Karnataka Times
Trending Stories, Viral News, Gossips & Everything in Kannada

SSP Scholarship: SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದವರು ಕೂಡಲೇ ಈ ಕೆಲಸ ಮಾಡಿ

advertisement

ಇತ್ತೀಚಿನ ದಿನದಲ್ಲಿ ಶೈಕ್ಷಣಿಕ ಕಾರ್ಯ ಚಟುವಟಿಕೆಗೆ ಅಧಿಕ ಒತ್ತು ನೀಡಲಾಗುವುದನ್ನು ನಾವು ಕಾಣಬಹುದು. ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂಬ ಉದ್ದೇಶಕ್ಕೆ ವಿದ್ಯಾರ್ಥಿ ವೇತನವನ್ನು ಕೂಡ ವಿತರಣೆ ಮಾಡಲಾಗುತ್ತಿದೆ. ವಯಸ್ಸಿನ ಮತ್ತು ಕಲಿಕೆ ವಿಷಯದ ಆಧಾರದ ಮೇಲೆ ನೀಡಲಾಗುವ ವಿದ್ಯಾರ್ಥಿ ವೇತನದ ಮೊತ್ತ ಕೂಡ ಬದಲಾಗಲಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ (Student Scholarship) ಅರ್ಜಿ ಸಲ್ಲಿಸಿದ್ದು ಹಣ ಬಂದಿಲ್ಲ ಎಂದು ಕಾಯುವವರಿಗೆ ನಾವಿಂದು ಮಹತ್ವದ ಮಾಹಿತಿ ನೀಡಲಿದ್ದೇವೆ.

ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಈಗಾಗಲೆ ವಿದ್ಯಾರ್ಥಿ ವೇತನ (Student Scholarship) ಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ. ಹೀಗೆ ಅರ್ಜಿ ಸಲ್ಲಿಸಿದವರಲ್ಲಿ ಸಾಕಷ್ಟು ವಿದ್ಯಾರ್ಥಿಗಳಿಗೆ ಹಣ ರಿಲೀಸ್ ಆದರೂ ಖಾತೆಗೆ ಮಾತ್ರ ಹಣ ಬಂದಿಲ್ಲ ಎಂಬ ದೂರು ಕೂಡ ಕೇಳಿ ಬರುತ್ತಿದೆ. ತಾಲೂಕು ಆಫಿಸ್ ನ ವೆರಿಫಿಕೇಶನ್ ಮತ್ತು ಅಪ್ರೂವ್ಡ್ ನಲ್ಲಿ ರಿಜೆಕ್ಟ್ ಆದ ಅರ್ಜಿ ಕೂಡ ಇದೆ. ಇಂತವರು ಏನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.

ಸಹಾಯವಾಣಿ ಸಂಖ್ಯೆ ಕೂಡ ಇದೆ:

SSP ವಿದ್ಯಾರ್ಥಿ ವೇತನಕ್ಕೆ (SSP Scholarship) ಅರ್ಜಿ ಹಾಕಿದ್ದವರಿಗೆ ನೆರವಾಗಬೇಕು ಎಂಬ ಉದ್ದೇಶಕ್ಕೆ ಸಹಾಯವಾಣಿ ಸಂಖ್ಯೆ ಕೂಡ ನಮೂದಿಸಲಾಗಿದೆ. 1902 ಸಹಾಯವಾಣಿ ಸಂಖ್ಯೆ ಇದೆ. ಅದರಲ್ಲಿ ಸಾಧ್ಯ ಆಗದೆ ಇದ್ದರೆ ನಿಮ್ಮ ಅಪ್ಲಿಕೇಶನ್ ಸಮಸ್ಯೆಗೆ 8050770005 ಹಾಗೂ ಹಾಸ್ಟೆಲ್, ಆನ್ಲೈನ್ ಅಪ್ಲಿಕೇಶನ್ ಹಾಗೂ ಬಯೋಮೆಟ್ರಿಕ್ ಸಮಸ್ಯೆಗೆ 8050770006, IAS, IPS, PHD ಹಾಗೂ ಬ್ಯಾಂಕಿಂಗ್ ತರಬೇತಿ ಫೆಲೋಶಿಪ್ ಸಮಸ್ಯೆಗೆ 8050770004 ಅನ್ನು ಸಂಪರ್ಕಿಸಬಹುದು.

advertisement

ಏನು ಮಾಡಬೇಕು?

