Karnataka Times
Trending Stories, Viral News, Gossips & Everything in Kannada

Kia Seltos: ಕ್ರೆಟಾಗೆ ಪ್ರತಿಸ್ಪರ್ಧಿ ಯಾಗಿ ಕಡಿಮೆ ಬೆಲೆಗೆ ಹೊಸ ಕಾರು ಬಿಡುಗಡೆ ಮಾಡಿದ ಕಿಯಾ, ಅದ್ಭುತ ಫೀಚರ್ಸ್!

advertisement

ಕಿಯಾ ಇಂಡಿಯಾದ ಜನಪ್ರಿಯ ಎಸ್‌ಯುವಿಗಳಲ್ಲಿ ಸೆಲ್ಟೋಸ್ ಕೂಡಾ ಒಂದು. ಇದೀಗ ಕಿಯಾ ತನ್ನ ಸೆಲ್ಟೋಸ್ ಶ್ರೇಣಿಯ ಡೀಸೆಲ್ ಎಂಜಿನ್ ಆಯ್ಕೆನಲ್ಲಿ ಮತ್ತೊಂದು ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡುತ್ತಿದೆ. ಈ ಹೊಸ ರೂಪಾಂತರವನ್ನು ಭಾರತದ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಸೆಲ್ಟೋಸ್ ಡೀಸೆಲ್ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಸಿಗುತ್ತಿದೆ. ಈ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ರೂಪಾಂತರ ಎಕ್ಸ್‌ಶೋರೂಮ್ ಬೆಲೆ 11,99,900 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ. ಈ ಹೊಸ ರೂಪಾಂತರದ ಬಗೆಗಿನ ಇನ್ನಷ್ಟು ಮಾಹಿತಿಯನ್ನು ನಾವಿಂದು ತಿಳಿದು ಕೊಳ್ಳೋಣ.

ಪವರ್‌ಟ್ರೇನ್

ಹೊಸ ಕಿಯಾ ಸೆಲ್ಟೋಸ್ (Kia Seltos) ಮ್ಯಾನ್ಯುವಲ್ ರೂಪಾಂತರ 1.5-ಲೀಟರ್ ಡಿಸೇಲ್ ಎಂಜಿನ್ ಅನ್ನು ಹೊಂದಿದೆ. ಈ ಹಿಂದೆ ಈ ಇಂಜಿನ್ ಅನ್ನು 6-ಸ್ಪೀಡ್ iMT ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ ಬಾಕ್ಸ್‌ ಆಯ್ಕೆಯಲ್ಲಿ ಮಾತ್ರ ನೀಡಲಾಗುತ್ತಿತ್ತು. ಇದೀಗ ಹೊಸ ರೂಪಾಂತರ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಬರುತ್ತಿದೆ. ಈ ಎಂಜಿನ್ 116 ಎಚ್‌ಪಿ ಶಕ್ತಿ ಹಾಗೂ 250 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.

ಉತ್ತಮ ಮಾರಾಟ ಕಂಡ ವಾಹನ

ಭಾರತದಲ್ಲಿ ಕಿಯಾದ ಅತ್ಯಂತ ಜನಪ್ರಿಯ ಎಸ್‌ಯುವಿಗಳಲ್ಲಿ ಸೆಲ್ಟೋಸ್ ಕೂಡಾ ಒಂದು. 2023ರ ಜುಲೈನಲ್ಲಿ ಸೆಲ್ಟೋಸ್‌ ಫೇಸ್‌ಲಿಫ್ಟ್ ಬಿಡುಗಡೆಯಾಗಿತ್ತು. ಅಂದಿನಿಂದ ಗಮನಾರ್ಹ ಯಶಸ್ಸನ್ನು ಗಳಿಸಿರುವ ಈ ಎಸ್‌ಯುವಿ ಇದುವರೆಗೆ ಸುಮಾರು 65,000 ಯುನಿಟ್‌ಗಳನ್ನು ಮಾರಾಟದ ಗಡಿ ತಲುಪಿದೆ. 2019ರಲ್ಲಿ ಸೆಲ್ಟೋಸ್ ಬಿಡುಗಡೆಯಾಗಿತ್ತು. ಈ ಮಾದರಿಯ ಶ್ರೇಣಿಯು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 6 ಲಕ್ಷ ಯುನಿಟ್‌ಗಳಷ್ಟು ಮಾರಾಟ ಕಂಡಿದೆ. ಕಿಯಾ ಇಂಡಿಯಾದ ಒಟ್ಟು ದೇಶೀಯ ಮಾರಾಟದಲ್ಲಿ 51 ಶೇಕಡಾಕ್ಕಿಂತ ಹೆಚ್ಚಿನ ಕೊಡುಗೆಯನ್ನು ಇದು ನೀಡಿದೆ.

