Karnataka Times
Trending Stories, Viral News, Gossips & Everything in Kannada

Drought Relief Fund: ರೈತರ ಖಾತೆಗೆ ಬರ ಪರಿಹಾರ ಬಿಡುಗಡೆಯ ಹೊಸ ಪಟ್ಟಿ ಹೊರಕ್ಕೆ! ಈ ಲಿಂಕ್ ಮೂಲಕ ಚೆಕ್ ಮಾಡಿ

advertisement

ಈಗಾಗಲೇ ರಾಜ್ಯದಲ್ಲಿ ಬಿಸಿಲಿನ ವಾತಾವರಣದಿಂದ ಜನರು ಕಂಗೆಟ್ಟು ಹೋಗಿದ್ದಾರೆ‌. ದಿನೇ ದಿನೇ ಹವಾಮಾನ ದಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಅದೇ ರೀತಿ ಈ ಭಾರಿ ಎಲ್ಲಾ ಕಡೆ ನೀರಿನ ಸಮಸ್ಯೆ ಉಂಟಾಗಿದೆ. ನೀರಿಲ್ಲದೆ ವಿದ್ಯುತ್ ಸಮಸ್ಯೆಯು ಉಂಟಾಗಿದೆ. ರೈತರ ಬೆಳೆಯಲ್ಲಿ ಈಗಾಗಲೇ ನಷ್ಟ ಉಂಟಾಗಿದ್ದು ಮಳೆಯ ಆಗಮನಕ್ಕಾಗಿ ರೈತರು ಕಾಯುತ್ತಿದ್ದಾರೆ. ಈಗಾಗಲೇ ತೀವ್ರ ಬರಗಾಲದಿಂದ ನಷ್ಟ ಅನುಭವಿಸಿದ ರೈತರು ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಇದೀಗ ಈ ಬಗ್ಗೆ ಅಪ್ಡೇಟ್ ಮಾಹಿತಿಯೊಂದು ಇಲ್ಲಿ ಲಭ್ಯವಿದೆ.

ಬರ ಪರಿಹಾರ ಘೋಷಣೆ:

 

Image Source: Business Today

 

ಕರ್ನಾಟಕ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದರಲ್ಲಿ 196 ತಾಲೂಕುಗಳು ಗಂಭೀರ ಬರ ಪೀಡಿತವಾಗಿದ್ದು, 27 ತಾಲೂಕುಗಳು ಅರೆ ಬರಪೀಡಿತವಾಗಿವೆ. ಇದೀಗ ರಾಜ್ಯ ಸರಕಾರವು ಪ್ರತಿ ರೈತರಿಗೆ 2 ಸಾವಿರ ರೂಪಾಯಿ ಪರಿಹಾರ ನೀಡಲು ಮುಂದಾಗಿದ್ದು, ಕೆಲವು ರೈತರಿಗೆ ಈ ಹಣ (Drought Relief Fund) ಜಮೆಯಾಗಿದೆ. ಇನ್ನು ಕೇಂದ್ರ ಸರ್ಕಾರ ಇನ್ನೂ ಬರ ಪರಿಹಾರ ಘೋಷಣೆ ಮಾಡಿಲ್ಲ. ಹೀಗಾಗಿ ಬರ ಪರಿಹಾರ ಕೊಡಿಸುವಂತೆ ಸುಪ್ರೀಂ ಕೋರ್ಟ್ (Supreme Court) ​ನಲ್ಲಿ ಆರ್ಟಿಕಲ್ 32ರ ಅಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರಕಾರ ರಿಟ್ ಅರ್ಜಿ ಸಲ್ಲಿಕೆ ಕೂಡ ಮಾಡಿದೆ.

ಬರ ಪರಿಹಾರ, ಆಧಾರ್ ಅಪ್ಡೇಟ್ ಕಡ್ಡಾಯ:

 

advertisement

Image Source: iStock

 

ಇನ್ನು ನಿಮ್ಮ ಖಾತೆಗೆ ಬರ ಪರಿಹಾರದ ಮೊತ್ತ (Drought Relief Fund) ಜಮೆಯಾಗಬೇಕಿದ್ರೆ ನಿಮ್ಮ ಆಧಾರ್ ಅನ್ನು ಆಪ್ಡೆಟ್ ಮಾಡಿ ಬ್ಯಾಂಕ್ ಖಾತೆಗೆ (Bank Account), ಮತ್ತು ನಿಮ್ಮ ಪಹಣಿ ಪತ್ರಕ್ಕೆ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ. ಇಲ್ಲದ್ದಿದ್ದಲ್ಲಿ ಈ ಹಣ ಜಮೆಯಾಗೋದಿಲ್ಲ‌. ಹಾಗಾಗಿ ಆಧಾರ್ (Aadhaar Card) ಲಿಂಕ್ ಮಾಡಿಸುವಂತೆ ಈ ಬಗ್ಗೆ ಸರಕಾರ ಮಾಹಿತಿ ನೀಡಿದೆ.

  • ರಾಜ್ಯ ಸರಕಾರದ ಬರ ಪರಿಹಾರ ಮೊತ್ತ ಎರಡು ಸಾವಿರ ಖಾತೆಗೆ ಬರಬೇಕಿದ್ರೆ ಈ ಕೆಲಸ ಮಾಡುವುದು ಕಡ್ಡಾಯ
  • ರೈತರ ಜಮೀನಿನ ಸರ್ವೇ ನಂಬರ್ ಮೇಲೆ FID ನಂಬರ್ ರಚನೆ ಅಗಿ ಇರಬೇಕು‌, ಇಲ್ಲದಿದ್ದಲ್ಲಿ ಹಣ ಜಮೆ ಯಾಗಲ್ಲ.
  • ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ NPCI mapping ಕಡ್ಡಾಯ .
  • ಪ್ರೂಟ್ಸ್ ತಂತ್ರಾಂಶದಲ್ಲಿ ಇರುವ ಹೆಸರು ಮತ್ತು ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮ್ಯಾಚ್ ಅಗಿರಬೇಕು

ಹೀಗೆ ಚೆಕ್ ಮಾಡಿ:

ಮೊದಲಿಗೆ ನೀವು https://fruitspmk.karnataka.gov.in/ ಈ ಲಿಂಕ್ ನ ಮೂಲಕ, ಫ್ರೂಟ್ ಪಿಎಂ ಕಿಸಾನ್ (PM Kisan) ವೆಬ್ ಸೈಟ್ ಗೆ ಭೇಟಿ ನೀಡಿ, ನಿಮ್ಮ ರಾಜ್ಯ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಮತ್ತು ನಿಮ್ಮ ಹಳ್ಳಿಯನ್ನು ಆಯ್ಕೆ ಮಾಡಿ, ಆಯ್ಕೆ ನಂತರ ಇಲ್ಲಿ ವೀಕ್ಷಿಸಿ ಎಂಬ ಆಪ್ಚನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಬರ ಪರಿಹಾರದ ರೈತರ ಲಿಸ್ಟ್ ಅಲ್ಲಿ ತೋರಿಸುತ್ತದೆ.

advertisement

Leave A Reply

Your email address will not be published.