Karnataka Times
Trending Stories, Viral News, Gossips & Everything in Kannada

Electric Vehicles Rules: ಎಲೆಕ್ಟ್ರಿಕ್ ವಾಹನ ಓಡಿಸುವಾಗ ಹೆಲ್ಮೆಟ್ ಧರಿಸಬೇಕೇ ಬೇಡವೇ? ಹೊಸ ರೂಲ್ಸ್

advertisement

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ವಿಷಯವಾಗಿದೆ. ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಕೂಡ ಹೆಚ್ಚಾಗಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು (Electric Vehicles) ಜನರು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ.

ಇನ್ನು ದ್ವಿಚಕ್ರ ವಾಹನ (Electric Vehicle) ಚಲಿಸುವಾಗ ಹೆಲ್ಮೆಟ್ (Helmet) ಧರಿಸುವುದು ಕಡ್ಡಾಯ ಎನ್ನುವುದು ಎಲ್ಲರಿಗೂ ಗೊತ್ತು. ಇದು ಕೇವಲ ನಿಯಮ ಮಾತ್ರವಲ್ಲ ನಾವು ನಮ್ಮ ಜೀವನ ಉಳಿಸಿಕೊಳ್ಳಲು ಹೆಲ್ಮೆಟ್ ಧರಿಸುವುದು ಬಹಳ ಮುಖ್ಯ. ಆದರೆ ಎಲೆಕ್ಟ್ರಿಕ್ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವೇ ಇಲ್ಲವೇ ಎನ್ನುವ ಬಗ್ಗೆ ನಿಮಗೆ ಅರಿವು ಇದೆಯಾ? ಇಲ್ಲ ಎಂದರೆ ಇಲ್ಲಿದೆ ನಿಮ್ಮ ಪ್ರಶ್ನೆಗಳಿಗೆ ಉತ್ತರ!

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಕಡ್ಡಾಯವೇ?

 

 

advertisement

ಸರ್ಕಾರ ಹೊರಡಿಸಿರುವ ಮಾರ್ಗ ಸೂಚಿಯ ಪ್ರಕಾರ ಹಾಗೂ ಆಟೋ ರಫ್ತು ನಿಯಮಗಳ ಪ್ರಕಾರ ಎಲೆಕ್ಟ್ರಿಕ್ ಸ್ಕೂಟರ್ ನ ಕಾರ್ಯಕ್ಷಮತೆಗಾಗಿ ಹಾಗೂ ಉತ್ತಮ ರೈಡಿಂಗ್ ಅನುಭವಕ್ಕಾಗಿ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದು ಬಹಳ ಮುಖ್ಯ. ಇದರ ಜೊತೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಖರೀದಿಯ ಸಮಯದಲ್ಲಿ ವಿಮೆ ಮಾಡಿಸಿಕೊಳ್ಳುವುದು ಮುಖ್ಯ. ಜೊತೆಗೆ ವಾಹನ ಓಡಿಸುವಾಗ ಹೆಲ್ಮೆಟ್ ಮಾತ್ರವಲ್ಲದೆ ಅಗತ್ಯ ದಾಖಲೆಗಳನ್ನು ಕೂಡ ನಿಮ್ಮ ಜೊತೆಯಲ್ಲಿ ಇರಿಸಿಕೊಳ್ಳಬೇಕು.

ಈ ಎಲೆಕ್ಟ್ರಿಕ ಸ್ಕೂಟರ್ಗಳಿಗೆ ಹೆಲ್ಮೆಟ್ ಬೇಕಾಗಿಲ್ಲ:

ಇನ್ನು ನೀವು ಕಡಿಮೆ ವೇಗದ ಎಲೆಕ್ಟ್ರಿಕಲ್ ಸ್ಕೂಟರ್ (Electric Scooter) ಚಾಲನೆ ಮಾಡುವುದಿದ್ದರೆ ಹೆಲ್ಮೆಟ್ (Helmet) ಹಾಕಿಕೊಂಡು ಚಾಲನೆ ಮಾಡದೆ ಇದ್ದರು ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ನೀವು ರಸ್ತೆಯಲ್ಲಿ ಅತಿ ಕಡಿಮೆ ವೇಗದ ದ್ವಿಚಕ್ರ ವಾಹನವನ್ನು ಓಡಿಸುತ್ತಿದ್ದರೆ ಅಂದರೆ ಅದರ ಗರಿಷ್ಠ ವೇಗ ಗಂಟೆಗೆ 25 ಕಿಲೋಮೀಟರ್ ನಷ್ಟು ಮಾತ್ರ ಆಗಿದ್ದರೆ ಹೆಲ್ಮೆಟ್ ಧರಿಸುವುದು ಅಷ್ಟು ಮುಖ್ಯವಲ್ಲ. ಇಂತಹ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸದೆ ಇದ್ದರೂ ಕೂಡ ಪೊಲೀಸ್ ನಿಮಗೆ ಚಲನ್ ನೀಡಲು ಸಾಧ್ಯವಿಲ್ಲ.

ಇಷ್ಟಾಗಿಯೂ ನೀವು ದ್ವಿಚಕ್ರವಾಹನವನ್ನು ರಸ್ತೆಗೆ ಇಳಿಸುತ್ತೀರಿ ಎಂದಾದರೆ ಅದು ಎಂತಹ ದ್ವಿಚಕ್ರ ವಾಹನವೇ ಆಗಿದ್ದರೂ ಕೂಡ, ಹೆಲ್ಮೆಟ್ ಧರಿಸುವುದು ನಮ್ಮ ಸೇಫ್ಟಿ ಗಾಗಿ ಬಹಳ ಮುಖ್ಯ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಇದರ ಹೊರತಾಗಿ ಇತರ ದ್ವಿಚಕ್ರ ವಾಹನಗಳಿಗೆ ಹೆಲ್ಮೆಟ್ ಧರಿಸಿಕೊಂಡು ಚಲಾವಣೆ ಮಾಡುವುದು ಸರ್ಕಾರದ ಪ್ರಕಾರ ಕಡ್ಡಾಯ ನಿಯಮವಾಗಿದೆ. ಇಲ್ಲವಾದರೆ ದಂಡ ಪಾವತಿಸಬೇಕು.

advertisement

Leave A Reply

Your email address will not be published.