Karnataka Times
Trending Stories, Viral News, Gossips & Everything in Kannada

RBI: ರೈತರಿಗೆ ಕ್ಷಣಾರ್ಧದಲ್ಲಿ ಸಿಗಲಿದೆ ಸಾಲ ಸೌಲಭ್ಯ, ಆರ್‌ಬಿಐ ಹೊಸ ಯೋಜನೆ!

advertisement

ಇಂದು ಪ್ರತಿಯೊಬ್ಬರಿಗೂ ಸಾಲದ ಅವಶ್ಯಕತೆ ಹೆಚ್ಚು ಇರುತ್ತದೆ. ಮದುವೆ, ಶಿಕ್ಷಣ, ಮನೆ, ಚಿನ್ನ ,ವಾಹನ ಖರೀದಿ ಇತ್ಯಾದಿ ಗಳಿಗೆ ಸಾಲದ ಅವಶ್ಯಕತೆ ಇದ್ದೆ ಇರುತ್ತದೆ. ಇನ್ನು ರೈತರು ಹಾಗೂ ಸಣ್ಣ ಉದ್ಯಮಿಗಳಿಗೆ ಸಾಲದ ಅವಶ್ಯಕತೆ ಅಂತು ಬಹಳಷ್ಟು ಇದ್ದೆ ಇರುತ್ತದೆ.ಇದಕ್ಕಾಗಿ ರೈತರಿಗಾಗಿ ಸರಕಾರ ಹಲವು ರೀತಿಯ ಸೌಲಭ್ಯ ಗಳನ್ನು‌ ನೀಡುತ್ತಲೆ ಬಂದಿದೆ. ಇದೀಗ ರಿಸರ್ವ್ ಬ್ಯಾಂಕ್ ಕೂಡ ರೈತರಿಗಾಗಿ ಹೊಸ ಯೋಜನೆ ಜಾರಿಗೆ ತಂದಿದೆ. ರೈತರು ಮತ್ತು ಎಂಎಸ್‌ಎಂಇಗಳಿಗೆ ಸಾಲ ನೀಡಲು ಯುಪಿಐ ಮಾದರಿಯ ಸೌಲಭ್ಯ ತರಲು ಆರ್‌ಬಿಐ ಮುಂದಾಗಿದೆ.

ಸರಕಾರದ ಪರಿಹಾರ ಯೋಜನೆ

ಸರ್ಕಾರವು ರೈತರಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ಮಾಡುತ್ತಲೆ ಇದೆ. ಈಗಾಗಲೇ ಮೊನ್ನೆಯಷ್ಟೆ ಬೆಳೆ ವಿಮೆ ಪರಿಹಾರವನ್ನು ರಾಜ್ಯ ಸರಕಾರ ಒದಗಿಸಿದೆ.ರೈತರ ಬೆಳೆ ಸಾಲ ಮನ್ನಾ ಪರಿಹಾರ ಯೋಜನೆ ಕೂಡ ಪ್ರಸ್ತಾಪಿಸಿದೆ.ಬ್ಯಾಂಕುಗಳಲ್ಲಿ ಸಂಘ ಸಂಸ್ಥೆಗಳಲ್ಲಿ ರೈತರಿಗೆ ಅನುಕೂಲವಾಗಲು ಸರ್ಕಾರವು ಸಬ್ಸಿಡಿ ದರದಲ್ಲಿ ಸೌಲಭ್ಯವನ್ನು ನೀಡುತ್ತಿದೆ. ಇನ್ನು ಸಹಕಾರ ಸಂಘಗಳಲ್ಲಿ ಇರುವ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನದಲ್ಲಿ ಘೋಷನೆ ಕೂಡ ಮಾಡಿದ್ದಾರೆ.

advertisement

ಕ್ರೆಡಿಟ್ ವಿತರಣಾ ಸಾಲ

ಡಿಜಿಟಲ್ ಇಂಟರ್ಫೇಸ್ ಮೂಲಕ ಸಾಲ ನೀಡಲು ಅರ್ ಬಿ ಐ (RBI)  ಮುಂದಾಗಿದೆ. ರೈತರು ಮತ್ತು ಸಣ್ಣ ಉದ್ಯಮಿಗಳು ಸಾಲ ಪಡೆಯಲು ಬ್ಯಾಂಕ್‌ಗಳಿಗೆ ಭೇಟಿ ನೀಡುವ ಮೂಲಕ‌ವೂ ಸಾಲ ಪಡೆಯ ಬಹುದಾಗಿದೆ‌ ಅದಲ್ಲದೆ ಇದೀಗ ಕ್ರೆಡಿಟ್ ವಿತರಣಾ ವೇದಿಕೆಯು ಸಾಲ ನೀಡಲಿದೆ. ಡಿಜಿಟಲ್ ಪಾವತಿ ಯಾದ UPI ಕಾರ್ಯನಿರ್ವಹಿಸುವ ಹಾಗೆಯೇ ಇಲ್ಲಿ ಕೆಲಸ ಮಾಡಲಿದ್ದು ಇದು ರೈತರಿಗೆ ಮತ್ತು MSME ಗಳಿಗೆ ಸಾಲ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭ ಗೊಳಿಸಲಿದೆ.ಇದರ ಮೂಲಕ ಕ್ಷಣಾರ್ಧದಲ್ಲಿ ಸಾಲ ಪಡೆಯಲು ಸಾಧ್ಯವಾಗಲಿದೆ.

ಯಾವೆಲ್ಲ ಸಾಲ ಇರಲಿದೆ

ಪ್ರಸ್ತುತ ಕೃಷಿ ಸಾಲ, ಕಿಸಾನ್ ಕ್ರೆಡಿಟ್ ಕಾರ್ಡ್, ಸಣ್ಣ MSME ಸಾಲದಂತಹ ಸೌಲಭ್ಯ ಇರಲಿದೆ.ಈ ವೇದಿಕೆಯ ಮೂಲಕ ಇಲ್ಲಿಯವರೆಗೆ ಸುಮಾರು 3,500 ಕೋಟಿ ರೂಪಾಯಿ ಮೌಲ್ಯದ ಕೃಷಿ ಮತ್ತು MSME ಸಾಲಗಳನ್ನು ಈಗಾಗಲೇ ವಿತರಣೆ ಮಾಡಲಾಗಿದೆ.

advertisement

Leave A Reply

Your email address will not be published.