Karnataka Times
Trending Stories, Viral News, Gossips & Everything in Kannada

RBI: ಮತ್ತೊಂದು ಬ್ಯಾಂಕ್ ಲೈಸನ್ಸ್ ರದ್ದು ಮಾಡಿದ RBI, ಖಾತೆ ಇರುವವರು ಚೆಕ್ ಮಾಡಿಕೊಳ್ಳಿ

advertisement

ಇಂದು ಹೆಚ್ಚಾಗಿ ಜನರು ಮುಂದಿನ ಭವಿಷ್ಯದ ದೃಷ್ಟಿಯಿಂದ ದುಡಿದ ಸ್ವಲ್ಲ ಭಾಗವಾದರೂ ಸೇವಿಂಗ್ ಮಾಡಲು ಬಯಸುತ್ತಾರೆ. ಸೇವಿಂಗ್ ಅಂತ ಬಂದಾಗ ಬ್ಯಾಂಕ್, ಅಂಚೆ ಕಛೇರಿ (Post Office) ಹೀಗೆ ಹಲವು ಕಡೆಗಳಲ್ಲಿ ಹಣ ವನ್ನು ಸೇವಿಂಗ್ ಮಾಡುತ್ತಾರೆ. ಆದರೆ ಹಣ ಯಾವ ಬ್ಯಾಂಕ್ ನಲ್ಲಿ ಸೇವಿಂಗ್ ಮಾಡಿದ್ರೆ ಸೇಫ್ ಅನ್ನೋ ಬಗ್ಗೆಯು ನಾವು ಯೋಚನೆ ಮಾಡುತ್ತೇವೆ. ಯಾಕಂದ್ರೆ ಅರ್ ಬಿ ಐ (RBI) ಹಲವಾರು ರೀತಿಯಲ್ಲಿ ನೀತಿ ನಿಯಮಗಳನ್ನು ಬದಲಾವಣೆ ಮಾಡುತ್ತಲೆ ಇರುತ್ತದೆ. ಬ್ಯಾಂಕ್ ವಿಚಾರದಲ್ಲಿಯು ಇದೀಗ ಕೆಲವೊಂದಿಷ್ಟು ಬ್ಯಾಂಕ್ ನ ಪರವಾನಗಿ (Bank Licence) ರದ್ದು ಮಾಡಲು ಹೊರಟಿದೆ. ಹಾಗಿದ್ದರೆ ಯಾವ ಬ್ಯಾಂಕ್, ನಿಮ್ಮಲ್ಲೂ ಈ ಬ್ಯಾಂಕ್ ನ ಖಾತೆ ಇದೆಯೇ ಎಂದು ತಿಳಿಯಲು ಈ‌ ಲೇಖನ‌ ಓದಿ.

ಯಾವ ಬ್ಯಾಂಕ್:

ಈಗ ಆರ್‌ಬಿಐ (RBI) ಮತ್ತೊಂದು ಬ್ಯಾಂಕ್‌ನ ಪರವಾನಗಿಯನ್ನು (Bank Licence) ರದ್ದುಗೊಳಿಸಲು ತಿರ್ಮಾನಿಸಿದ್ದು ಈ ಬ್ಯಾಂಕ್‌ನಲ್ಲಿ ನಿಮ್ಮ‌ ಖಾತೆ ಇದ್ದರೆ ಕೆಲವೊಂದು ಸಮಸ್ಯೆಗಳನ್ನು ನೀವು ಎದುರಿಸಬಹುದು. ಹೌದು ಭಾರತೀಯ ರಿಸರ್ವ್ ಬ್ಯಾಂಕ್ ಮುಂಬೈನ ದಿ ಕಪೋಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (The Kapol Co-operative Bank Ltd) ಪರವಾನಗಿಯನ್ನು ರದ್ದುಗೊಳಿಸಲು ತಿರ್ಮಾನಿಸಿದೆ.