 

Image Source: Times of India

 

ನಿಮ್ಮ ಸ್ಟೇಟಸ್ ನಲ್ಲಿ ಅಪ್ಲಿಕೇಶನ್ ವೆರಿಫಿಕೇಶನ್ ಸ್ಟೇಟಸ್ (Application Verification Status) ನ ಒಳಗೆ ಅಪ್ರೂವ್ಡ್ ಆ್ಯಸ್ ಡಿಜಿಬಲ್ ಎಂದು ಇದ್ದರೆ ಸ್ಕಾಲರ್ ಶಿಪ್ ಬರಲಾರದು. ಆಗ ನೀವು ಸಹಾಯವಾಣಿ ಸಂಖ್ಯೆ 1902 ಗೆ ಭೇಟಿ ನೀಡಿ. ಯಾವುದೇ ಅನುಮಾನ ಇದ್ದರೆ ನಿಮ್ಮ ಜಿಲ್ಲೆ ತಿಳಿಸಿ ಹಾಗೂ ಸ್ಕಾಲರ್ ಶಿಪ್ (SSP Scholarship) ಅಪ್ಲೈ ಮಾಡಿದ್ದ ಐಡಿ ಮೂಲಕ ಲಾಗಿನ್ ಆಗಬೇಕು. ನಿಮ್ಮ ಸ್ಟೇಟಸ್ ನಲ್ಲಿ ತಾಲೂಕು ಆಫೀಸ್ ಪರಿಶೀಲನೆ ಎಸ್ (ಹೌದು) ಎಂದು ಬರದೆ ಇದ್ದರೆ ಕೆಲ ಅಗತ್ಯ ಕ್ರಮ ಮುಂದುವರಿಸುವುದು ಅಗತ್ಯವಾಗಿದೆ.

ಇಂತಹ ಸಂದರ್ಭಗಳಲ್ಲಿ ಕೂಡಲೆ ತಾಲೂಕು ಆಡಳಿತಾಧಿಕಾರಿ ಭೇಟಿ ಮಾಡಿ ಅವರಿಗೆ ಪರಿಶೀಲನೆ ಎಸ್ ನೀಡುವಂತೆ ಮನವಿ ಮಾಡಬೇಕು ಆ ಬಳಿಕ ನೀವು ಸಹಾಯವಾಣಿ ಸಂಖ್ಯೆ ಮೂಲಕ ಈ ಬಗ್ಗೆ ಮನವಿ ಮಾಡಬೇಕು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ ಆದ 8277799990 ಗೆ ಸಂಪರ್ಕಿಸಿ ಸಮಸ್ಯೆ ಬಗ್ಗೆ ತಿಳಿಸಿ. ನೀವು ಹಿಂದುಳಿದ ವರ್ಗದವರಾಗಿದ್ದರೆ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಸಹಾಯವಾಣಿ ಸಂಖ್ಯೆ 8050770005, 8050770004 ಗೆ ಸಂಪರ್ಕ ಮಾಡಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ರಾಜ್ಯ ವಿದ್ಯಾರ್ಥಿ ವೇತನ ಸಮಸ್ಯೆಗಳಿಗೆ 9048300400, 080-22634300ಹಾಗಾಗಿ ಮಾರ್ಚ್ 31ರ ಒಳಗೆ ಯಾರಿಗೆಲ್ಲ ವಿದ್ಯಾರ್ಥಿ ವೇತನ ಬರಲು ಬಾಕಿ ಇದೆ ಅವರು ಈ ಬಗ್ಗೆ ಗಮನಹರಿಸಿ ಸರಿಪಡಿಸಿಕೊಳ್ಳಿ.

advertisement

Leave A Reply

Your email address will not be published.