Karnataka Times
Trending Stories, Viral News, Gossips & Everything in Kannada

PM Narendra Modi : ಸ್ಥಳೀಯ ಮಟ್ಟದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಪಿಎಂ ಗೆ ದೂರು ನೀಡಲು ಹೀಗೆ ಮಾಡಿ

advertisement

ಇಂದು ಜನಸಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಸ್ಥಳೀಯ ಮಟ್ಟದಿಂದ ರಾಜ್ಯ ಮಟ್ಟದ ವರೆಗೂ ಅನೇಕ ಸಂಸ್ಥೆಗಳು ಜನಪರ ಕಾರ್ಯಕ್ರಮ ಮಾಡುತ್ತಲೇ ಬಂದಿದೆ. ಈ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಅನೇಕ ಉಪಯುಕ್ತ ವಿಧಾನ ಕಂಡುಕೊಳ್ಳಲಾಗಲಿದ್ದು ಒಂದೊಂದು ಕೂಡ ಪ್ರಾಮುಖ್ಯತೆ ಪಡೆಯುತ್ತದೆ‌. ಹಾಗಿದ್ದರೂ ಜನರ ಸಮಸ್ಯೆ ಪೂರ್ತಿ ಬಗೆಹರಿದಿಲ್ಲ, ರಸ್ತೆ ಸಮಸ್ಯೆ , ಆಸ್ತಿ ಸಮಸ್ಯೆ ಇನ್ನೂ ಅನೇಕ ವಿಧದ ಸಮಸ್ಯೆಳಿಗೆ ಸರಕಾರಿ ಕಚೇರಿ ಅಲೆಯುವುದು ಮಾತ್ರ ತಪ್ಪಿಲ್ಲ ಹಾಗಾಗಿ ಈ ವಿಧಾನ ಸರಿಪಡಿಸಲು ನೂತನ ಕ್ರಮ ಜಾರಿಗೆ ತರಲು ಮುಂದಾಗಲಾಗಿದೆ.

ಸರಕಾರಿ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಕೆಲಸವಿದ್ದು ಅಥವಾ ಅಧಿಕ ಕೆಲಸದ ಒತ್ತಡದಿಂದ ಜನರ ಅಹವಾಲನ್ನು ಪೂರ್ತಿ ಮಟ್ಟದಲ್ಲಿ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಪರಿಹರಿಸುವಂತೆ ಸಾಮಾನ್ಯ ಜನರಿಂದ ಕೃಷಿಕರ ವರೆಗೂ ಅನೇಕ ವಿಧವಾಗಿ ಕೆಲಸ ಮಾಡುತ್ತಲೇ ಬರಲಾಗಿದೆ. ಇನ್ನು ಮುಂದೆ ದೂರು ಸ್ವೀಕಾರ ಮಾಡಲು ಅಧಿಕಾರಿಗಳು ಹಿಂದೇಟು ಹಾಕಿದರೆ ಚಿಂತೆ ಮಾಡದಿರಿ ನಿಮ್ಮ ಸಮಸ್ಯೆ ಬಗೆಹರಿಸಲು ಸರಕಾರವೇ ಚಿಂತನೆ ನಡೆಸುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ನೇರವಾಗಿ ದೂರು ಸಲ್ಲಿಸಲು ಹೊಸ ಕ್ರಮ ಜಾರಿಗೆ ತರಲಾಗುತ್ತಿದೆ.

ಆನ್ಲೈನ್ ಮೂಲಕ ದೂರು:

ನಿಮ್ಮ ಸಮಸ್ಯೆಗಳ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಯಾವುದೇ ಸ್ಪಂದನೆ ದೊರೆಯತಹ ಸಂದರ್ಭದಲ್ಲಿ ಆಗ ಜನರು ರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಆನ್ಲೈನ್ ಮೂಲಕ ದೂರು ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ. ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ದೂರು ನೀಡಿದರೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮಾತ್ರವಲ್ಲದೆ ಭವಿಷ್ಯದಲ್ಲಿ ಕೂಡ ಸಮಸ್ಯೆ ಬರದಂತೆ ನೋಡಿಕೊಳ್ಳಲಾಗುತ್ತದೆ.

advertisement

ಆಫ್ ಲೈನ್ ಗೂ ಅವಕಾಶ:

ಆನ್ಲೈನ್ ಮೂಲಕ ದೂರು ಸಲ್ಲಿಸಲು ಸಾಧ್ಯವಾಗದಿದ್ದರೆ ಆಗ ನೀವು ಆಫ್ ಲೈನ್ ನಲ್ಲಿ ಪತ್ರ ಬರೆಯುವ ಮೂಲಕ ದೂರು ಸಲ್ಲಿಸಬಹುದು. ಭಾರತೀಯ ಅಂಚೆ ಇಲಾಖೆಯಲ್ಲಿ ಪ್ರಧಾನಿ (PM) ಅವರ ವಿಳಾಸಕ್ಕೆ ಸೌತ್ ಬ್ಲಾಕ್ ನವದೆಹಲಿ, ಪಿನ್ 110011 ಗೇ ದೂರು ಪತ್ರ ಸಲ್ಲಿಸುವ ಮೂಲಕ ದೂರನ್ನು ಫ್ಯಾಕ್ಸ್ ಮಾಡಿ ಪ್ರಧಾನ ಮಂತ್ರಿಗಳ ಕಚೇರಿ 011-23016857 ಗೆ ಕಳುಹಿಸಬಹುದು‌.

ದೂರು ಸಲ್ಲಿಸಲು ಹೀಗೆ ಮಾಡಿ:

ಆನ್ಲೈನ್ ನಲ್ಲಿ ಇದಕ್ಕಾಗಿ ಪ್ರತ್ಯೇಕ ವೆಬ್ಸೈಟ್ ಅನ್ನು ಒದಗಿಸಲಾಗಿದೆ. https://www.pmindia.gov.in/hi. ಗೆ ಭೇಟಿ ನೀಡಿ ಆ ಬಳಿಕ ಅದರಲ್ಲಿ ದೂರು ಸಲ್ಲಿಸಲು ಅವಕಾಶ ಸಿಗಲಿದೆ.ಪ್ರಧಾನ ಮಂತ್ರಿ ದೂರು ಸಲ್ಲಿಕೆಗೆ ಆಯ್ಕೆ ಬರಲಿದೆ. ಆಗ ಅಲ್ಲಿ ದೂರು ಬರೆಯಲು ಪ್ರತ್ಯೇಕ ಸ್ಪೇಸ್ ಇರಲಿದೆ. ಹೀಗೆ ನಿಮ್ಮ ಸಮಸ್ಯೆಯನ್ನು ಅದರಲ್ಲಿ ನಮೋದಿಸಿದರೆ ದೂರು ಸಲ್ಲಿಕೆ ಆದ ನಂತರ ನೋಂದಣಿ ಸಂಖ್ಯೆ ಸಿದ್ಧವಾಗಲಿದೆ. ಅದರಲ್ಲಿ ದೂರಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಲು ಅವಕಾಶ ಇದೆ. ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ದೂರಿನ ಮಾಹಿತಿ ಎಲ್ಲ ಸವಿವರವಾಗಿ ತುಂಬಬೇಕು.ಹೀಗೆ ಫೀಡಿಂಗ್ ಆಗಿಬಳಿಕ ಆ ಸಮಸ್ಯೆ ಪಿಎಂ ನೇತೃತ್ವದಲ್ಲಿ ಬಗೆಹರಿಯಲಿದೆ.

advertisement

Leave A Reply

Your email address will not be published.