Karnataka Times
Trending Stories, Viral News, Gossips & Everything in Kannada

Child Adoption: ಇಂತಹವರು ಮಾತ್ರ ಭಾರತದಲ್ಲಿ ಮಗು ದತ್ತು ಪಡೆಯಬಹುದು! ಹೊಸ ಕಾನೂನು

advertisement

ಸಾಮಾಜಿಕ ಜಾಲತಾಣದ ರೀಲ್ಸ್ ಸ್ಟಾರ್, ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ (Sonu Srinivas Gowda) ಅವರು ಮಗು ಒಂದನ್ನು ದತ್ತು ಪಡೆದಿದ್ದಾರೆ ಎಂದು ಹೇಳಿ ಇತ್ತೀಚೆಗೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರೂ. ಆದರೆ ಆಕೆ ದತ್ತು ಪಡೆಯುವ ಯಾವುದೇ ಕಾನೂನು ಕ್ರಮ ಅನುಸರಿಸಿಲ್ಲ ಎಂಬುದು ತಿಳಿದು ಬಂದಂತೆ ಆಕೆ ವಿರುದ್ದ ನಿಯಮ ಉಲ್ಲಂಘನೆ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದ್ದು ಈ ವಿಚಾರ ಈಗ ಇನ್ನೂ ಕೂಡ ತನಿಖೆಯಲ್ಲಿ ಇದೆ ಎನ್ನಬಹುದು. ಹಾಗಾದರೆ ಈ ಬಗ್ಗೆ ಇರುವ ನಿಯಮ ಏನು, ದತ್ತು ಪಡೆಯಬೇಕಾದರೆ ಏನೆಲ್ಲ ಕ್ರಮ ವಹಿಸಬೇಕು ಇಲ್ಲಿದೆ ಮಾಹಿತಿ.

ಈ ಅರ್ಹತೆ ಹೊಂದಿರಬೇಕು?

 

Image Source: India.com

 

  • ಮಗುವನ್ನು ದತ್ತು (Child Adoption) ಪಡೆಯಲು ಇಚ್ಛಿಸುವ ಪೋಷಕರು ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿ ಇರಬೇಕು.
  • ಆರ್ಥಿಕವಾಗಿ ಸದೃಢವಾಗಿದ್ದರೆ ಮಾತ್ರ ಮಗು ದತ್ತು ನೀಡಲಾಗುತ್ತದೆ.
  • ದತ್ತು ಪಡೆಯುವವರಿಗೆ ಯಾವುದೇ ಮಾರಕ ಕಾಯಿಲೆ ಇರಬಾರದು, ಅಪಾಯಕಾರಿ ಕಾಯಿಲೆಗೆ ತುತ್ತಾಗಿರಬಾರದು.
  • ದತ್ತು ಪಡೆಯುವವರು ಯಾವುದೇ ಅಪರಾಧ ಪ್ರಕರಣಗಳಲ್ಲಿ ಇರಬಾರದು ಹಾಗೂ ಮಕ್ಕಳ ಹಕ್ಕು ಉಲ್ಲಂಘನೆ ಪ್ರಕರಣದಲ್ಲಿ ಕೂಡ ಇರಬಾರದು.
  • ವಿವಾಹಿತರು ಮಗು ದತ್ತು ಪಡೆಯುವುದಾದರೆ ದತ್ತುಪಡೆಯುವ ಕಾರಣ ತಿಳಿಸುವ ಜೊತೆಗೆ ಮಗುವಿನ ದತ್ತು ಪಡೆಯುವಿಕೆಗೆ ದಂಪತಿಗಳ ಸಮ್ಮತಿ ಇರಬೇಕು.
  • ಮಹಿಳೆ ಯಾವುದೇ ಲಿಂಗದ ಅಂದರೆ ಗಂಡು ಅಥವಾ ಹೆಣ್ಣು ಮಗುವನ್ನು ದತ್ತು ಪಡೆಯಬಹುದು.
  • ಪುರುಷರಿಗೆ ಗಂಡು ಮಗು ಮಾತ್ರ ದತ್ತು ಪಡೆಯುವ ಅಧಿಕಾರ ಇರಲಿದೆ. ಹೆಣ್ಣು ಮಗು ದತ್ತು ಪಡೆಯುವಂತಿಲ್ಲ.
  • ಮಲ ಪೋಷಕರಾಗಿದ್ದು ದತ್ತು ಪಡೆಯಲು ಇಚ್ಛಿಸಿದರೆ ಅಂದರೆ ಎರಡನೇ ವಿವಾಹ ಸಂದರ್ಭದಲ್ಲಿ ದತ್ತು ಪ್ರಕ್ರಿಯೆ ಬೇಕಾದರೆ ವಿವಾಹವಾಗಿ ಕನಿಷ್ಠ ಎರಡು ವರ್ಷವಾದರೂ ಆಗಿರಬೇಕು.
  • ಮಗು ದತ್ತು ಪಡೆಯಲು ಪೋಷಕರಿಗೆ ಕೂಡ ವಯಸ್ಸಿನ ಮಿತಿಯೂ ಅನ್ವಯವಾಗಲಿದೆ.

