Karnataka Times
Trending Stories, Viral News, Gossips & Everything in Kannada

Gold Rate: ಇಂದು ಮತ್ತೆ ಕುಸಿದ ಚಿನ್ನದ ದರ, ಬೆಲೆ ಎಷ್ಟು?

advertisement

ಕಷ್ಟ ಎನ್ನುವುದು ನಮಗೆ ಯಾವ ಸಂದರ್ಭದಲ್ಲಿ, ಯಾವ ರೂಪದಲ್ಲಿ ಸಹ ಬರಬಹುದು. ಕಷ್ಟ ಬಂದಾಗ ದಿಕ್ಕೆ ಕಾಣದಿರುವುದಕ್ಕಿಂತ ಮೊದಲೇ ಕಷ್ಟ ಬರದಂತೆ ನೋಡಿಕೊಳ್ಳುವುದು ಉತ್ತಮ, ಹಣವನ್ನು ಕೂಡಿಡುವುದು ಕಷ್ಟ ಎನ್ನುವವರು ಚಿನ್ನ ಮಾಡಿಟ್ಟರೆ ಭವಿಷ್ಯದಲ್ಲಿ ಅದೇ ಚಿನ್ನ ನಿಮ್ಮ ಕಷ್ಟಕಾಲಕ್ಕೆ ನೆರವಾಗಲಿದೆ. ಚಿನ್ನ ನಮಗೆ ಅಲಂಕಾರದ ವಸ್ತು ಮಾತ್ರ ಆಗಿರದೆ ತೀರ ಆರ್ಥಿಕ ಸಂಕಷ್ಟ ಬಂದಾಗ ನೆರವಾಗುವ ಒಂದು ಸಾಧನವಾಗಿದೆ. ಚಿನ್ನದ ಬೆಲೆ ಏರಿಳಿಕೆಯಿಂದ ಚಿನ್ನ (Gold) ಕೊಳ್ಳಬೇಕೆ ಬೇಡವೇ ಎಂಬ ಗೊಂದಲವಾಗುತ್ತದೆ. ಹಾಗಾಗಿ ದರ ನೋಡಿಕೊಳ್ಳುವುದು ಒಂದು ಉತ್ತಮ ಉಪಾಯವಾಗಿದೆ. ಹಾಗಾದರೆ ಇಂದಿನ ದರ ಹೇಗಿದೆ. ಕೊಳ್ಳುವುದು ಉತ್ತಮವೇ ಎಂಬ ಅನೇಕ ಸಂಗತಿಯನ್ನು ನಾವಿಂದು ತಿಳಿಸಲಿದ್ದೇವೆ.

ಇಂದಿನ ದರ ಹೇಗಿದೆ?

 

 

advertisement

ಮಾರ್ಚ್ 5ರಂದು ಚಿನ್ನದ ದರ (Gold Rate) ಒಂದೊಂದು ಪ್ರದೇಶದಲ್ಲಿ ಒಂದೊಂದು ತರ ಇದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂ ಬೆಲೆ 5,874ಇದೆ (5,875RS ನಿನ್ನೆಯ ಬೆಲೆ) ಆಗಿದೆ ಈ ಮೂಲಕ ಗ್ರಾಮ್ ಮೇಲೆ ನಿನ್ನೆಗಿಂತ ಇಂದು 1ರೂ. ಕಡಿಮೆ ಆಗಿದೆ. 8 ಗ್ರಾಮ್ ಚಿನ್ನದ ಬೆಲೆ 46,992ರೂ.ಇದೆ. ಹಾಗಾಗಿ ನಿನ್ನೆಗಿಂತ 8ರೂ. ಕಡಿಮೆಯಾಗಿದೆ. 24ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂ ಬೆಲೆ 6,408ಇದೆ ( 6,409ನಿನ್ನೆಯ ಬೆಲೆ) ಆಗಿದೆ ಈ ಮೂಲಕ ಗ್ರಾಮ್ ಮೇಲೆ ನಿನ್ನೆಗಿಂತ ಇಂದು 1ರೂ. ಕಡಿಮೆಯಾಗಿದೆ. 8 ಗ್ರಾಮ್ ಚಿನ್ನದ ಬೆಲೆ 51,264ರೂ.ಇದೆ. ಹಾಗಾಗಿ ನಿನ್ನೆಗಿಂತ 8ರೂ. ಕಡಿಮೆಯಾಗಿದ್ದು ಸ್ವಲ್ಪ ಮಟ್ಟಿನ ಲಾಭ ಸಿಕ್ಕಿದೆ.

ದೇಶದಲ್ಲಿ ಚಿನ್ನದ ದರ ಹೇಗಿದೆ?

ಭಾರತದ ಚಿನ್ನದ ಬೆಲೆಯು 22 ಕ್ಯಾರಟ್ ಚಿನ್ನದ ಬೆಲೆ (Gold Rate) 1 ಗ್ರಾಂ ಚಿನ್ನಕ್ಕೆ 5,874 ರೂಪಾಯಿ. 10ಗ್ರಾಂ ಚಿನ್ನಕ್ಕೆ ಚೆನ್ನೈ ನಲ್ಲಿ 59,290 ರೂಪಾಯಿ. ದೆಹಲಿ, ಕೊಲ್ಕತ್ತಾ, ಕೇರಳ, ಪುಣೆ, ಪಾಟ್ನಾ 58,740, ಬರೋಡಾ, ಸೂರತ್ ಅಹಮದಾಬಾದ್ ನಲ್ಲಿ 58,790 ರೂ. ಇದೆ. 24 ಕ್ಯಾರಟ್ ಚಿನ್ನದ ಬೆಲೆ (Gold Rate) 1 ಗ್ರಾಂ ಚಿನ್ನಕ್ಕೆ ಭಾರತದಲ್ಲಿ 6,408 ರೂಪಾಯಿ. ನಿನ್ನೆಗಿಂತ ಒಂದು ರೂಪಾಯಿ ಇಳಿಕೆಯಾಗಿದೆ. 10ಗ್ರಾಂ ಚಿನ್ನಕ್ಕೆ ಚೆನ್ನೈ ನಲ್ಲಿ 64,680 ರೂಪಾಯಿ. ದೆಹಲಿ 64,230 ಮುಂಬೈ, ಕೇರಳ, ಹೈದ್ರಾಬಾದ್ 64,080 ಬರೋಡಾ , ಸೂರತ್ ಅಹಮದಾಬಾದ್ ನಲ್ಲಿ 64,130 ರೂ. ಇದೆ.

ಒಟ್ಟಾರೆಯಾಗಿ ಚಿನ್ನದ ಬೆಲೆ ಆಧಾರದ ಮೇಲೆ ನೀವು ಖರೀದಿ ಮಾಡಬಹುದಾಗಿದೆ‌. ದಿನದಿಂದ ದಿನಕ್ಕೆ ಚಿನ್ನ ಏರು ಮತ್ತು ಇಳಿಮುಖ ಗತಿಯಲ್ಲಿದ್ದು ನಿನ್ನೆಗಿಂತ ಇಂದು ಚಿನ್ನದ ಬೆಲೆ 1ರೂಪಾಯಿ ಇಳಿಕೆಯಾಗಿದೆ. ಆಭರಣ ಪ್ರಿಯರಿಗೆ ಇಂದು ಚಿನ್ನ ಖರೀದಿ ಮಾಡಿದರೆ ಸಣ್ಣ ಮಟ್ಟಿಗೆ ಲಾಭ ಸಿಗಲಿದೆ.

advertisement

Leave A Reply

Your email address will not be published.