advertisement

ವೈಶಿಷ್ಟ್ಯಗಳು

ಹೊಸ ಸೆಲ್ಟೋಸ್ ಡೀಸೆಲ್ ಮ್ಯಾನ್ಯುವಲ್ ಟ್ರಿಮ್ 32 ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೆ, ಇದು 17 ವೈಶಿಷ್ಟ್ಯಗಳೊಂದಿಗೆ ಲೆವೆಲ್ 2 ಎಡಿಎಎಸ್ ಸೂಟ್, ಇನ್ಫೋಟೈನ್‌ಮೆಂಟ್ ಮತ್ತು ಇನ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಅವಳಿ ಡಿಸ್‌ ಪ್ಲೇ, ಡ್ಯುಯಲ್ ಝೋನ್ ಆಟೋಮ್ಯಾಟಿಕ್ ಏರ್ ಕಂಡಿಷನರ್ ಮತ್ತು 18-ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ ಡ್ಯುಯಲ್-ಪೇನ್ ವಿಹಂಗಮ ಸನ್‌ರೂಫ್ ಮತ್ತು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಕೂಡಾ ಸೇರಿವೆ.

ಕ್ರೆಟಾಗೆ ಪ್ರತಿಸ್ಪರ್ಧಿ

ಇತ್ತೀಚೆಗಷ್ಟೇ 2024 ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್‌ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಕ್ರೆಟಾ ಬಿಡುಗಡೆಯ ಸ್ವಲ್ಪ ದಿನದಲ್ಲೇ ಕಿಯಾ ತನ್ನ ಸೆಲ್ಟೋಸ್ ಮಾಡೆಲ್‌ಗಾಗಿ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ವಿಸ್ತರಿಸಿದೆ. ಇತ್ತೀಚೆಗೆ ಅನಾವರಣಗೊಂಡ 2024 ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್‌ ಆರು ಡೀಸೆಲ್ ಎಂಟಿ ರೂಪಾಂತರಗಳನ್ನು ಹೊಂದಿದ್ದು, ಇವುಗಳ ಎಕ್ಸ್‌ಶೋರೂಮ್ ಬೆಲೆ 11,99,900 ಲಕ್ಷ ರೂಪಾಯಿಯಿಂದ 18.74 ಲಕ್ಷ ರೂಪಾಯಿ ನಡುವೆ ಇದೆ. ಹೀಗಾಗಿ ಕ್ರೆಟಾಕ್ಕೆ ಸ್ಪರ್ಧೆಯೊಡ್ಡುವ ಹುಮ್ಮಸ್ಸಿನಿಂದಲೇ ಕಿಯಾ ಸೆಲ್ಟೋಸ್ ಡೀಸೆಲ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆಯ್ಕೆಯ ಮಾದರಿ ಎಂಟ್ರಿ ಕೊಟ್ಟಿದೆ.

ಸೆಲ್ಟೋಸ್‌ ರೂಪಾಂತರ, ಎಕ್ಸ್‌ಶೋರೂಮ್ ಬೆಲೆ

ಹೊಸದಾಗಿ ಬಿಡುಗಡೆಯಾದ ಸೆಲ್ಟೋಸ್ ಡೀಸೆಲ್ ಮ್ಯಾನ್ಯುವಲ್ ಆಯ್ಕೆಗಳೊಂದಿಗೆ HTE, HTK, HTK+, HTX, HTX+ ಎಂಬ ಐದು ಟ್ರೀಮ್‌ಗಳಲ್ಲಿ ನೀಡಲಾಗುತ್ತಿದೆ. ಈ ಮೂಲಕ ಈ ಟ್ರಿಮ್‌ಗಳು ಸೆಲ್ಟೋಸ್ ಶ್ರೇಣಿಯನ್ನು ಒಟ್ಟು 24 ರೂಪಾಂತರಗಳಿಗೆ ವಿಸ್ತರಿಸುತ್ತವೆ. ಹೊಸ ಸೆಲ್ಟೋಸ್ ಡೀಸೆಲ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನ ಟ್ರಿಮ್‌ಗೆ ಅನುಗುಣವಾಗಿ ಎಕ್ಸ್‌ಶೋರೂಮ್ ಬೆಲೆ ಇಂತಿದೆ.
HTE – 11,99,900 ರೂಪಾಯಿ
HTK – 13,59,900 ರೂಪಾಯಿ
HTK+ – 14,99,900 ರೂಪಾಯಿ
HTX – 16,67,900 ರೂಪಾಯಿ
HTX+ – 18,27,900 ರೂಪಾಯಿ

advertisement

Leave A Reply

Your email address will not be published.