Karnataka Times
Trending Stories, Viral News, Gossips & Everything in Kannada

Student Scholarship: ಅಲ್ಪಸಂಖ್ಯಾತರಿಗೆ ರೂ 25,000 ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ಹೀಗೆ ಅರ್ಜಿ ಸಲ್ಲಿಸಿ!

advertisement

ಭಾರತ ದೇಶವು ವಿವಿಧತೆಯಲ್ಲಿ ಏಕತೆ ಕಾಣುವ ರಾಷ್ಟ್ರವಾಗಿದೆ. ನಮ್ಮಲ್ಲಿ ಜೀವ ವೈವಿಧ್ಯದಿಂದ ಹಿಡಿದು , ಜನಾಂಗೀಯವಾಗಿ ಅನೇಕ ಧರ್ಮ , ಜಾತಿ, ಉಪಜಾತಿಗಳಿದ್ದರೂ ದೇಶದಲ್ಲಿ ಸಮಾನತೆಗೆ ಪಾಶಸ್ತ್ಯ ನೀಡುತ್ತಲೇ ಬಂದಿದ್ದೇವೆ.ಭಾರತದಲ್ಲಿ ಅತೀ ಹೆಚ್ಚು ವಾಸಿಗಳನ್ನು ಕಾಣುವುದಾದರೆ ಹಿಂದೂಗಳ ಸಂಖ್ಯೆ ಅಧಿಕ ಇದ್ದಾರೆ. ಹಾಗಾಗಿ ಇತರ ಕೆಲ ಧರ್ಮಗಳಿಗೆ ಅಲ್ಪಸಂಖ್ಯಾಕರ ವರ್ಗದ ಅಡಿಯಲ್ಲಿ ಅನೇಕ ಸೇವಾ ಸೌಲಭ್ಯವನ್ನು ನೀಡಲಾಗುತ್ತಾ ಬರಲಾಗಿದೆ. ಈ ಮೂಲಕ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕ್ರತಿಕ ಎಲ್ಲ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ.

ಅಲ್ಪಸಂಖ್ಯಾತರಿಗೆ ಬೆಂಬಲ:

ಭಾರತದಲ್ಲಿ ಅಲ್ಪಸಂಖ್ಯಾತರನ್ನು ಹೆಚ್ಚಾಗಿ ಬೆಂಬಲಿಸುತ್ತಾ ಬರಲಾಗಿದೆ. ಮುಸ್ಲಿಮರು, ಸಿಖ್ಖರು, ಕ್ರೈಸ್ತರು, ಬುದ್ಧರು, ಜೈನ್, ಪಾರ್ಸಿಗಳು ಈ ಒಂದು ಅಲ್ಪಸಂಖ್ಯಾತ ಬಳಗಕ್ಕೆ ಸೇರಲಿದೆ. ಇವರಿಗಾಗಿಯೇ ಪ್ರತ್ಯೇಕ ಕಾಯ್ದೆಗಳು ಲಭ್ಯ ಆಗಲಿದೆ. ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ 1992 ರ ಅನ್ವಯ ಕೆಲವೊಂದು ವಿಶೇಷ ಹಕ್ಕಿನ ಸೌಲಭ್ಯ ನೀಡಲಾಗುತ್ತಿದೆ. 2011ರ ಜನಗಣತಿಯ ಪ್ರಕಾರ ದೇಶದಲ್ಲಿ 19.3% ನಷ್ಟು ಅಲ್ಪಸಂಖ್ಯಾತರು ಇರುವುದು ತಿಳಿದು ಬಂದಿದೆ.

ವಿದ್ಯಾರ್ಥಿ ವೇತನ ವಿತರಣೆ:

 

 

advertisement

ರಾಜ್ಯ ಸರಕಾರದಿಂದ ಕೂಡ ಈ ಒಂದು ಅಲ್ಪ ಸಂಖ್ಯಾತರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಕರ್ನಾಟಕ ರಾಜ್ಯದಲ್ಲಿ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Student Scholarship) ನೀಡಲಾಗುತ್ತಿದೆ. ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ಯಾರಿಗಾಗಿ ಈ ವಿದ್ಯಾರ್ಥಿ ವೇತನ?

ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನ (Student Scholarship) ವು ಕೂಡ ಇಂತಹದ್ದೇ ವ್ಯಾಸಾಂಗದ ಉದ್ದೇಶಕ್ಕಾಗಿ ನೀಡಲಾಗುತ್ತಿದೆ. ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನವನ್ನು ಮುಖ್ಯವಾಗಿ ವೃತ್ತಿಪರ ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಕೋರ್ಸ್ ಗಳಿಗೆ ವ್ಯಾಸಾಂಗ ಮಾಡುತ್ತಿರುವವರಿಗೆ ನೀಡುವ ಒಂದು ಸೌಲಭ್ಯವಾಗಿದೆ. ಇಲ್ಲಿ ಅರ್ಜಿ ಹಾಕಿ ಅರ್ಹರಾದವರಿಗೆ 25,000 ರೂಪಾಯಿ ವರೆಗೆ ವಿದ್ಯಾರ್ಥಿ ವೇತನ ಸಿಗಲಿದೆ.

ಈ ಸಂಪರ್ಕ ಸಂಖ್ಯೆಗೆ ಸಂಪರ್ಕಿಸಿ:

ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನದ ಬಗ್ಗೆ ಯಾವುದೇ ಗೊಂದಲ ಅನುಮಾನಗಳು ಇದ್ದರೆ ನೀವು https://dom. karnataka.gov.in ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಇಲ್ಲವೇ ಸಹಾಯವಾಣಿ ಸಂಖ್ಯೆ 8277799990ಗೆ ಸಂಪರ್ಕಿಸಿ.

advertisement

Leave A Reply

Your email address will not be published.