Karnataka Times
Trending Stories, Viral News, Gossips & Everything in Kannada

FASTag: ಎರಡು ಕಾರುಗಳ ಮೇಲೆ ಒಂದೇ ಫಾಸ್ಟ್ ಟ್ಯಾಗ್ ಬಳಸಬಹುದಾ? ಇಂದೇ ತಿಳಿದುಕೊಳ್ಳಿ

advertisement

ಫಾಸ್ಟ್ ಟ್ಯಾಗ್ ಬಳಕೆ ಆರಂಭ ಆದ ಮೇಲೆ ವಾಹನ ಸವಾರರಿಗೆ ಟೋಲ್ (Toll) ನಲ್ಲಿ ಬಹಳ ಹೊತ್ತು ಕಾಯಬೇಕಾದ ಸಮಸ್ಯೆಯಿಂದ ಮುಕ್ತಿ ಸಿಕ್ಕಿದೆ. ಈಗಲೂ ಕೂಡ ಫಾಸ್ಟ್ ಆಗಿ ಸರಿಯಾಗಿ ಕೆಲಸ ಮಾಡದ ಸಂದರ್ಭಗಳಲ್ಲಿ ಟೋಲ್ ನ ಬಳಿ ಕ್ಯೂ ವನ್ನು ನಾವು ಕಾಣಬಹುದು. ಆದರೆ ಇದು ಕೇವಲ ಒಂದೆರಡು ಸಂದರ್ಭಗಳಲ್ಲಿ ಆಗುತ್ತಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಎಲ್ಲಾ ವಾಹನಗಳು ಫಾಸ್ಟ್ ಟ್ಯಾಗ್ (FASTag) ಹೊಂದಿರಬೇಕಾದರೆ ಸರಾಗವಾಗಿ ವಾಹನಗಳ ಚಲಾವಣೆ ಟೋಲ್ ನ ಬಳಿ ಆಗುತ್ತಿದೆ.

ಈಗ ಕೇವಲ ರಾಷ್ಟ್ರೀಯ ಹೆದ್ದಾರಿಗಳಲ್ಲಷ್ಟೇ ಅಲ್ಲದೆ ಹಲವಾರು ರಾಜ್ಯ ಹೆದ್ದಾರಿಗಳು ಕೂಡ ಫಾಸ್ಟ್ ಟ್ಯಾಗ್ (FASTag) ನ ಬಳಕೆಯನ್ನು ಅನುಮೋದಿಸಿವೆ ಹಾಗೂ ಇದರ ಮೂಲಕವೇ ಹಣ ಸಂಗ್ರಹಣೆ ಮಾಡುತ್ತಿವೆ. ಇಷ್ಟೇ ಅಲ್ಲದೆ ಮಾಲ್ ಗಳ ಪಾರ್ಕಿಂಗ್ ನಲ್ಲೂ ಕೂಡ ಇತ್ತೀಚಿಗೆ ಫಾಸ್ಟ್ ಟ್ಯಾಗ್ ನ ಮೂಲಕವೇ ಹಣ ಪಾವತಿ ಆಗುತ್ತಿರುವುದನ್ನು ನೀವು ನೋಡಿರಬಹುದು. ಇದು ಮಾಲ್ ಗಳ ಪಾರ್ಕಿಂಗ್ ನಲ್ಲಿ ಆಗುವ ಟ್ರಾಫಿಕ್ ದಟ್ಟಣೆ ಅದರಲ್ಲೂ ಮುಖ್ಯವಾಗಿ ಸಿನಿಮಾ ಮುಗಿದ ಮೇಲೆ ಒಂದೇ ಬಾರಿ ವಾಹನಗಳು ಬಂದಾಗ ಆಗುವ ದಟ್ಟಣೆಯನ್ನು ಬಹಳ ಕಡಿಮೆ ಮಾಡಿದೆ.

