Karnataka Times
Trending Stories, Viral News, Gossips & Everything in Kannada

RBI: ಬ್ಯಾಂಕ್ EMI ಕಟ್ಟಲು ಕಷ್ಟವಾಗುತ್ತಿದ್ದವರಿಗೆ ಸಿಹಿಸುದ್ದಿ! ರಿಸರ್ವ್ ಬ್ಯಾಂಕ್ ಹೊಸ ಆದೇಶ ಜಾರಿಗೆ

advertisement

ದೊಡ್ಡ ಕನಸುಗಳನ್ನು ಹೊಂದಿರುವವರು ಆ ದೊಡ್ಡ ಕನಸುಗಳನ್ನು ನನಸು ಮಾಡಿಕೊಳ್ಳೋದಕ್ಕೆ ಕೆಲವೊಮ್ಮೆ ಹಣ ಇಲ್ಲದೆ ಹೋದಾಗ ಸಾಲವನ್ನು ಮಾಡಬೇಕಾಗಿರುವುದು ಅನಿವಾರ್ಯ ಆಗಿರುತ್ತದೆ. ಸಾಮಾನ್ಯವಾಗಿ ಬಹುತೇಕರು ಇದಕ್ಕಾಗಿ ಪರ್ಸನಲ್ ಲೋನ್ (Personal Loan) ಮಾಡೋದು ಹೆಚ್ಚು. ಯಾವುದೇ ವಿಧದ ಲೋನ್ (Loan) ಆಗಿರಲಿ ಆದರೆ ಸರಿಯಾದ ರೀತಿಯಲ್ಲಿ ಅವುಗಳ ಪ್ರತಿ ತಿಂಗಳ EMI ಹಣವನ್ನು ಕಟ್ಟದೆ ಹೋದಲಿ ಬ್ಯಾಂಕಿನವರು ಕಿರಿಕಿರಿ ಮಾಡುವುದು ಸಾಮಾನ್ಯವಾಗಿರುತ್ತದೆ. ಅದಕ್ಕಿಂತ ಹೆಚ್ಚಾಗಿ ಸಾಲವನ್ನು ಲೇಟ್ ಆಗಿ ಕಟ್ಟಿದರೆ ಅದರ ಮೇಲೆ ಕೆಲವೊಂದು ಶುಲ್ಕಗಳನ್ನು ಕೂಡ ಬ್ಯಾಂಕುಗಳು ವಿಧಿಸುತ್ತವೆ ಅನ್ನುವುದು ನಿಮಗೆಲ್ಲರಿಗೂ ತಿಳಿದಿರುತ್ತದೆ.

ಇನ್ಮುಂದೆ ಇಂತಹ ಶುಲ್ಕಗಳಿಗೆ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಸ್ನೇಹಿತರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಾರಿಗೆ ತಂದಿರುವಂತಹ ಈ ಹೊಸ ನಿಯಮವನ್ನು ಕೇಳಿದರೆ ನೀವು ಕೂಡ ಖುಷಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ಮುಂದೆ ಲೇಟ್ ಆಗಿ ಕಂತನ್ನ ಕಟ್ಟಿದರೆ ಶುಲ್ಕ ಕಟ್ಟಬೇಕಾಗಿಲ್ಲ:

 

Image Source: Tata Capital

 

advertisement

ಇನ್ಮೇಲೆ ಬ್ಯಾಂಕಿನ ಸಾಲ (Loan) ಗಳಲ್ಲಿ ನೀವು ಲೇಟ್ ಆಗಿ EMI ಕಂತುಗಳನ್ನ ಕಟ್ಟಿದ್ರೆ ಯಾವುದೇ ರೀತಿಯ ಹೆಚ್ಚಿನ ಶುಲ್ಕಗಳನ್ನು ಕಟ್ಟಬೇಕಾಗಿಲ್ಲ ಅನ್ನುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದ ಹೊಸ ನಿಯಮಗಳ ಮೂಲಕ ತಿಳಿದು ಬಂದಿದೆ. ಈ ನಿಯಮಗಳನ್ನ ಒಂದು ವೇಳೆ ನೀವು ಕೂಡ ಸಾಲಗಾರರಾಗಿದ್ರೆ ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿರುತ್ತದೆ.

ಹೊಸ ಸಾಲಗಳಿಗೆ 2024ರ ಏಪ್ರಿಲ್ 1ರಿಂದ ಪ್ರಾರಂಭವಾಗಿ ಯಾವುದೇ ಬ್ಯಾಂಕಿಂಗ್ ಅಥವಾ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿಗಳು (Non-Banking Financial Companies) ತಡವಾಗಿ ಕಟ್ಟುವಂತಹ ಕಂತಿನ ಮೇಲೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವ ಹಾಗಿಲ್ಲ ಎಂಬುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೇಳಿದೆ. ಇದು ಹೊಸದಾಗಿ ಲೋನ್ ಮಾಡುವವರಿಗೆ ಹೇಳಿರುವಂತಹ ನಿಯಮ ಆಗಿದೆ.

ಇನ್ನು ಹಳೆಯದಾಗಿ ಈಗಾಗಲೇ ಲೋನ್ (Loan) ಮಾಡಿರುವವರಿಗೆ ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಂದು ನಿಯಮವನ್ನು ಜಾರಿಗೆ ತಂದಿದೆ. ಜೂನ್ 30 ರಿಂದ ಪ್ರಾರಂಭವಾಗಿ ಹಳೆಯ ಸಾಲಗಾರರಿಗೆ ಒಂದು ವೇಳೆ ಲೋನ್ ಕಟ್ಟೋದು ತಡವಾದರೆ ಯಾವುದೇ ರೀತಿಯ ಹೆಚ್ಚಿನ ಚಾರ್ಜಸ್ ಗಳನ್ನ ಈ ಸಂದರ್ಭದಲ್ಲಿ ವಿಧಿಸುವುದಿಲ್ಲ ಎಂಬುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಯಮಗಳಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಅಂದರೆ ಈಗಾಗಲೇ ಲೋನ್ ಪಡೆದುಕೊಂಡಿರುವವರು ಜೂನ್ ಮೂವತ್ತರಿಂದ ಪ್ರಾರಂಭಿಸಿ, ಈ ನಿಯಮಗಳಿಗೆ ಒಳಪಡುತ್ತಾರೆ.

ಇನ್ನು ಸಾಲಗಳನ್ನು ಹೊರತುಪಡಿಸಿ ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಕಳೆದ ಎರಡು ವರ್ಷಗಳಿಂದ ಆಕ್ಟಿವ್ ಆಗಿಲ್ಲದೆ ಹೋದಲ್ಲಿ ಅದರ ಮೇಲೆ ಕೂಡ ಯಾವುದೇ ಬ್ಯಾಂಕ್ ಗಳು ಹೆಚ್ಚಿನ ಶುಲ್ಕಗಳನ್ನು ವಿಧಿಸುವ ಹಾಗಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಿದೆ.

advertisement

Leave A Reply

Your email address will not be published.