Karnataka Times
Trending Stories, Viral News, Gossips & Everything in Kannada

Low Maintenance Car: ತಿಂಗಳಿಗೆ ಕೇವಲ 519 ರೂಪಾಯಿಗಳ ಖರ್ಚಿನಲ್ಲಿ ಓಡುವ ಈ ಕಾರು! ಮುಗಿಬಿದ್ದ ಜನ

advertisement

ಸದ್ಯದ ಮಟ್ಟಿಗೆ ಇಡೀ ಭಾರತ ದೇಶದಲ್ಲಿ ನೋಡೋದಾದ್ರೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಓಡಿಸಬಹುದಾದಂತಹ ಎಲೆಕ್ಟ್ರಿಕ್ ಕಾರು MG Comet Ev ಆಗಿದೆ. ಇದಕ್ಕೆ ಕಾರಣ ಆಗಿರುವಂತಹ ಪ್ರಮುಖ ವಿಚಾರ ಏನಂದರೆ ದೇಶದ ಸಾಕಷ್ಟು ಕಡೆಗಳಲ್ಲಿ ಕಾರಿನ ಚಾರ್ಜಿಂಗ್ ಸ್ಟೇಷನ್ ಗಳು ಹೆಚ್ಚಾಗಿ ಓಪನ್ ಆಗಿದ್ದು ಇದರಿಂದಾಗಿ ಎಲೆಕ್ಟ್ರಿಕ್ ಕಾರಿನ ಮುಖಾಂತರ ಲಾಂಗ್ ಡ್ರೈವ್ ಹೋಗುವಂತಹ ಅವಕಾಶ ಕೂಡ ಹೆಚ್ಚಾಗಿದೆ.

MG Comet Ev ಅತ್ಯಂತ ಕಡಿಮೆ ಖರ್ಚಿನ ಅಡ್ವಾನ್ಸ್ ಎಲೆಕ್ಟ್ರಿಕ್ ಕಾರ್:

MG Comet Ev ಕಾರು ಭಾರತ ದೇಶದ ಅತ್ಯಂತ ಕಡಿಮೆ ಖರ್ಚಿನ (Low Maintenance Car) ಎಲೆಕ್ಟ್ರಿಕ್ ಕಾರ್ ಆಗಿದೆ. ತಿಂಗಳಿಗೆ ಕೇವಲ 519 ರೂಪಾಯಿಗಳ ಖರ್ಚಿನಲ್ಲಿ ನೀವು ಈ ಕಾರಿನಲ್ಲಿ ಓಡಾಟ ನಡೆಸಬಹುದಾಗಿದೆ. ಅಂದರೆ ದಿನಕ್ಕೆ 33Km ಗಳ ಲೆಕ್ಕಾಚಾರದಲ್ಲಿ ನೀವು 519 ರೂಪಾಯಿಗಳ ಖರ್ಚಿನಲ್ಲಿ 1,000km ವರೆಗೆ ಕೂಡ ಓಡಾಟ ನಡೆಸಬಹುದಾಗಿದೆ. ಈ ಮೂಲಕ ನೀವು MG Comet Ev ಎಲೆಕ್ಟ್ರಿಕ್ ಕಾರಿನ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ಗಳ ಹೋಲಿಕೆಯಲ್ಲಿ ಸಾವಿರಾರು ರೂಪಾಯಿಗಳ ಉಳಿತಾಯವನ್ನು ಮಾಡಿದಂತಾಗುತ್ತದೆ.

Image Source: AutoEV Times

advertisement

ಇನ್ನು ಒಂದು ಲೀಟರ್ ಪೆಟ್ರೋಲ್ ನಲ್ಲಿ ಈ ಕಾರನ್ನು ನೋಡುವುದಾದರೆ 15 km ಚಲಿಸುತ್ತದೆ ಹಾಗೂ 1000 km ಚಲಿಸುವುದಕ್ಕಾಗಿ ನೀವು 67 ಲೀಟರ್ ಗಿಂತಲೂ ಹೆಚ್ಚಿನ ಪೆಟ್ರೋಲ್ ಹಾಕಬೇಕಾಗುತ್ತದೆ. ಈಗ ಇರುವಂತಹ ಪೆಟ್ರೋಲ್ ಬೆಲೆಯನ್ನು ಗಮನಿಸುವುದಾದರೆ ಇದಕ್ಕಾಗಿ ನೀವು 6400 ಗಳಿಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಈ ಮೂಲಕವೇ ನೀವು MG Comet Ev ಕಾರು ಎಷ್ಟು ಕಡಿಮೆ ಖರ್ಚಿನಲ್ಲಿ (Low Maintenance Car) ಹೆಚ್ಚು ಲಾಭವನ್ನು ನೀಡುವಂತಹ ಎಲೆಕ್ಟ್ರಿಕ್ ಕಾರು ಎನ್ನುವುದನ್ನು ಗಮನಿಸಬಹುದಾಗಿದೆ. ಇನ್ನು ಇದರ ಬೆಲೆ ಕೂಡ ಕೇವಲ 6.99 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.

MG Comet Ev ಕಾರಿನ ರೇಂಜ್:

Image Source: Aaj Tak

ಕಾರಿನ ಉದ್ದ ಮೂರು ಮೀಟರ್ಗಿಂತಲೂ ಕಡಿಮೆ ಹಾಗೂ ಇದರ ಟರ್ನಿಂಗ್ ರೇಡಿಯಸ್ 4.2 ಮೀಟರ್ ಆಗಿದೆ. ನೂರಕ್ಕಿಂತಲೂ ಹೆಚ್ಚಿನ ವಾಯ್ಸ್ ಕಮಾಂಡ್ ಹಾಗೂ 55ಕ್ಕಿಂತಲೂ ಹೆಚ್ಚು ಕನೆಕ್ಟೆಡ್ ಫ್ಯೂಚರ್ ಗಳನ್ನು ಈ ಕಾರಿನಲ್ಲಿ ಕಾಣಬಹುದಾಗಿದೆ. 17.3kwh ಲೀಥಿಯಂ ಅಯಾನ್ ಬ್ಯಾಟರಿಯನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. 42Ps ಪವರ್ ಹಾಗೂ 110Nm ಟಾರ್ಕ್ ಜನರೇಟ್ ಮಾಡುವಂತಹ ಸಾಮರ್ಥ್ಯ ಇದಕ್ಕಿದೆ. ಏಳು ಗಂಟೆಯಲ್ಲಿ ಫುಲ್ ಚಾರ್ಜ್ ಆಗುವಂತಹ ಸಾಮರ್ಥ್ಯವನ್ನು ಹೊಂದಿರುವಂತಹ ಈ ಕಾರು, ಫುಲ್ ಚಾರ್ಜ್ ನಲ್ಲಿ 230Km ರೇಂಜ್ ನೀಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಸದ್ಯದ ಮಟ್ಟಿಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದ್ದು ಅಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೆಚ್ಚು ಉಪಯೋಗಗಳನ್ನು ನೀಡುವಂತಹ ಕಾರುಗಳ ಪೈಕಿಯಲ್ಲಿ MG Comet Ev ಕಾರನ್ನು ನಾವು ಪರಿಗಣಿಸಬಹುದಾಗಿದೆ.

advertisement

Leave A Reply

Your email address will not be published.