Karnataka Times
Trending Stories, Viral News, Gossips & Everything in Kannada

Scholarship: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಅರ್ಜಿ ಸಲ್ಲಿಸಲು ಹೀಗೆ ಮಾಡಿ

advertisement

ಇಂದು ಶಿಕ್ಷಣ ಅನ್ನೋದು ಬಹಳ ಮುಖ್ಯ. ಶಿಕ್ಷಣ ಪಡೆದಿದ್ದರೆ ಮಾತ್ರ ತಾವು ಅಂದು ಕೊಂಡಂತೆ ಕೆಲಸ ವನ್ನು ಪಡೆಯಬಹುದು. ಹಿಂದಿನ‌ಕಾಲದಲ್ಲಿ ಶಿಕ್ಷಣ ಪಡೆಯಬೇಕಾದರೆ ಬಹಳಷ್ಟು ಕಷ್ಟ ಇತ್ತು. ಹಣದ ಕೊರತೆಯಿಂದ ಶಿಕ್ಷಣ ಪಡೆಯದೇ ಇದ್ದವರು ಇದ್ದಾರೆ. ಆದರೆ ಇದೀಗ ಯಾವುದೇ ಮಕ್ಕಳಿಗೂ ಶಿಕ್ಷಣ ಪಡೆಯುದಾದರೂ ಕೆಲವೊಂದು ಸೌಲಭ್ಯ ಗಳು ಇವೆ, ಫೀಸ್ ವಿನಾಯಿತಿ (Fee Exemption) ಇದೆ. ಆದೇ‌ ರೀತಿ‌ ವಿವಿಧ ಇಲಾಖೆಗಳಲ್ಲಿ ಸ್ಕಾಲರ್ಶಿಪ್ (Scholarship) ಕೂಡ ಜಮೆ ಯಾಗುತ್ತದೆ. ಇದೀಗ ಪರಿಶಿಷ್ಟ ‌ಜಾತಿಯ ವಿದ್ಯಾರ್ಥಿಗಳಿಗೆ ಸಹಾಯ ಧನ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದ್ದು ಅರ್ಹರು ‌ಅರ್ಜಿ ಸಲ್ಲಿಸಬಹುದಾಗಿದೆ.

ಇವರು ಅರ್ಹರು:

 

 

ಈ ಪ್ರೋತ್ಸಾಹ ಧನ (Scholarship) ಕ್ಕಾಗಿ ಮೆಟ್ರಿಕ್ ವ್ಯಾಸಂಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಸಹಾಯಧನ ನೀಡಲಾಗುತ್ತದೆ. ರಾಜ್ಯ , ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಡಿ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ ಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಗೆ ಅರ್ಜಿ ಹಾಕಬಹುದಾಗಿದೆ.

ಷರತ್ತು ಏನು?

advertisement

  • ವಾರ್ಷಿಕ ಪರೀಕ್ಷೆ ಎಸ್.ಎಸ್.ಎಲ್.ಸಿ (SSLC Annual Exam) ಯಲ್ಲಿ ಪಥಮ ಶ್ರೇಣಿಯಲ್ಲಿ ಶೇ.75 ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದರೆ ಅರ್ಜಿ ಸಲ್ಲಿಸಬಹುದಾಗಿದೆ.
  • ಹೊರ ದೇಶಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಈ ಯೋಜನೆಯಡಿ ಬಹುಮಾನ ಪಡೆಯಲು ಅರ್ಹರಲ್ಲ
  • ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು (Scheduled Caste Students) ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
  • ಈ ಯೋಜನೆಯ ಮೂಲಕ‌ ಸಹಾಯಧನ ಪಡೆಯಲು ವಿದ್ಯಾರ್ಥಿಯ ಗರಿಷ್ಠ ವರ್ಷ 35 ಮೀರಿರಬಾರದು.
  • ಹೊರ ರಾಜ್ಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು Native District ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಅರ್ಜಿ ಸಲ್ಲಿಸಿ:

ಈ ಸಹಾಯಧನ ಪಡೆಯಲು ಆನ್ ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಜಿಲ್ಲಾ ಮಟ್ಟದಲ್ಲಿ ಜಂಟಿ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇಲ್ಲಿ ಮಾಹಿತಿ ಪಡೆಯಬಹುದಾಗಿದೆ.

ದಾಖಲೆಗಳೇನು?

ಅರ್ಜಿ ಸಲ್ಲಿಸಲು ಕೆಲವೊಂದು ದಾಖಲೆಗಳ ಅವಶ್ಯಕತೆ ಇದ್ದು ಈ ದಾಖಲೆಗಳು ಬೇಕಾಗುತ್ತದೆ.

  • ಜಾತಿ ಪ್ರಮಾಣ ಪತ್ರ (Caste Certificate)
  • ಆಧಾರ್ ಕಾರ್ಡ್ (Aadhaar Card)
  • ವಿದ್ಯಾರ್ಥಿಯ ಪೋಟೋ ಅಂಕಪಟ್ಟಿಗಳು
  • ವ್ಯಾಸಂಗ ಮಾಡಿದ ಶೈಕ್ಷಣಿಕ ಸಂಸ್ಥೆ ಧೃಢಿಕೃತ
  • ಬ್ಯಾಂಕ್ ಪಾಸ್ ಪುಸ್ತಕ (Pass Book)
  • ಆದಾಯ ಪ್ರಮಾಣ ಪತ್ರ (Income Certificate) ಇತ್ಯಾದಿ.

advertisement

Leave A Reply

Your email address will not be published.