Karnataka Times
Trending Stories, Viral News, Gossips & Everything in Kannada

BSNL: ಕಡಿಮೆ ಬೆಲೆಗೆ ಇಡೀ ವರ್ಷದ ರೀಚಾರ್ಜ್ ಆಫರ್ ಕೊಟ್ಟ BSNL! ಕಂಗಾಲಾದ ಜಿಯೋ

advertisement

ಭಾರತದಲ್ಲಿ ಪ್ರಸ್ತುತ ಟೆಲಿಕಾಂ ಕಂಪನಿಗಳ ಹೊಸ ಹೊಸ ಯೋಜನೆಗಳು ಗ್ರಾಹಕರನ್ನು ಆಕರ್ಷಿಸುತ್ತ ಇದೆ. ಭಾರತದಲ್ಲಿ ಪ್ರಮುಖವಾಗಿ ಜಿಯೋ (Jio), ಏರ್ಟೆಲ್ (Airtel) ಮತ್ತು ಬಿಎಸ್ಎನ್ಎಲ್ (BSNL) ನೆಟ್ವರ್ಕ್ ಗಳು ಬಹಳಷ್ಟು ಗ್ರಾಹಕರಿಂದ ಮಾನ್ಯತೆ ಪಡೆದಿದೆ. ಇನ್ನು ಈ ಮೂರು ಸಂಸ್ಥೆಗಳು ತನ್ನದೇ ಆದಂತಹ ರಿಯಾಯಿತಿ ಮತ್ತು ವಿಶೇಷ ಆಫರ್ ಗಳೊಂದಿಗೆ ಆಗಾಗ ಗ್ರಾಹಕರನ್ನು ಹೆಚ್ಚಾಗಿ ಗಮನ ಸೆಳೆಯುತ್ತಾ ಇರುತ್ತದೆ.

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸರ್ಕಾರಿ ವಲಯದ ಟೆಲಿಕಾಂ ಕಂಪನಿ, ಇದು ತನ್ನ ಕೈಗೆಟುಕುವ ರೀಚಾರ್ಜ್ ಯೋಜನೆಗಳೊಂದಿಗೆ ಏರ್‌ಟೆಲ್ ಮತ್ತು ಜಿಯೋ ಟೆಲಿಕಾಂ ಸಂಸ್ಥೆಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ಇದರಿಂದ ಈಗಾಗಲೇ ರಿಯಾಯಿತಿಯನ್ನು ನೀಡಿರುವಂತಹ ಕಂಪನಿಗಳಿಗೆ ಮತ್ತಷ್ಟು ರಿಯಾಯಿತಿ ನೀಡಬೇಕಾದ ಪರಿಸ್ಥಿತಿಯೂ ಕೂಡ ಬಂದು ನಿಲ್ಲಬಹುದಾಗಿದೆ. ಈಗಾಗಲೇ ಬಿಎಸ್ಎನ್ಎಲ್ (BSNL) 365 ದಿನಗಳಿಗೂ ಸೇರಿದಂತೆ ಹೊಸ ರೀಚಾರ್ಜ್ ಪ್ಲಾನ್ ಒಂದನ್ನು ತೆಗೆದುಕೊಂಡು ಬಂದಿದ್ದು, ಅದರ ಮೂಲಕವಾಗಿ ಅಗ್ಗದ ಬೆಲೆಯಲ್ಲಿ ಒಂದು ವರ್ಷಕ್ಕೆ ಸಂಪೂರ್ಣವಾಗಿ ರಿಚಾರ್ಜ್ ಮಾಡಬಹುದಾಗಿದೆ.

ಬಿಎಸ್ಎನ್ಎಲ್ (BSNL)ನೀಡಿರುವಂತಹ ಆಫರ್ ಗಳೇನು ಮತ್ತು ಅದರಿಂದ ಇರುವಂತ ಪ್ರಯೋಜನಗಳೇನು ತಿಳಿದುಕೊಳ್ಳೋಣ:

PRBT ಉಚಿತ: BSNL ಅನೇಕ ಪ್ರಿಪೇಯ್ಡ್ (Pre-paid)ಯೋಜನೆಗಳಲ್ಲಿ ಉಚಿತ ಪರ್ಸನಲ್ ರಿಂಗ್ ಬ್ಯಾಕ್ ಟೋನ್ (PRBT) ಅನ್ನು ಒಳಗೊಂಡಿದೆ.

Eros Now ಚಂದಾದಾರಿಕೆ: Eros Now ಎಂಟರ್ಟೈನ್ಮೆಂಟ್ ಅಥವಾ ಮನೊರಂಜನ ವೇದಿಕೆಗೆ ಉಚಿತ ಚಂದಾದಾರಿಕೆಯೊಂದಿಗೆ ಆಯ್ದ ಯೋಜನೆಗಳು ಸಹ ಬರುತ್ತವೆ.

advertisement

Image Source: 91 Mobiles

ಇನ್ನು ಇದರ ರಿಚಾರ್ಜ್ ಯೋಜನೆಗಳನ್ನು ನೋಡುವುದಾದರೆ:

ಮೊದಲಿಗೆ ಒಂದು ವರ್ಷಕ್ಕೆ ಇರುವ ಯೋಜನೆ ರೂ.1,198 ಯೋಜನೆ: ಇದು ದೀರ್ಘಾವಧಿಯ ಯೋಜನೆಯಾಗಿದ್ದು, 300 ನಿಮಿಷಗಳ ಕರೆ, 3GB ಡೇಟಾ ಮತ್ತು 365 ದಿನಗಳ ಮಾನ್ಯತೆಯೊಂದಿಗೆ ತಿಂಗಳಿಗೆ 30 SMS ಗಳನ್ನು ನೀಡುತ್ತದೆ.

ಎರಡನೆಯದಾಗಿ 80 ದಿನಗಳಿಗೆ ರೂ.399 ಯೋಜನೆ: ಈ ಯೋಜನೆಯು ದಿನಕ್ಕೆ 1GB ಡೇಟಾ, ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನ್ ಲಿಮಿಟೆಡ್ ಧ್ವನಿ ಕರೆ ಮತ್ತು 80 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 100 SMS ನೀಡುತ್ತದೆ.

ಒಂದು ತಿಂಗಳ ಹೊಸ ಯೋಜನೆ ಎಂದರೆ ರೂ 187 ಯೋಜನೆ: ಇಲ್ಲಿ ದಿನಕ್ಕೆ 2GB ಡೇಟಾ, 100 SMS ಮತ್ತು ಅನ್ ಲಿಮಿಟೆಡ್ ಧ್ವನಿ ಕರೆಯನ್ನು ಎಲ್ಲಾ ನೆಟ್‌ವರ್ಕ್‌ಗಳಲ್ಲಿ 28 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ.

24 ದಿನಗಳ ಯೋಜನೆ ಎಂದರೆ ರೂ 155 ಯೋಜನೆ: ವ್ಯಾಲಿಡಿಟಿ 24 ದಿನಗಳು. ಇದು ಅನ್ ಲಿಮಿಟೆಡ್ ಧ್ವನಿ ಕರೆಗಳನ್ನು ಮತ್ತು ದಿನಕ್ಕೆ 1GB ಡೇಟಾ ಮತ್ತು 100 SMS ಗಳನ್ನು ಒಳಗೊಂಡಿದೆ.

advertisement

Leave A Reply

Your email address will not be published.