ಇನ್ನು ಮುಂದಿನ ವರ್ಷಗಳಲ್ಲಿ ಫಾಸ್ಟ್ ಟ್ಯಾಗ್ (FASTag) ಕೂಡ ಇಲ್ಲದೆ ಜಿಯೋ ಟ್ಯಾಗ್ಗಿಂಗ್ ನ ಮೂಲಕ ವಾಹನಗಳ ಮೂಮೆಂಟ್ ಅನ್ನು ಟ್ರ್ಯಾಕ್ ಮಾಡಿ ಅದರ ಮೂಲಕ ಟೋಲ್ ಅನ್ನು ಸಂಗ್ರಹಿಸುವ ಯೋಚನೆಗೆ ಸರ್ಕಾರ ಬರುತ್ತಿದೆ. ಈ ಯೋಜನೆ ಯಶಸ್ವಿಯಾದಲ್ಲಿ ನಾವು ಈಗ ಕಾಣುವ ಟ್ರಾಫಿಕ್ ಕೂಡ ಟೋಲ್ ನ ಬಳಿ ಇಲ್ಲದೆ ಸರಾಗವಾಗಿ ವಾಹನಗಳು ಚಲಿಸುತ್ತಿರಬಹುದು.

ಫಾಸ್ಟ್ ಟ್ರ್ಯಾಕ್ ನ ವ್ಯಾಲಿಡಿಟಿ ಎಷ್ಟು?

 

advertisement

 

ಈಗ ನಾವು ಬೇರೆ ಬೇರೆ ಬ್ಯಾಂಕ್ ಗಳಿಂದ ಖರೀದಿಸುತ್ತಿರುವ ಫಾಸ್ಟ್ ಟ್ಯಾಗ್ (FASTag) ಎಷ್ಟು ವರ್ಷಗಳ ಕಾಲ ಸಿಂಧುತ್ವ ಹೊಂದಿರುತ್ತದೆ ಎಂಬ ಬಗ್ಗೆ ನಿಮಗೆ ತಿಳಿದಿದೆಯೇ ? ನಾವು ಒಂದು ಬಾರಿ ಫಾಸ್ಟ್ ಟ್ಯಾಗ್ ಅನ್ನು ಯಾವುದೇ ಸರ್ವಿಸ್ ಪ್ರೊವೈಡರ್ ಇಂದ ಪಡೆದುಕೊಂಡರೆ ಅದು ಮುಂದಿನ ಐದು ವರ್ಷಗಳ ಕಾಲ ಬಳಸಬಹುದಾಗಿದೆ. ಅಂದರೆ ಇದರ ಸಿಂಧುತ್ವ ಐದು ವರ್ಷಗಳು. 5 ವರ್ಷಗಳ ನಂತರ ಮತ್ತೆ ನೋಂದಾವಣೆ ಮಾಡಿಕೊಂಡು ಹೊಸ ಟ್ಯಾಗ್ ಅನ್ನು ಪಡೆಯಬೇಕಾಗುತ್ತದೆ.

ಎರಡು ವಾಹನಗಳಲ್ಲಿ ಒಂದೇ ಫಾಸ್ಟ್ ಟ್ಯಾಗ್ ಬಳಸಬಹುದೇ ?

ನಿಮ್ಮ ಬಳಿ ಎರಡು ವಾಹನಗಳಿದ್ದು ಎರಡು ಒಂದೇ ಬಾರಿ ಚಲಾಯಿಸುವುದಿಲ್ಲ ಎಂದಾದಲ್ಲಿ ಎರಡು ವಾಹನಗಳಿಗೆ ಸೇರಿ ಒಂದೇ ಫಾಸ್ಟ್ ಟ್ಯಾಗ್ (FASTag) ಖರೀದಿಸಿ ಅದನ್ನೇ ನಾವು ಹೋಗುವ ವಾಹನಕ್ಕೆ ಅಳವಡಿಸಿ ಬಳಸಬಹುದೇ ಎಂಬ ಪ್ರಶ್ನೆ ಹಲವರಲ್ಲಿ ಇದೆ. ಈ ಪ್ರಶ್ನೆ ನಿಮ್ಮಲ್ಲಿಯೂ ಇದೆ ಎಂದಾದಲ್ಲಿ ಇಲ್ಲಿದೆ ಅದಕ್ಕೆ ಉತ್ತರ ಖಂಡಿತವಾಗಿ ಎರಡು ವಾಹನಗಳಲ್ಲಿ ಒಂದೇ ಫಾಸ್ಟಾಗಿ ಬಳಕೆ ಸಾಧ್ಯ ಇಲ್ಲ. ಈ ರೀತಿ ನಾವು ಬಳಸಿದ್ದೆ ಆದಲ್ಲಿ ಇದು ಸರ್ಕಾರದ ಪ್ರಕಾರ ಅಪರಾಧವಾಗುತ್ತದೆ.

advertisement

Leave A Reply

Your email address will not be published.