕನೇ ಶನಿವಾರ ಆದ ಕಾರಣ ರಜೆ ಇರಲಿದೆ.
  • ಮಾರ್ಚ್ 24: ಭಾನುವಾರ ಆದ ಕಾರಣ ರಜೆ ಇರಲಿದೆ.
  • ಮಾರ್ಚ್ 25: ಹೋಳಿ ಹಬ್ಬದ ಕಾರಣ ರಜೆ ಇರಲಿದೆ.
  • ಮಾರ್ಚ್ 27:ಹೋಳಿ ಹಬ್ಬದ ಹಿನ್ನೆಲೆ ಪಾಟ್ನಾದಲ್ಲಿ ರಜೆ ಇರಲಿದೆ.
  • ಮಾರ್ಚ್ 29: ಗುಡ್ ಫ್ರೈಡೆ ಆದ ಕಾರಣ ಜಮ್ಮು, ಶಿಮ್ಲಾ, ಶ್ರೀನಗರ, ಗುವಾಹಟ್ಟಿ, ಜೈಪುರದಲ್ಲಿ ಬ್ಯಾಂಕ್ ರಜೆ ದಿನ ಇರಲಿದೆ.
  • ಮಾರ್ಚ್ 31:ಭಾನುವಾರದ ರಜೆ ದಿನ.

ಅಧಿಕ ರಜೆ:

ಒಟ್ಟಾರೆಯಾಗಿ ಮಾರ್ಚ್ ತಿಂಗಳಲ್ಲಿ ಕೆಲಸ ನಿರ್ವಹಣೆ ದಿನಗಳಷ್ಟೆ ರಜಾ ದಿನಗಳು ಕೂಡ ಅಧಿಕ ಇದೆ.ಎಲ್ಲ ಸರಕಾರಿ ರಜೆ ಜೊತೆಗೆ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಎಲ್ಲ ಭಾನುವಾರದ ರಜಾ ದಿನ ಸಹ ಸಿಗಲಿದೆ. ಕಂಪೆನಿ ಕೆಲಸ, ಬ್ಯಾಂಕ್ ಕೆಲಸ ಮತ್ತು ಸರಕಾರಿ ಕೆಲಸದಾರರಿಗೂ ಇಲ್ಲಿನ ಬಹುತೇಕ ರಜೆ ಲಭ್ಯ ಆಗಲಿದ್ದು ಸಿಬಂದಿಗೆ ರಜೆ ಖುಷಿ ಸಿಗಲಿದೆ.

advertisement

Leave A Reply

Your email address will not be published.