Karnataka Times
Trending Stories, Viral News, Gossips & Everything in Kannada

Toll Tax: ಟೋಲ್ ಕಟ್ಟುವ ಎಲ್ಲರಿಗೂ ಕಹಿಸುದ್ದಿ! ಏಪ್ರಿಲ್ 1 ರಿಂದ ಹೊಸ ರೂಲ್ಸ್

advertisement

ಇಂದು ವಾಹನಗಳ ದಟ್ಟಣೆ ಎಲ್ಲಾ ಕಡೆಯು ಹೆಚ್ಚಾಗಿದೆ. ರಸ್ತೆಯಲ್ಲಿ ಬೈಕ್, ಕಾರು, ಇತ್ಯಾದಿ ವಾಹನಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದ್ದು ಸಂಚಾರ ನಿಯಮವನ್ನು ಕೂಡ ಈಗಾಗಲೇ ಬಿಗಿಗೊಳಿಸಲಾಗಿದೆ. ಅದೇ ರೀತಿ ಪ್ರಯಾಣಿಕರು ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಪ್ರತಿಯೊಂದು ನಿಗಮದ ನಿಯಮವನ್ನು ಕೂಡ ಪಾಲನೇ ಮಾಡುವುದು ಕೂಡ ಅತೀ ಅಗತ್ಯವಾಗಿದ್ದು ಅದರಲ್ಲಿ ಟೋಲ್ ಪಾವತಿ ಕೂಡ ಒಂದಾಗಿದೆ. ಟೋಲ್ ಟ್ಯಾಕ್ಸ್ (Toll Tax) ಅಥವಾ ಟೋಲ್ ಎನ್ನುವುದು ಅಂತರರಾಜ್ಯ, ಇತರ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ದಾಟುವಾಗ ವಾಹನ ಚಾಲಕರು ಪಾವತಿಸಬೇಕಾದ ಶುಲ್ಕವಾಗಿದ್ದು ಇದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಂತ್ರಣದಲ್ಲಿ ಇರುತ್ತದೆ.

ಪಾವತಿ ಕಡ್ಡಾಯ

ಸರ್ಕಾರ ವಿಧಿಸುವಂತಹ ಹಲವು ತೆರಿಗೆಗಳಲ್ಲಿ ಟೋಲ್ ಟ್ಯಾಕ್ಸ್ (Toll Tax) ಕೂಡ ಒಂದಾಗಿದ್ದು ವಾಹನ ಚಾಲಕರಿಂದ ಹಣವನ್ನು ವಸೂಲಿ ಮಾಡಲಾಗುತ್ತದೆ. ಟೋಲ್ ರಸ್ತೆಗಳಲ್ಲಿ ನಾಲ್ಕು ಚಕ್ರದ ವಾಹನಗಳು ಅಥವಾ ದೊಡ್ಡ ವಾಹನಗಳು ಹಾದುಹೋಗುವವರಿಗೆ ಈ ತೆರಿಗೆ ಶುಲ್ಕವನ್ನು ಕಡ್ಡಾಯವಾಗಿ ವಿಧಿಸಲಾಗುತ್ತದೆ.

Image Source: Informalnewz

 

ಟೋಲ್ ದರ ಹೆಚ್ಚಳ

advertisement

ಇದೀಗ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ನಗರದ ಹೊರವಲಯದಲ್ಲಿರುವ 4 ಟೋಲ್ ಪ್ಲಾಜಾದಲ್ಲಿ ಬಳಕೆದಾರರ ಶುಲ್ಕಗಳನ್ನು ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ. ಪ್ರತಿ ಪ್ರಯಾಣಕ್ಕೆ ದರ 5 ರಿಂದ 20 ರವರೆಗೆ ಹೆಚ್ಚಾಗಲಿದೆ ಎಂದು ಮಾಹಿತಿ ಬಂದಿದೆ.

ಸಾರ್ವಜನಿಕರ ಆಕ್ರೋಶ

ಟೋಲ್ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ಈಗಾಗಲೇ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರು ಮತ್ತು ತಮಿಳುನಾಡಿನ ದಕ್ಷಿಣದ ಜಿಲ್ಲೆಗಳ ಪ್ರಯಾಣದ ವೆಚ್ಚವನ್ನು ಕೂಡ ಏಪ್ರಿಲ್ 1 ರಿಂದ ಹೆಚ್ಚು ಮಾಡಲಾಗುತ್ತದೆ. ಎಪ್ರಿಲ್ ಒಂದರಿಂದ ದರವೂ 150 ಕ್ಕೆ ರೂಪಾಯಿವರೆಗೆ ಹೆಚ್ಚಿಸಲಾಗುತ್ತದೆ.

Image Source: Mint

ಚುನಾವಣೆ ಗೆದ್ದರೆ ಈ ಪ್ರಣಾಳಿಕೆ?

ರಾಷ್ಟ್ರೀಯ ಹೆದ್ದಾರಿಗಳ ಮಾರ್ಗದ ಸಂಚಾರದಲ್ಲಿ ಹಲವಾರು ಟೋಲ್ ಪ್ಲಾಜಾ (Toll Plaza) ಗಳಲ್ಲಿ ದರ ಈಗಾಗಲೇ ದುಪ್ಪಟ್ಟು ಆಗಿದೆ.‌ ಈಗಾಗಾಲೇ ಇದಕ್ಕಾಗಿ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಇಂಡಿಯಾದ ಬಣವು ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿದರೆ ಎಲ್ಲಾ ಟೋಲ್ ಗಳ ಪ್ಲಾಜಾಗಳನ್ನು ತೆಗೆದು ಹಾಕಲಿದ್ದೇವೆ, ಪ್ರಯಾಣಿಕರಿಗೆ ಈ ನಿಟ್ಟಿನಲ್ಲಿ ಸುಲಭ ಪ್ರಯಾಣಕ್ಕೆ ಒತ್ತು ನೀಡುತ್ತೇವೆ ಎಂದು ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಡಿಎಂಕೆ ಭರವಸೆಯನ್ನು ಕೂಡ ನೀಡಲಾಗಿತ್ತು. ಆದ್ರೆ ಚುನಾವಣೆ ಸಂದರ್ಭದಲ್ಲೇ ಟೋಲ್ ದರ ಹೆಚ್ಚಳವಾಗಲಿದೆ ಎನ್ನುವ ಸುದ್ದಿ ಸಿಕ್ಕಿದೆ.

advertisement

Leave A Reply

Your email address will not be published.