Karnataka Times
Trending Stories, Viral News, Gossips & Everything in Kannada

Gas Cylinder: ಯಾವುದೇ ಗ್ಯಾಸ್ ಸಿಲಿಂಡರ್ ಹೊಂದಿರುವವರಿಗೆ ಸಿಹಿಸುದ್ದಿ! ಇನ್ಮೇಲೆ ಈ ಸೇವೆ ಉಚಿತ

advertisement

ಇಂದು ಪ್ರತಿಯೊಬ್ಬರಿಗೂ ಕೂಡ ಮೂಲಭೂತ ಅವಶ್ಯಕ ವಸ್ತುಗಳು ಬಹಳ ಮುಖ್ಯವಾಗುತ್ತದೆ.ಅದರಲ್ಲಿ ಮುಖ್ಯ ವಾಗಿ ದಿನ ನಿತ್ಯ ಬಳಕೆ ಮಾಡುವ ವಸ್ತು ಗಳು ಬಹಳ ಮುಖ್ಯವಾಗಿದ್ದು ಅಕ್ಕಿ, ತರಕಾರಿ, ಹಾಲು,ಗ್ಯಾಸ್ ಇತ್ಯಾದಿ ಆಹಾರ ಬಳಕೆಯ ವಸ್ತುಗಳು ಕೂಡ ಒಂದಾಗಿದೆ. ಹಾಗಾಗಿ ಆಹಾರ ತಯಾರಿಸಲು ಗ್ಯಾಸ್ ಸಂಪರ್ಕದ ಅವಶ್ಯಕತೆ ಎಲ್ಲಾ ಮನೆಯಲ್ಲಿ ಇದ್ದು ಇಂದು ಉಚಿತವಾಗಿ ಗ್ಯಾಸ್ ಸಂಪರ್ಕವನ್ನು ಸಹ ಸರಕಾರ ಕಲ್ಪಿಸಿದೆ.‌ ಉಚಿತ ಸಿಲಿಂಡರ್ ಜೊತೆ ಸಬ್ಸಿಡಿ ಯನ್ನು ಸಹ ಒದಗಿಸುತ್ತಿದೆ‌.

ಉಜ್ವಲ ಯೋಜನೆ

ಈಗಾಗಲೇ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ‌ ಉಚಿತ ಸಿಲಿಂಡರ್ (Gas Cylinder)  ವಿತರಣೆ ಮಾಡಲಾಗುತ್ತಿದ್ದು ಗ್ರಾಹಕರಿಗೆ ಉಚಿತ ಎಲ್ ಪಿಜಿ ಮತ್ತು ಗ್ಯಾಸ್ ಸ್ಟವ್ ನೀಡಲಾಗುತ್ತದೆ. ಅದೇ ರೀತಿ ಕೇಂದ್ರ ಸರ್ಕಾರವು ಸಬ್ಸಿಡಿಯನ್ನು ಕೂಡ ವಿತರಣೆ ಮಾಡುತ್ತಿದ್ದು 200 ರೂ.ನಿಂದ 300 ರೂಗೆ ಸಬ್ಸಿಡಿ ನೀಡಲಿದೆ. ಪ್ರತಿಯೊಂದು ಮನೆಗೂ ಎಲ್​ಪಿಜಿ ಸಂಪರ್ಕ ಕಲ್ಪಿಸಬೇಕು, ಮಹಿಳೆಯರಿಗೆ ಸಹಾಯಕವಾಗಬೇಕು ಎಂಬ ನಿಟ್ಟಿನಲ್ಲಿ ಪಿಎಂ ಉಜ್ವಲ (PM Ujjwala) ಯೋಜನೆಯನ್ನು ಆರಂಭ ಮಾಡಲಾಗಿದೆ

ಸುರಕ್ಷತಾ ತಪಾಸಣೆ

ಅದೇ ರೀತಿ ಇದೀಗ ಗ್ಯಾಸ್ ಸಂಪರ್ಕಗಳ ಸುರಕ್ಷತ ತಪಾಸಣೆ ಯನ್ನು ಮಾಡಲು ಸರಕಾರ ಮುಂದಾಗಿದೆ. ಸರ್ಕಾರಿ ತೈಲ ಕಂಪನಿಗಳು ಮತ್ತು ಅವುಗಳ ವಿತರಕರ ಜಂಟಿ ಅಭಿಯಾನದಲ್ಲಿ, ದೇಶಾದ್ಯಂತ ಅನಿಲ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ ಸುರಕ್ಷತಾ ತಪಾಸಣೆಗಳನ್ನು ಮಾಡಲಾಗುತ್ತದೆ

advertisement

Image Source: Mathrubhumi English

ಉಚಿತ ತಪಾಸಣೆ

ಈ ತಪಾಸಣೆಯು ಉಚಿತವಾಗಿದ್ದು ಡೆಲಿವರಿ ಮ್ಯಾನ್ ಅಥವಾ ಸಿಲಿಂಡರ್ ಮೆಕ್ಯಾನಿಕ್ ಸುರಕ್ಷತಾ ನಿಯಮಗಳನ್ನು ಪರಿಶೀಲನೆ ಮಾಡಲಿದ್ದು ರಾಜಧಾನಿ ದೆಹಲಿ ಮತ್ತು ದೇಶದ ಎಲ್ಲಾ ಪ್ರದೇಶಗಳಲ್ಲಿಯು ಈ ಸೌಲಭ್ಯ ಆರಂಭ ಮಾಡಲಾಗಿದ್ದು ‌ ದೇಶದ ಎಲ್ಲಾ 30 ಕೋಟಿ ದೇಶೀಯ ಅನಿಲ ಗ್ರಾಹಕರ ಮನೆಗಳಿಗೆ ಈ ಸೌಲಭ್ಯ ವಿತರಣೆ ಮಾಡಲಿದೆ.

ಉಚಿತ ಗ್ಯಾಸ್ ಪಡೆಯಲು ಅರ್ಜಿ ಸಲ್ಲಿಸಿ

ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಇನ್ನು ಕೂಡ ಅವಕಾಶ ಇದ್ದು ಈ ಯೋಜನೆಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್ pmujjwalayojana.com ಇಲ್ಲಿ ಮಾಹಿತಿ ಪಡೆಯಬಹುದಾಗಿದೆ. ಅದೇ ರೀತಿ ಗ್ಯಾಸ್ ಸುರಕ್ಷತಾ ತಪಾಸಣೆಗಳನ್ನು ಕೂಡ ಕಲ್ಪಿಸುತ್ತಿದ್ದು ಇದರ ಸದುಪಯೋಗ ವನ್ನು ಸಹ ಜನರು ಪಡೆಯಬಹುದು.

advertisement

Leave A Reply

Your email address will not be published.