Karnataka Times
Trending Stories, Viral News, Gossips & Everything in Kannada

Kia: ಏಪ್ರಿಲ್ 1 ರಿಂದ ಕಿಯಾ ಕಂಪನಿಯ ಯಾವುದೇ ಕಾರು ಖರೀದಿ ಮಾಡುವವರಿಗೆ ಕಹಿಸುದ್ದಿ

advertisement

ದಕ್ಷಿಣ ಕೊರಿಯಾ ಮೂಲಕ ಕಿಯಾ ಭಾರತದಲ್ಲಿ ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿದೆ. ಸಾಕಷ್ಟು ಗ್ರಾಹಕರು ಕಿಯಾ ಕಾರುಗಳನ್ನು ಖರೀದಿಸಿದ್ದಾರೆ. ಕಿಯಾದ (Kia) ಮಾರಾಟದ ಸಂಖ್ಯೆಯಲ್ಲಿಯೂ ಬೆಳವಣಿಗೆ ಕಾಣುತ್ತಿದೆ. ಇದರ ನಡುವೆ ಕಿಯಾ ಈಗ ಗ್ರಾಹಕರಿಗೆ ಕೊಂಚ ಶಾಕ್ ನೀಡಿದೆ. ಸೆಲ್ಟೋಸ್ (Seltos), ಸೊನೆಟ್ (Sonet) ಮತ್ತು ಕ್ಯಾರೆನ್ಸ್‌ನಂತಹ ಎಸ್‌ಯುವಿ-ಎಂಪಿವಿಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿರುವ ಕಿಯಾ ಇಂಡಿಯಾ ಕಂಪನಿ ತನ್ನ ಸಂಪೂರ್ಣ ಉತ್ಪನ್ನ ಶ್ರೇಣಿಯ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಮುಂದಿನ ತಿಂಗಳಿನಿಂದ ಅಂದರೆ 2024ರ ಏಪ್ರಿಲ್ 1ರಿಂದ ಕಿಯಾ ಕಾರುಗಳನ್ನು ಖರೀದಿಸುವವರ ಜೇಬಿಗೆ ಹೆಚ್ಚಿನ ಹೊರೆ ಬೀಳಲಿದೆ.

ಮೊದಲ ಬಾರಿಗೆ ಬೆಲೆ ಹೆಚ್ಚಳ:

ಮುಂದಿನ ತಿಂಗಳಿನಿಂದ ಕಿಯಾ ಸಾನೆಟ್ (Kia Sonet), ಕಿಯಾ ಸೆಲ್ಟೋಸ್ (Kia Seltos) ಹಾಗೂ ಕಿಯಾ ಕಾರೆನ್ಸ್ (Kia Carens) ಕಾರುಗಳ ಬೆಲೆಯಲ್ಲಿ ಶೇಕಡಾ 3 ರಷ್ಟು ಹೆಚ್ಚಾಗಲಿದೆ. ತನ್ನ ವಾಹನಗಳ ಬೆಲೆ ಏರಿಕೆಗೆ ಸಂಸ್ಥೆ ಕಾರಣವನ್ನೂ ನೀಡಿದೆ. ಹೆಚ್ಚುತ್ತಿರುವ ಸರಕುಗಳ ಬೆಲೆಗಳು ಮತ್ತು ಹೆಚ್ಚುತ್ತಿರುವ ಪೂರೈಕೆ ಸರಪಳಿ ಸಂಬಂಧಿತ ಇನ್ಫುಟ್ ವೆಚ್ಚದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಈ ವರ್ಷ ಬೆಲೆ ಹೆಚ್ಚಳ ಮಾಡುತ್ತಿರುವುದು ಇದೇ ಮೊದಲು ಎಂದು ಕಿಯಾ ಮೋಟಾರ್ಸ್ ಇಂಡಿಯಾ ತಿಳಿಸಿದೆ.

ಯಾವ ಮಾದರಿಯಲ್ಲಿ ಎಷ್ಟು ಬೆಲೆ ಏರಿಕೆ ಮಾಡಲುತ್ತಿದೆ ಎಂಬುದರ ಮಾಹಿತಿಯನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಮಾದರಿ ಮತ್ತು ವೇರಿಯಂಟ್‌ಗಳನ್ನು ಅವಲಂಬಿಸಿ ಬೆಲೆಗಳು ಬದಲಾಗಬಹುದು ಎಂಬ ನಿರೀಕ್ಷೆಗಳು ಮಾರುಕಟ್ಟೆಯಲ್ಲಿವೆ. ಕಂಪನಿಯಂದ ಅತ್ಯಂತ ಕೈಗೆಟುಕುವ ವಾಹನ ಎಂದು ಕರೆಯಲ್ಪಡುವ ಕಿಯಾ ಸಾನೆಟ್ (Kia Sonet) ಬೆಲೆ 7.99 ಲಕ್ಷ ರಿಂದ 14.69 ಲಕ್ಷ ರೂಪಾಯಿವರೆಗೆ ಇರುತ್ತದೆ.