 

advertisement

Image Source: Child Adoption

 

  • ಮಗುವನ್ನು ದತ್ತು ಪಡೆಯುವವರ ನಡುವೆ ವಯಸ್ಸಿನ ಅಂತರ ಮೊದಲೇ ತಿಳಿಸಲಾಗಿದ್ದು 25ವರ್ಷಗಳ ನಡುವಿನ ಅಂತರ ಇರಲೇ ಬೇಕು.
  • ದಂಪತಿಗಳು ಮಗುವನ್ನು ದತ್ತು ಪಡೆಯುವಾಗ ನಿರೀಕ್ಷಿತ ದತ್ತು ಸಂದರ್ಭದಲ್ಲಿ ಪೋಷಕರ ಸಂಯೋಜಿತ ವಯಸ್ಸಿನ ಅಂದಾಜು ಮಾಡಲಾಗುವುದು.
  • ಈ ಒಂದು ವಯಸ್ಸಿನ ಕೆಲ ನಿಯಮವು ನೀವು ನಿಮ್ಮ ಕುಟುಂಬ ಸದಸ್ಯರನ್ನು ಅಥವಾ ದೂರದ ಸಂಬಂಧಿಯನ್ನು ದತ್ತು ಪಡೆಯುವಾಗ ಈ ನಿಯಮ ಅನ್ವಯವಾಗಲಾರದು.
  • ಎರಡು ಅಥವಾ ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವ ಪೋಷಕರಿಗೆ ದತ್ತು ಪಡೆಯುವವರಿಗೆ ನಿಯಮ 2ರ ಷರತ್ತು ಅನ್ವಯವಾಗಲಿದೆ.
  • ನಿಯಮ 2ರ ಷರತ್ತು 25ರಲ್ಲಿ ನಿರ್ದಿಷ್ಟ ಪಡಿಸಿದ ವಿಶೇಷ ಮಕ್ಕಳನ್ನು ಹಾಗೂ ಮಲ ಮಕ್ಕಳನ್ನು , ಸಂಬಂಧಿಕರ ಮಕ್ಕಳನ್ನು ಮಾತ್ರವೇ ದತ್ತು ಪಡೆಯಬಹುದು.
  • ನಿಯಮ 2 ಷರತ್ತು 13ರರ ಪ್ರಕಾರ ಎರಡಕ್ಕಿಂತ ಅಧಿಕ ಮಕ್ಕಳು ಇದ್ದವರಿಗೆ ಮಕ್ಕಳ ನಿರ್ವಹಣೆ ಕಷ್ಟವಾಗಲಿದೆ ಎಂಬ ಅಂಶ ಎತ್ತಿ ಹಿಡಿಯಲಾಗಿದೆ. ಮೊದಲು ದತ್ತು ಪಡೆದು ನಂತರ ಅವರಿಗೆ ಮಕ್ಕಳು ಜನಿಸಿದ್ದರೆ ಈ ನಿಯಮ ಅನ್ವಯವಾಗಲಾರದು.
  • ದತ್ತು ಪಡೆದ ಬಳಿಕ ಮನೆಯ ಅಧ್ಯಯನ ವರದಿಯನ್ನು ಮರು ಮೌಲ್ಯ ಮಾಪನ ಮಾಡಬೇಕು.
  • ಇವುಗಳ ಜೊತೆಗೆ ದತ್ತು ಪಡೆಯಲು ಮುಂದಾಗುವವರ ಹಿನ್ನೆಲೆ ಕೌಟುಂಬಿಕ ಸ್ಥಿತಿಗತಿ, ದಂಪತಿಗಳ ನಡುವಿನ ಸಂಬಂಧ ಎಲ್ಲವನ್ನು ಸಹ ಪರಿಶೀಲನೆ ಮಾಡಲಾಗುವುದು.
  • ದತ್ತು ಮಗುವಿಗೆ ಸ್ವಂತ ಮಗುವಿಗೆ ಸಿಗುವ ಎಲ್ಲ ಸೇವಾ ಸೌಲಭ್ಯ ಹಾಗೂ ಹಕ್ಕು ಸಿಗಲಿದ್ದು ಉಲ್ಲಂಘನೆ ಆದರೆ ಶಿಕ್ಷೆ ವಿಧಿಸಲಾಗುವುದು.
  • ಒಮ್ಮೆ ದತ್ತು ಪಡೆದ ಮಗುವನ್ನು ಪುನಃ ದತ್ತು ನೀಡುವ ಕ್ರಮ ಇಲ್ಲ ಎಂದು ಹೇಳಬಹುದು.

ಕಾನೂನು ನಿಯಮ ಇದೆ:

ದತ್ತು ಮಕ್ಕಳಿಗೆ (Child Adoption) ಸಂಬಂಧಿಸಿದ ಕಾನೂನು ನಿಯಮ ಇದೆ. ಹಿಂದೂ ಅಡಾಪ್ಶನ್ ಮತ್ತು ಮೈಂಟೆನೆನ್ಸ್ ಆ್ಯಕ್ಟ್ 1956, ಗಾರ್ಡಿಯನ್ಸ್ ಆ್ಯಂಡ್ ವಾರ್ಡ್ಸ್ ಆ್ಯಕ್ಟ್ 1890, ಜುವೆನೈಲ್ ಜಸ್ಟಿಸ್ ಅಮೆಂಡ್ ಮೆಂಟ್ ಆ್ಯಕ್ಟ್ 2006 ಪ್ರಕಾರ ಕಾನೂನು ಬದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ.

ದತ್ತು ಪಡೆಯಲು ಇಚ್ಛಿಸುವವರು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ DCPO ಅವರನ್ನು ಭೇಟಿಯಾಗಿ ಅರ್ಜಿ ಸಲ್ಲಿಸಬಹುದು.‌ ಇಲ್ಲವೇ ಆನ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. www.cara.nic.in ಭೇಟಿ ನೀಡಿ ಅರ್ಜಿ ಸಲ್ಲಿಸಿ.

advertisement

Leave A Reply

Your email address will not be published.