Karnataka Times
Trending Stories, Viral News, Gossips & Everything in Kannada

Paytm FASTag: ನಿಮ್ಮ Paytm FASTag ಅನ್ನು ನಿಷ್ಕ್ರಿಯಗೊಳಿಸಲು ಈ ವಿಧಾನ ಅನುಸರಿಸಿ, ಮಾರ್ಚ್ 15 ರವರೆಗೆ ಮಾತ್ರ ಅವಕಾಶ!

advertisement

ಫಾಸ್ಟ್‌ಟ್ಯಾಗ್ (FasTag) ಎನ್ನುವುದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭಿಸಿದ ನಿಯಮ ಆಗಿದ್ದು ಈ ಮೊತ್ತವನ್ನು ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾ (Toll Plaza) ಗಳಲ್ಲಿ ಸಂಗ್ರಹ ಮಾಡಲಾಗುತ್ತದೆ.ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಸಮಸ್ಯೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಸೌಲಭ್ಯ ವನ್ನು ಜಾರಿ ಮಾಡಿದೆ.

ಸಮಯ ವಿಸ್ತರಣೆ:

ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ Paytm Payments Bank ಗೆ ಸುಮಾರು 15 ದಿನಗಳ ವರೆಗೆ ಅವಕಾಶ ನೀಡಿದೆ. ಫೆಬ್ರವರಿ 29, ರ ತನಕ ಈ ಹಿಂದೆ ಗಡುವು ನೀಡಿದ್ದು, ಇದೀಗ ಮಾರ್ಚ್ 15 ರವರೆಗೆ ಸಮಯ ವಿಸ್ತರಿಸಿದೆ. ಮಾರ್ಚ್ 15 ರ ನಂತರ ಪೆಟಿಎಮ್ ಪಾವತಿ ಯಾವುದೇ ಗ್ರಾಹಕರ ಖಾತೆಗಳು, ಪ್ರಿಪೇಯ್ಡ್ ಮೊತ್ತ, ಫಾಸ್ಟ್‌ಟ್ಯಾಗ್‌ಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌, ಠೇವಣಿ ಅಥವಾ ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್ ಅಪ್ ಗಳಿಗೆ ಅನುಮತಿ‌ ಇಲ್ಲ ಎಂದು ಅರ್ ಬಿ ಐ (RBI) ತಿಳಿಸಿದೆ‌.

ಬಳಕೆ ಮಾಡಿಕೊಳ್ಳಿ:

 

advertisement

 

Paytm FASTag ಅನ್ನು ಈಗಾಗಲೇ ಖಾತೆಯಲ್ಲಿರುವ ಬ್ಯಾಲೆನ್ಸ್ ಉಳಿಸಿದ್ದರೆ ಟೋಲ್‌ (Toll) ಗಳನ್ನು ಪಾವತಿಸಲು ಬಳಸಬಹುದು, ಆದರೆ ಮಾರ್ಚ್ 15 ರ ನಂತರ ಯಾವುದೇ ಅನುಮತಿ ಇದಕ್ಕೆ ನೀಡಲಾಗುವುದು ಇಲ್ಲ ಎಂದು RBI ಸ್ಪಷ್ಟ ಪಡಿಸಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿಯಮಗಳನ್ನು ಉಲ್ಲಂಘನೆ ಮಾಡುವುದು ಕಂಡು ಬಂದರೆ ಜಾರಿ ನಿರ್ದೇಶ ನಾಲಯವು ಬ್ಯಾಂಕ್ ವಿರುದ್ದ ದಂಡ ವಿಧಿಸಬಹುದು.

ನಿಮ್ಮ Paytm FASTag ಅನ್ನು ನಿಷ್ಕ್ರಿಯಗೊಳಿಸಿ:

ನೀವು Paytm FASTags ನಿಷ್ಕ್ರಿಯ ಮಾಡುದಾದ್ರೆ 1800-120-4210 ಅನ್ನು ಡಯಲ್ ಮಾಡಿ ಮೊಬೈಲ್ ಸಂಖ್ಯೆ ಮತ್ತು ವಾಹನ ನೋಂದಣಿ ಸಂಖ್ಯೆ ಅಥವಾ ಟ್ಯಾಗ್ ಐಡಿಯನ್ನು ನೀಡುವ ಮೂಲಕ ನಿಮ್ಮ FASTag ನಿಷ್ಕ್ರಿಯ ಮಾಡಬಹುದು. ಅನ್ ಲೈನ್ ನಲ್ಲಿ ಸಲ್ಲಿಕೆ ಮಾಡುದಾದ್ರೆ Google Play Store ನಲ್ಲಿ My FASTag ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ Buy FASTag ಅನ್ನು ಕ್ಲಿಕ್ ಮಾಡಿ FASTag ಅನ್ನು ಖರೀದಿಸಿದರೆ ನಿಮ್ಮ ವಿಳಾಸಕ್ಕೆ ತಲುಪಿಸಲಾಗುತ್ತದೆ.

advertisement

Leave A Reply

Your email address will not be published.