Karnataka Times
Trending Stories, Viral News, Gossips & Everything in Kannada

Gold Rate: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌: ಸತತ ಏರಿಕೆ ಬಳಿಕ ಚಿನ್ನದ ಬೆಲೆ ಕೊಂಚ ಇಳಿಕೆ !

advertisement

ಇನ್ನೇನು ಹಬ್ಬ ಮದುವೆ ಸೀಸನ್ ಬಂದೇ ಬಿಡ್ತು. ಹಾಗಾಗಿ ಆಭರಣ ಪ್ರಿಯರಿಗೆ ಮತ್ತೆ ಶುಭಸುದ್ದಿ ಸಿಕ್ಕಿದೆ. ಕಳೆದ ವಾರಾಂತ್ಯದಲ್ಲಿ ಭರ್ಜರಿಯಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ತುಸು ಹೆಚ್ಚಳ ಕಂಡಿದೆ. ಕಳೆದ ವಾರದಲ್ಲಿ ಚಿನ್ನದ ಬೆಲೆ (Gold Rate) ಗ್ರಾಮ್​ಗೆ 85 ರೂನಷ್ಟು ಹೆಚ್ಚಳವಾಗಿತ್ತು. ಇದೀಗ ತುಸು ಕಡಿಮೆಯಾಗಿದೆ.

10 ಗ್ರಾಂ ಚಿನ್ನದ ಬೆಲೆ ಹೇಗಿದೆ?

ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ (Gold Rate) 58,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 64,090 ರುಪಾಯಿ ಆಗಿದೆ. ಹಾಗಾದರೇ ಇಂದು ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

22 ಕ್ಯಾರೆಟ್‌ ಚಿನ್ನದ ಬೆಲೆ:

ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ (22 Carat Gold Rate) ಪ್ರತಿ ಗ್ರಾಂಗೆ 5,875 ರೂ ಇದೆ. ಮೊನ್ನೆ ಇದರ ಬೆಲೆ 5,790 ಇತ್ತು. ಇಂದು 8 ಗ್ರಾಂ ಚಿನ್ನದ ಬೆಲೆ 47,000 ರೂ ಇದೆ. ಮೊನ್ನೆ ಇದರ ಬೆಲೆ 46,320 ರೂ ಇತ್ತು. ಹಾಗೇ ಇಂದು 10 ಗ್ರಾಂಗೆ 58,750 ರೂಪಾಯಿ ಹಾಗೂ 100 ಗ್ರಾಂ ಬಂಗಾರಕ್ಕೆ 5,87,500 ರೂ. ನಿಗದಿಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ:

 

advertisement

 

24 ಕ್ಯಾರೆಟ್‌ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,409 ರೂ. ಇದೆ. ಮೊನ್ನೆ ಇದರ ಬೆಲೆ 6,316 ರೂಪಾಯಿ ಇತ್ತು. ಇಂದು 8 ಗ್ರಾಂ ಚಿನ್ನದ ಬೆಲೆ 51,272 ರೂ, 10 ಗ್ರಾಂ ಚಿನ್ನಕ್ಕೆ 64,090 ರೂ, 100 ಗ್ರಾಂಗೆ 6,40,900 ರೂ ಇದೆ.

ಎಲ್ಲೆಡೆ ಇಂದಿನ ಚಿನ್ನದ ದರ ಹೇಗಿದೆ?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರತಿ ಗ್ರಾಂ 22 ಕ್ಯಾರೆಟ್‌ ಚಿನ್ನಕ್ಕೆ 5,875 ರೂ, 10 ಗ್ರಾಂಗೆ ಚಿನ್ನಕ್ಕೆ 58,750 ರೂ ನಿಗದಿ ಆಗಿದೆ. ಪ್ರತಿ ಗ್ರಾಂ 24 ಕ್ಯಾರೆಟ್‌ ಚಿನ್ನಕ್ಕೆ 6,409 ರೂ. ಹಾಗೂ 10 ಗ್ರಾಂಗೆ 64,090 ರೂ. ಇದೆ. ಬೆಂಗಳೂರು ಹೊರತುಪಡಿಸಿ ಮೈಸೂರು, ದಾವಣಗೆರೆ, ಬಳ್ಳಾರಿ, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಬೆಳ್ಳಿ ದರವೆಷ್ಟು?

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇಂದು ಒಂದು ಗ್ರಾಂ ಬೆಳ್ಳಿ ದರ 72.75 ರೂ. ಇದೆ. ಒಂದು ಕೆ.ಜಿ. ಬೆಳ್ಳಿ ದರ 72,750 ರೂ. ಇದೆ. ಒಂದು ಗ್ರಾಂ ಬೆಳ್ಳಿ ಮೇಲೆ ಇಂದು 65 ಪೈಸೆ ಹೆಚ್ಚಾಗಿದೆ.

ಆಭರಣ ಖರೀದಿಸುವಾಗ ಹಲವು ಶುಲ್ಕಗಳು, ಮಜೂರಿ ಇತ್ಯಾದಿಗಳಿಂದ ದರದಲ್ಲಿ ಏರುಪೇರು ಇರಬಹುದು. ಚಿನ್ನದ ದರ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ವ್ಯತ್ಯಾಸ ಇರಬಹುದು. ಹೀಗಾಗಿ, ಹೆಚ್ಚು ನಂಬಿಕಸ್ಥವೆನಿಸುವ ಚಿನ್ನದಂಗಡಿಗೆ ಹೋಗಿ ಉತ್ತಮ ದರ್ಜೆಯ ಚಿನ್ನ ಅಥವಾ ಬೆಳ್ಳಿ ಖರೀದಿಸಿ. ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ಯುದ್ಧವು ಪ್ರಭಾವದ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಆ ಪರಿಣಾಮವೇ ಈ ಚಿನ್ನ ಗಣನೀಯವಾಗಿ ಏರಲು ಕಾರಣವಾಯಿತು. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.

advertisement

Leave A Reply

Your email address will not be published.