Karnataka Times
Trending Stories, Viral News, Gossips & Everything in Kannada

Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಜನರಿಗೆ ಕಹಿಸುದ್ದಿ, ಹೊಸ ಆದೇಶ!

advertisement

ಕೆಲ ದಿನಗಳಿಂದ ಪಡಿತರ ಚೀಟಿ (Ration Card) ತಿದ್ದುಪಡಿಗೆ ಈಗಾಗಲೇ ಕೆಲವು ಕೆಲವು ಜಿಲ್ಲೆಗಳಿಗೆ ಅವಕಾಶ ನೀಡಲಾಗಿದ್ದು, ಅವಧಿಯೂ ಮುಗಿದಿದೆ. ಇನ್ನು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಒಂದು ದಿನದ ಅವಕಾಶವನ್ನು ಕಲ್ಪಿಸಿದೆ.

ಫಲಾನುಭವಿಗಳು ಡಿಸೆಂಬರ್ 3 ರಂದು ಹೊಸ ರೇಶನ್ ಕಾರ್ಡ್‌ (Ration Card) ಗೆ ಅರ್ಜಿ‌ ಸಲ್ಲಿಸಬಹುದಾಗಿದೆ. ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಕೇವಲ ಒಂದು ದಿನ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಭಾನುವಾರ ಅಂದರೆ ಡಿಸೆಂಬರ್ 3 ರ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೆಚ್ಚಿನ ಅರ್ಜಿ ಸಲ್ಲಿಕೆ‌ಯಾಗುವ ಹಿನ್ನೆಲೆ ಕಡಿಮೆ ಸಮಯಾವಕಾಶ ಕೊಟ್ಟಿರುವ ಆಹಾರ ಇಲಾಖೆ (Food Department), ಎಲ್ಲರಿಗೂ ಭಾನುವಾರ ಒಂದು ದಿನ ಮಾತ್ರ ಅವಕಾಶ ಕಲ್ಪಿಸಿದೆ ಎನ್ನುವ ಸುದ್ಧಿ ವೈರಲ್ ಆಗಿತ್ತು.

 

advertisement

 

ಆದರೆ ಇದೀಗ ಈ ಕುರಿತಾಗಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ (Food and Civil Supply Departmenmt) ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ಇದೊಂದು ವದಂತಿಯಾಗಿದ್ದು ಹೊಸ ರೇಷನ್ ಕಾರ್ಡ್ (New Ration Card) ಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅಧಿಸೂಚನೆ ಹೊರಡಿಸಿಲ್ಲ. ಪತ್ರಿಕಾ ಪ್ರಕಟಣೆ ಹೊರಡಿಸಿಲ್ಲ. ಹೊಸದಾಗಿ ಅರ್ಜಿಯನ್ನು ಕರೆಯುವುದಿದ್ದರೂ, ತಿದ್ದುಪಡಿ ಮಾಡಿದರೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ. ಈಗಂತೂ ಯಾವುದೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

advertisement

Leave A Reply

Your email address will not be published.