Karnataka Times
Trending Stories, Viral News, Gossips & Everything in Kannada

Drought Relief Fund: ಬರಪರಿಹಾರ ಜಮಾವಣೆ ಆಗಿಲ್ಲವೇ? ಇಲ್ಲಿಗೆ ಕೂಡಲೇ ಭೇಟಿ ನೀಡಿ! ಹೊಸ ಆದೇಶ

advertisement

ಭಾರತ ಕೃಷಿ ಪ್ರಧಾನ‌ದೇಶ, ಇಲ್ಲಿ ಕೃಷಿ ಮಾಡಿಯೇ ಬದುಕು ಕಟ್ಟಿಕೊಂಡವರು ಬಹಳಷ್ಟು ಜನ ಇದ್ದಾರೆ.ಆದ್ರೆ ರೈತರಿಗೆ ಇಂದು ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದರೂ ಅದು ರೈತರ ಪಾಲಿಗೆ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ರೈತರಿಗೆ ಈ ಬಗ್ಗೆ ಮಾಹಿತಿ ಇಲ್ಲದಿರುವುದು ಆಗಿದೆ.‌ ಸರಕಾರ ದಿಂದ ರೈತರಿಗೆ ಯಾವುದೇ ಸೌಲಭ್ಯ ಸಿಗುವುದಾದ್ರೂ ಕೆಲವೊಂದು ದಾಖಲೆಗಳು ಬಹಳ ಮುಖ್ಯವಾಗುತ್ತದೆ. ಮುಖ್ಯವಾಗಿ ಈ ಭಾರಿ ರೈತರು ಮಳೆ ಇಲ್ಲದೆ ಬೆಳೆ ನಷ್ಟದ ಕಷ್ಟ ದಲ್ಲಿದ್ದು ಇಳುವರಿ ‌ಕಾಣದೇ ಬೇಸೆತ್ತು ಹೋಗಿದ್ದಾರೆ. ಇದಕ್ಕಾಗಿ ಸರಕಾರ ಪರಿಹಾರ ನೀಡಲು ಮುಂದಾಗಿದೆ.

ಬರ ಪೀಡಿತ ಪ್ರದೇಶ ಘೋಷಣೆ:

 

Image Source: Mint

 

ಈಗಾಗಲೇ ಬಹಳಷ್ಟು ಕಡೆ ಬರ ಉಂಟಾಗಿದ್ದು ರೈತರ ಬೆಳೆ ಹಾನಿ ಕೂಡ ಆಗಿದೆ. 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ 236 ತಾಲ್ಲೂಕುಗಳ ಪೈಕಿ, 195 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು ಕೆಲವು‌ ಜಿಲ್ಲೆ ಗಳಿಗೆ ಈಗಾಗಲೇ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಿದೆ.

ಇಲ್ಲಿಗೆ ಭೇಟಿ ನೀಡಿ:

advertisement

ಬೆಳೆ ಪರಿಹಾರದ ಮೊತ್ತ (Drought Relief Fund) ಖಾತೆಗೆ ಜಮೆಯಾಗಲು ಎಫ್‌ಐಡಿ ಸಂಖ್ಯೆ (FID Number) ಕಡ್ಡಾಯವಾಗಿದ್ದು ರೈತರು ಮೊದಲು ಈ‌ ಕೆಲಸವನ್ನು ಮಾಡಬೇಕಿದೆ. ಹೌದು ಎಫ್ ಐಡಿ ಮಾಡದೇ ಇರುವ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ, ತೋಟಗಾರಿಕೆ, ರೇಷ್ಮೆ ಇಲಾಖೆ ಅಥವಾ ನಾಗರಿಕ ಸೇವಾ ಕೇಂದ್ರಗಳನ್ನು ಭೇಟಿ ನೀಡುವ ಮೂಲಕ ಎಫ್‌ಐಡಿ ಮಾಡಿಸಬೇಕು.

ಸರ್ವೆ ನಂಬರ್ ಜೋಡಣೆ ಮಾಡಿ:

ರೈತರು ಎಫ್.ಐ.ಡಿ ಮಾಡಿಸಿ ಅದರಲ್ಲಿ ಎಲ್ಲಾ ಜಮೀನಿನ ಸರ್ವೇ ನಂಬರ್‌ ಜೋಡಣೆ ಆಗಿದೆಯೇ ಎಂದು ಮೊದಲು‌ ತಿಳಿದುಕೊಳ್ಳಬೇಕು. ಜಮೀನಿನ ಸರ್ವೇ ನಂಬರ್ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿದರೆ ಮಾತ್ರ ಈ ಬೆಳೆ ವಿಮೆ ಪರಿಹಾರ ಮೊತ್ತ (Crop Insurance Compensation Amount) ಖಾತೆಗೆ ಜಮೆಯಾಗಲಿದೆ. ಹಾಗಾಗಿ ರೈತರು ಈ ಕೆಲಸ ಮಾಡಿದ್ದಲ್ಲಿ ರಾಜ್ಯ ಸರಕಾರದ ಮೊದಲ ಕಂತಿನ ಹಣ ಖಾತೆಗೆ ನೇರವಾಗಿ ಜಮೆ ಯಾಗಲಿದೆ.

ಈ ದಾಖಲೆ ಕಡ್ಡಾಯಬೇಕು:

ಈ ಬೆಳೆ ಪರಿಹಾರದ ಮೊತ್ತ (Drought Relief Fund) ಖಾತೆಗೆ ಬರಬೇಕಿದ್ದಲ್ಲಿ ರೈತರ FID ಸಂಖ್ಯೆ, ಜಮೀನಿನ ದಾಖಲೆ, ಪೋಟೋ ಆಧಾರ್ ಕಾರ್ಡ್, ಜಾತಿ ಆದಾಯ ಪತ್ರ ,ರೈತರ ಬ್ಯಾಂಕ್ ಪುಸ್ತಕ ಇತ್ಯಾದಿ ದಾಖಲೆಗಳು ಕಡ್ಡಾಯವಾಗಿ ಬೇಕು.

advertisement

Leave A Reply

Your email address will not be published.