Karnataka Times
Trending Stories, Viral News, Gossips & Everything in Kannada

WhatsApp: ನಿಮ್ಮ ಚಾಟ್ ಸೀಕ್ರೆಟ್ ಆಗಿ ಇಡಲು ಹೊಸ ಫೀಚರ್ ಪರಿಚಿಯಿಸಿದ ವಾಟ್ಸಾಪ್.

advertisement

ಬಹುಸಂಖ್ಯಾತ ಗ್ರಾಹಕರನ್ನು ಹೊಂದಿರುವ ವಾಟ್ಸಾಪ್ (WhatsApp) ನೂತನ ವೈಶಿಷ್ಟ್ಯ ಹೊಂದಿದ್ದು ಯಾವಾಗಲೂ ಬಳಕೆದಾರರ ಹಿತಾಸಕ್ತಿ ಕಾಯ್ದಿರಿಸಿದೆ ಎನ್ನಬಹುದು. ಇತ್ತೀಚೆಗಷ್ಟೇ ಹೊಸ ಚಾಟ್ ವೈಶಿಷ್ಟ್ಯ ಸಹ ಜಾರಿಗೆ ತಂದಿತ್ತು. ಇದರ ಬೆನ್ನಲ್ಲೆ ಒಂದು ವಿನೂತನ ವ್ಯವಸ್ಥೆಯನ್ನು ಜಾರಿಗೆ ತರಲು ವಾಟ್ಸಾಪ್ ಮುಂದಾಗಿದೆ. ಇದು ರಕ್ಷಣಾತ್ಮಕ ವ್ಯವಸ್ಥೆ ವಿಚಾರದಲ್ಲಿ ಬಹಳ ಚಾಟ್ ಲಾಕ್ ಸಿಸ್ಟಂ ಅನ್ನು ಪರಿಚಯಿಸಲಾಗುತ್ತಿದೆ.

ಈ ಒಂದು ಚಾಟ್ ಲಾಕ್ ಸಿಸ್ಟಂ ಎನ್ನುವುದು ಸಿಕ್ರೆಟ್ ಕೋಡ್ ಎಂಬ ಸುಧಾರಿತ ಆವೃತ್ತಿಯನ್ನು ಪರಿಚಯಿಸಲಾಗಿದೆ. ಅದೇ ರೀತಿ ಲಾಕಿಂಗ್ ಮತ್ತು ಫಿಂಗರ್ ಪ್ರಿಂಟ್ (Finger Print) ಬಳಸಿ ನಿಮ್ಮ ವಾಟ್ಸಾಪ್ ಖಾತೆ  ಯನ್ನು ತೆರೆಯಬಹುದು. ಆಗ ಚಾಟ್ ಲಾಕ್ ಇದ್ದರೂ ಸಹ ಚಾಟಿಂಗ್ ತೆಗೆದು ಓದಲಾಗುತ್ತಿತ್ತು. ಆದರೆ ಚಾಟ್ ಲಾಕ್  ಸಿಸ್ಟಂ (Chat Lock System) ನಲ್ಲಿ ಕೂಡ ಕೆಲ ನ್ಯೂನ್ಯತೆ ಇದ್ದು ಇದೀಗ ಆ ಎಲ್ಲ ನ್ಯೂನ್ಯತೆ ತೊಡೆದುಹಾಕಲಾಗಿದೆ.

ತುಂಬಾ ಸೇಫ್:

 

 