 

advertisement

ಯಾಕಾಗಿ ರದ್ದು:

ಇಂದು ಹೆಚ್ಚಿನ ಕಡೆಗಳಲ್ಲಿ ಬ್ಯಾಂಕ್‌ ಗಳು ಹುಟ್ಟಿಕೊಂಡಿವೆ.ಕೆಲವೊಂದು ಬ್ಯಾಂಕ್ ಗಳಿಗೆ ಸಾಕಷ್ಟು ಬಂಡವಾಳ ಇರುವುದಿಲ್ಲ. ಅದೇ ರೀತಿ ಈ ಬ್ಯಾಂಕ್ ನಲ್ಲೂ ಬಂಡವಾಳ ಮತ್ತು ಯಾವುದೇ ರೀತಿಯಲ್ಲಿ ಬಂಡವಾಳ ದ ಅಭಿವೃದ್ಧಿ, ಸಾಮರ್ಥ್ಯ ವಿಲ್ಲದ ಕಾರಣ ಆರ್‌ಬಿಐ (RBI) ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಇನ್ನೊಂದು ಬ್ಯಾಂಕ್ ಕ್ಲೋಸ್:

ಅದೇ ರೀತಿ ಅಹಮದಾಬಾದ್ ನ ಕಲರ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್‌ (Colour Merchants Co-Op Bank Ltd) ನ ಆರ್ಥಿಕ ಸ್ಥಿತಿಯನ್ನು ಗಮನಿಸಿ ಆರ್‌ಬಿಐ (RBI) ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದ್ದು, ಕಲರ್ ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ತನ್ನ ಅನುಮತಿ ಇಲ್ಲದೆ ಸಾಲ ನೀಡುವಂತಿಲ್ಲ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ. ಅದೇ ರೀತಿ ಹೂಡಿಕೆ ಮತ್ತು ಹೊಸ ಠೇವಣಿಗಳನ್ನು ಮಾಡುವಂತಿಲ್ಲ‌ ಎಂದು ಕಟ್ಟು ನಿಟ್ಟಿನ ನಿಯಮ ವನ್ನು ಜಾರಿಗೆ ತಂದಿದೆ.

ಈ ಬ್ಯಾಂಕ್ ಗಳಿಗೂ ಕ್ರಮ:

ಅದೇ ರೀತಿ ಅರ್ ಬಿ ಐ ಬ್ಯಾಂಕ್ ವಹಿವಾಟುಗಳ ಬಗ್ಗೆ ಗಮನ ಹರಿಸಿದ್ದು ಸಾಕಷ್ಟು ಬಂಡವಾಳ, ಅಕ್ರಮಗಳು ಮತ್ತು ಬ್ಯಾಂಕಿಂಗ್ ಷರತ್ತು ಗಳನ್ನು ಅನುಸರಿಸದ ಕಾರಣ ಕೆಲವೊಂದು ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಲು ತಿರ್ಮಾನಿಸಿದೆ. ಮೊಗಲ್ ಕೋ ಆಪರೇಟಿವ್ ಬ್ಯಾಂಕ್, ಮಿಲತ್ ಕೋ-ಆಪರೇಟಿವ್ ಬ್ಯಾಂಕ್, ಶ್ರೀ ಆನಂದ್ ಕೋ ಆಪರೇಟಿವ್ ಬ್ಯಾಂಕ್, ರೂಪಿ ಕೋ ಆಪರೇಟಿವ್ ಬ್ಯಾಂಕ್, ಹೀಗೆ ಹಲವು ಬ್ಯಾಂಕ್ ಗಳ ಪಾರವನಿಗೆ ರದ್ದು ಮಾಡಿದೆ.ಕಳೆದ ಹಲವು ವರ್ಷಗಳಿಂದ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಆರ್‌ಬಿಐ ನಿಗಾ ಇಟ್ಟಿದ್ದು‌ ಪ್ರಸ್ತಕ ವರ್ಷದಲ್ಲಿ ಕಟ್ಟು ನಿಟ್ಟಿನ ‌ನಿಯಮ ವನ್ನು ಜಾರಿಗೆ ತಂದಿದೆ.

advertisement

Leave A Reply

Your email address will not be published.