ಸಾನೆಟ್, ಸೆಲ್ಟೋಸ್ ಹಾಗೂ ಕಾರೆನ್ಸ್ ಪ್ರಸ್ತುತ ಬೆಲೆ:

 

advertisement

Image Source: Kia

 

ಇನ್ನು ಭಾರತದಲ್ಲಿ ಉತ್ತಮ ಸೇಲ್ ಕಂಡಿದ್ದ:

ಕಿಯಾ ಕಾರೆನ್ಸ್ (Kia Carens) ಎಂಪಿವಿ ಬೆಲೆ 10.45 ಲಕ್ಷ ರೂನಿಂದ 18.95 ಲಕ್ಷ ರೂಪಾಯಿವರೆಗೆ ಇದೆ. ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿ ಕಿಯಾ ಸೆಲ್ಟೋಸ್ ಬೆಲೆ 10.90 ಲಕ್ಷ ರೂಪಾಯಿಯಿಂದ 20.30 ಲಕ್ಷ ರೂಪಾಯಿವರೆಗೆ ಇದೆ. ಈ ಎಲ್ಲಾ ಬೆಲೆಗಳು ಎಕ್ಸ್‌ ಶೋರೂಂ ಬೆಲೆಗಳಾಗಿವೆ.

ಕಿಯಾ ಇಂಡಿಯಾದ ಸೇಲ್ಸ್ ಅಂಡ್ ಮಾರ್ಕೆಟಿಂಗ್ ನ್ಯಾಷನಲ್ ಹೆಡ್ ಹರ್ದೀಪ್ ಸಿಂಗ್ ಬ್ರಾರ್ ಅವರು ಬೆಲೆ ಏರಿಕೆಯ ಬಗ್ಗೆ ಮಾತನಾಡಿದ್ದು, ಕಿಯಾದಲ್ಲಿ ನಾವು ನಮ್ಮ ಮೌಲ್ಯಯುತ ಗ್ರಾಹಕರಿಗೆ ಪ್ರೀಮಿಯಂ ಆಗಿದ್ದೇವೆ. ತಾಂತ್ರಿಕವಾಗಿ ಮುಂದುವರಿದ ಉತ್ಪನ್ನಗಳನ್ನು ಒದಗಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತೇವೆ. ಆದಗ್ಯೂ ಸರಕುಗಳ ಬೆಲೆಗಳಲ್ಲಿ ನಿರಂತರ ಹೆಚ್ಚಳ, ವಿನಿಮಯ ದರ ಮತ್ತು ಹೆಚ್ಚುತ್ತಿರುವ ಇನ್ಫುಟ್ ವೆಚ್ಚದ ಕಾರಣ, ಭಾಗಶಃ ಬೆಲೆ ಏರಿಕೆ ಅನಿವಾರ್ಯವಾಗಿದೆ. ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಬೀರುವುದನ್ನು ತಪ್ಪಿಸಲು ಕಂಪನಿ ಕ್ರಮ ಕೈಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಾರಾಟದ ಅಂಕಿ ಅಂಶಗಳು:

ಭಾರತಕ್ಕೆ ಪ್ರವೇಶಿಸಿದ ಬಳಿಕ ಕಿಯಾ ಗಮನಾರ್ಹವಾದ ಮಾರಾಟದ ಅಂಕಿಅಂಶಗಳನ್ನು ಸಾಧಿಸಿದೆ. ದೇಶೀಯ ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಸೇರಿ ಸುಮಾರು 1.16 ಮಿಲಿಯನ್ ಯುನಿಟ್‌ಗಳನ್ನು ಕಂಪನಿ ಮಾರಾಟ ಮಾಡಿದೆ. ಕಂಪನಿಯ ಜನಪ್ರಿಯ ಸೆಲ್ಟೋಸ್ 6,13,000 ಯುನಿಟ್ ಮಾರಾಟದೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, 3,95,000 ಯುನಿಟ್‌ಗಳೊಂದಿಗೆ ಸೊನೆಟ್ ಎರಡನೇ ಸ್ಥಾನದಲ್ಲಿದೆ. ಇನ್ನು ಕ್ಯಾರೆನ್ಸ್‌ನ 1,59,000 ಯುನಿಟ್‌ಗಳು ಮಾರಾಟವಾಗಿವೆ.

advertisement

Leave A Reply

Your email address will not be published.