advertisement

ವಾಟ್ಸಾಪ್ ಬಳಕೆದಾರರಿಗೆ ಹೊಸ ರಹಸ್ಯ ಕೋಡ ವೈಶಿಷ್ಟ್ಯವನ್ನು ಪರಿಚಯಿಸಿದ್ದು ಕಸ್ಟಮ್ ಪಾಸ್ ಕೋಡ್ (Custom Passcode) ಮೂಲಕ ನಿಮ್ಮ ಚಾಟ್ ಅನ್ನು ನೀವು ರಕ್ಷಿಸಬಹುದು. ಈ ಮೂಲಕ ಲಾಕ್ಕಿಂಗ್ ಚಾಟ್ ಅನ್ನು ಸೆಟ್ಟಿಂಗ್ ಮೂಲಕ ಸುಲಭವಾಗಿ ಪ್ರವೇಶಿಸಬಹುದು. ಹೀಗಾಗಿ ನಿಮ್ಮ ಚಾಟಿಂಗ್ (Chating) ಇನ್ನಷ್ಟು ಸೇಫ್ ಆಗಿ ಇರಲಿದೆ ಎಂದು ಹೇಳಬಹುದು. ಇದಕ್ಕಾಗಿ ವಿಭಿನ್ನವಾದ ಚಾಟ್ ಸೆಟ್ಟಿಂಗ್ ಹೋಗುವ ಅವಶ್ಯಕತೆ ಇಲ್ಲ. ಇದು ನಿಮ್ಮ ವಾಟ್ಸಾಪ್ ಅಪ್ಟ್ಡೇಟ್  ಮೂಲಕವೇ ಚಾಟ್ ಲಾಕ್ ಆಪ್ಶನ್ ಸಹ ಬರಲಿದೆ.

ಮಾಡುವುದು ಹೇಗೆ?

ವಾಟ್ಸ್ ಆ್ಯಪ್ (WhatsApp) ನಲ್ಲಿ ನಿಮ್ಮ ಚಾಟ್ ಅನ್ನು ಖಾಸಗಿಯಾಗಿಡಲು ಮೂರು ಡಾಟ್ ಮೇಲೆ ಕ್ಲಿಕ್ ಮಾಡಬೇಕು. ಲಾಕ್ ಮಾಡಿದ್ದ ಚಾಟಿಂಗ್ ಪಟ್ಟಿಯನ್ನು ತೆರೆಯಬೇಕು. ಚಾಟ್ ಲಾಕ್ ಸೆಟ್ಟಿಂಗ್ ಗೆ ಹೋಗಿ ಅಲ್ಲಿ ಮರೆ ಮಾಡುವ ಆಪ್ಶನ್ ಕ್ಲಿಕ್ ಮಾಡಬೇಕು. ಅದರಲ್ಲಿ ರಹಸ್ಯ ಕೋಡ್ ಅನ್ನು ಸಹ ಸೆಟ್ ಮಾಡಬೇಕು. ಹೀಗೆ ಮಾಡಿದ್ದ ಬಳಿಕ ನೀವು ಹೈಡ್ ಮಾಡಲು ಬಳಸಿದ್ದ ಕಾಂಟ್ಯಾಕ್ಟ್ ಅನ್ನು ವಿಂಡೋದಲ್ಲಿ ಕಾಣಲು ಸಾಧ್ಯವಿಲ್ಲ.

ನಿಮ್ಮ ಚಾಟಿಂಗ್ ಅನ್ನು ನೀವು ನೋಡಲು ಹೀಗೆ ಮಾಡಬೇಕು:

ನೀವು ಕೆಲ ಕಾಂಟ್ಯಾಕ್ಟ್ ಚಾಟ್ (Contact Chat) ಅನ್ನು ರಹಸ್ಯವಾಗಿ ಇಡಲು ಬಯಸಿದರೆ ಅದನ್ನು ಫಿಂಗರ್ ಪ್ರಿಂಟ್ (Finger Print) ಮೂಲಕ ನೇರವಾಗಿ ತೆಗೆಯಲು ಸಾಧ್ಯವಿಲ್ಲ. ಬದಲಿಗೆ ಹುಡುಕಾಟದ ಪಟ್ಟಿಯಲ್ಲಿ ರಹಸ್ಯ ಕೋಡ್ ಸಮೋದಿಸಿದ ಬಳಿಕ ಹೈಡ್ ಆದ ಮೆಸೇಜ್  ಅನ್ನು ರೀಡ್ ಮಾಡಬಹುದು. ಸದ್ಯ ಇದು ಗ್ರಾಹಕರ ಬಳಕೆ ತುಂಬಾ ವಿರಳವಾದ ಒಂದಂಶವಾಗಿದ್ದು ಕಾಲ ಕ್ರಮೇಣ ಪರಿಚಿತವಾಗುತ್ತಿದ್ದಂತೆ ಎಲ್ಲರೂ ಇದರ ಬಳಕೆ ಮಾಡುವುದನ್ನು ಕಾಣಬಹುದು.

advertisement

Leave A Reply

Your email address will not be published.