Karnataka Times
Trending Stories, Viral News, Gossips & Everything in Kannada

Income Tax: ಇಂತವರು ಇನ್ಮುಂದೆ ITR ಸಲ್ಲಿಸಬೇಕಾಗಿಲ್ಲ, ಹೊಸ ರೂಲ್ಸ್ ಜಾರಿಗೆ!

advertisement

ಆದಾಯ ತೆರಿಗೆಗಳು ಸರ್ಕಾರಗಳಿಗೆ ಆದಾಯದ ಮುಖ್ಯ ಮೂಲವಾಗಿ ಪರಿಗಣಿಸಿದೆ. ಆದಾಯ ತೆರಿಗೆ (Income Tax) ಎನ್ನುವುದು ಸರಕಾರಕ್ಕೆ ಪಾವತಿ ಮಾಡುವಂತಹ ಒಂದು ವಿಧದ ತೆರಿಗೆಯಾಗಿದ್ದು ಆದಾಯ ಇಲಾಖೆಯು ಯಾವ ವ್ಯಕ್ತಿ ಎಷ್ಟು ತೆರಿಗೆ ಪಾವತಿ ಮಾಡಬೇಕು ಎಂಬುದನ್ನು ನಿರ್ಧಾರ ಮಾಡುತ್ತದೆ, ಸರ್ಕಾರವು ತಮ್ಮ ವ್ಯಾಪ್ತಿಯಲ್ಲಿರುವ ವ್ಯವಹಾರಗಳು ಮತ್ತು ವ್ಯಕ್ತಿಗಳು ಗಳಿಸುವ ಆದಾಯದ ಮೇಲೆ ವಿವಿಧ ರೀತಿಯ ತೆರಿಗೆ ಹಣ ವನ್ನು ವಿಧಿಸುತ್ತವೆ. ವೈಯಕ್ತಿಕ ಆದಾಯ ತೆರಿಗೆಯು ಆ ವ್ಯಕ್ತಿಯು ಸಂಪಾದಿಸುವ ವೇತನ, ಮತ್ತು ಇತರ ಆದಾಯದ ಮೇಲೆ ವಿಧಿಸಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಇದು ತಮ್ಮ ಹಕ್ಕು ಎಂಬಂತೆ ತೆರಿಗೆ ಕಟ್ಟಲೆಬೇಕಾಗುತ್ತದೆ.

ಹೊಸ ವೈಶಿಷ್ಟ್ಯ:

 

 

ಇದೀಗ ಹೊಸ ಆದಾಯ ತೆರಿಗೆ (Income Tax) ಪೋರ್ಟಲ್‌ನೊಂದಿಗೆ, ITR ಫೈಲಿಂಗ್ ಚಟುವಟಿಕೆಯಲ್ಲಿ ಕೆಲವು ನಿಯಮಗಳನ್ನು‌ ಚೆಂಜ್ ಮಾಡಿದ್ದು ಕೆಲವೊಂದು ವೈಶಿಷ್ಟ್ಯತೆಗಳನ್ನು ಕೂಡ ಪರಿಚಯ ಮಾಡಿದೆ. ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್‌ (Income Tax Returns) ಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭ ಗೊಳಿಸಿದ್ದು, ಈ ವರ್ಷ ಡಿಸ್ಕಾರ್ಡ್ ರಿಟರ್ನ್ ಎಂಬ ಹೊಸ ವೈಶಿಷ್ಟ್ಯವನ್ನು ತಂದಿದೆ.

advertisement

ದಂಡ ಪಾವತಿ ಮಾಡಬೇಕಾಗುತ್ತದೆ:

ನಿಗದಿತ ಸಮಯದೊಳಗೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಮಾಡುವುದು ಕೂಡ ಬಹಳ ಮುಖ್ಯವಾಗುತ್ತದೆ. ಸರಿಯಾದ ಸಮಯಕ್ಕೆ ನೀವು ಪಾವತಿ ಮಾಡದೇ ವಿಫಲವಾದರೆ ರೂ 5,000 ವರೆಗೆ ದಂಡವನ್ನು ಪಾವತಿ ಮಾಡುವುದು ಕಡ್ಡಾಯ ವಾಗಿದೆ. ಆದರೆ ಕೆಲವು ಜನರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಗತ್ಯವಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ಕೆಲವೊಂದು ವರ್ಗಕ್ಕೆ ನಿಬಂಧನೆಯನ್ನು ಸರ್ಕಾರ ಮಾಡಿದೆ.

ಇವರು ಸಲ್ಲಿಸಬೇಕಾಗಿಲ್ಲ:

ಆದಾಯ ತೆರಿಗೆ ನಿಯಮದ (Income Tax Rules) ಪ್ರಕಾರ, ಹಿರಿಯ ನಾಗರಿಕರಿಗೆ ITR ಫೈಲಿಂಗ್ ಕಡ್ಡಾಯವಲ್ಲ ಎಂದಿದೆ ಹೌದು ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ. 75 ವರ್ಷ ವಯಸ್ಸಿನವರು ಮತ್ತು ಅವರ ಆದಾಯದ ಮೂಲವು ಕೇವಲ ಪಿಂಚಣಿಯನ್ನು ಹೊಂದಿರುವುದು ಆಗಿದ್ದರೆ, ಅವರನ್ನು ಐಟಿಆರ್ ಅನ್ನು ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗಿದ್ದು, ಪಿಂಚಣಿ ಪಡೆಯುವವರು ಮತ್ತು ಬ್ಯಾಂಕ್ ಠೇವಣಿಗಳಿಂದ ಬಡ್ಡಿ ಪಡೆಯುವ ಹಿರಿಯ ವ್ಯಕ್ತಿಗಳಿಗೆ ಐಟಿಆರ್ (ITR) ಸಲ್ಲಿಕೆ ಮಾಡುವುದರಿಂದ ವಿನಾಯಿತಿ ಪಡೆದಿರುತ್ತಾರೆ.

advertisement

Leave A Reply

Your email address will not be published.