Karnataka Times
Trending Stories, Viral News, Gossips & Everything in Kannada

March 31: ಮಾರ್ಚ್ 31ರ ಒಳಗೆ FD, ಟ್ಯಾಕ್ಸ್, ಹೋಂ ಲೋನ್, ಫಾಸ್ಟ್ ಟ್ಯಾಗ್ ಇದ್ದವರಿಗೆ ಕೊನೆಯ ಆದೇಶ! ಈ ಕೆಲಸ ಮುಗಿಸಿ

advertisement

ಮಾರ್ಚ್ 31ನ್ನು ಆರ್ಥಿಕ ವರ್ಷದಲ್ಲಿ ಅತ್ಯಂತ ಪ್ರಮುಖ ದಿನ ಎಂದಾಗಿ ಪರಿಗಣಿಸಲಾಗುತ್ತದೆ ಯಾಕೆಂದರೆ ಇದು ಆರ್ಥಿಕ ವರ್ಷದ ಕೊನೆಯ ದಿನ ಆಗಿರುತ್ತದೆ. 31ರ ಒಳಗೆ ಟ್ಯಾಕ್ಸ್ ಉಳಿತಾಯ ಮಾಡುವುದು ಹಾಗೂ ಸೇವಿಂಗ್ ಮಾಡುವಂತಹ ಕೆಲಸಗಳನ್ನು ಮಾಡಿಬಿಡಬೇಕು. ಮಾರ್ಚ್ 31ರ ಒಳಗೆ ಎಲ್ಲ ಡೆಡ್ ಲೈನ್ ಗಳು ಮುಗಿದುಬಿಡುತ್ತವೆ. ಒಂದು ವೇಳೆ ನೀವು ಕೆಲವೊಂದು ಪ್ರಮುಖ ಕೆಲಸಗಳನ್ನು ಈ ದಿನಾಂಕದೊಳಗೆ ಮಾಡದೆ ಹೋದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಮಾರ್ಚ್ 31ರ ಒಳಗೆ ಈ ಕೆಲಸಗಳನ್ನು ಮುಗಿಸಿಬಿಡಬೇಕು:

FASTag KYC Update:

 

Image Source: India TV News

 

NHAI ಫಾಸ್ಟ್ ಟ್ಯಾಗ್ ಗ್ರಾಹಕರ ಬಳಿ ಕೆವೈಸಿ ಅಪ್ಡೇಟ್ ಮಾಡುವಂತೆ ಈಗಾಗಲೇ ಹೇಳಿಕೊಂಡಿದೆ. March 31 ಕೆವೈಸಿ ಅಪ್ಡೇಟ್ ಮಾಡೋದಕ್ಕೆ ಕೊನೆ ದಿನಾಂಕವಾಗಿದೆ. ಒಂದು ವೇಳೆ ನಿಗದಿತ ದಿನಾಂಕದೊಳಗೆ ಈ ಕೆಲಸವನ್ನು ಮಾಡದೆ ಹೋದಲ್ಲಿ ಫಾಸ್ಟ್ ಟ್ಯಾಗ್ ಸರ್ವಿಸ್ (FASTag Service) ಪಡೆದುಕೊಳ್ಳುವಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Updated ITR Filing:

 

Image Source: Business Today

 

2020 ಹಾಗೂ 21ರ ಆರ್ಥಿಕ ವರ್ಷದ ಅಪ್ಡೇಟೆಡ್ ಐಟಿಆರ್ ಫೈಲಿಂಗ್ (Updated ITR Filing) ಸಲ್ಲಿಸೋದಕ್ಕೆ ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಫೈನಾನ್ಸ್ ಆಕ್ಟ್ 2022ರ ಪ್ರಕಾರ ಪ್ರಸ್ತುತಪಡಿಸಿರುವ ರೀತಿಯಲ್ಲಿ ಒಂದು ವೇಳೆ ಯಾವುದೇ ಆರ್ಥಿಕ ವರ್ಷದ ಐಟಿಆರ್ ಫೈಲ್ (ITR File) ಮಾಡುವುದನ್ನ ತಪ್ಪಿಸಿಕೊಂಡಿದ್ದರೆ ಅವರಿಗೆ ಈ ಅವಕಾಶವನ್ನು ನೀಡಲಾಗುತ್ತದೆ. ಅಂತಹ ಟ್ಯಾಕ್ಸ್ ಪೇಯರ್ ಗಳಿಗೆ ಮಾರ್ಚ್ 31ಕ್ಕೆ ಐಟಿಆರ್ ಫೈಲ್ ಮಾಡೋದಕ್ಕೆ ಅವಕಾಶ ನೀಡಲಾಗಿದೆ. ಇಂತಹ ತೆರಿಗೆ ಕಟ್ಟುವಂತಹ ವ್ಯಕ್ತಿಗಳಿಗೆ ಐಟಿಆರ್ ಫೈಲಿಂಗ್ ಅಥವಾ ITR-U ಮಾಡುವಂತಹ ಅವಕಾಶ ನೀಡಲಾಗುತ್ತದೆ. ಹೊಸ ಐಟಿಆರ್ -U ಫಾರ್ಮ್ ಜೊತೆಗೆ ಸಂಬಂಧಪಟ್ಟಂತಹ ಐಟಿಆರ್ ಫಾರ್ಮ್ ಅನ್ನು ಬಳಸಬೇಕಾಗುತ್ತದೆ.

advertisement

Income Tax Saving for the Financial Year 2023-24:

ಫೈನಾನ್ಸಿಯಲ್ ಪ್ಲಾನಿಂಗ್ (Financial Planning) ನಲ್ಲಿ ಇನ್ಕಮ್ ಟ್ಯಾಕ್ಸ್ ಪ್ಲಾನಿಂಗ್ (Tax Planning) ಅತ್ಯಂತ ಪ್ರಮುಖ ಎಂಬುದಾಗಿ ಪರಿಗಣಿಸಲಾಗುತ್ತದೆ ಯಾಕೆಂದರೆ ಇದರಲ್ಲಿ ಟ್ಯಾಕ್ಸ್ ನೀಡುವ ಸಂದರ್ಭದಲ್ಲಿ ಟ್ಯಾಕ್ಸ್ ಪೇಯರ್ ಗೆ ಟ್ಯಾಕ್ಸ್ ಹಣವನ್ನು ಉಳಿತಾಯ ಮಾಡುವಂತಹ ಯೋಜನೆಯಾಗಿದೆ. ಮಾರ್ಚ್ 31 ಕೇವಲ 2023 ಹಾಗೂ 24ನೇ ಆರ್ಥಿಕ ವರ್ಷದ ಕೊನೆಯ ದಿನಾಂಕ ಮಾತ್ರವಲ್ಲದೆ ಇನ್ಕಮ್ ಟ್ಯಾಕ್ಸ್ ಸೇವಿಂಗ್ ಇನ್ವೆಸ್ಟ್ಮೆಂಟ್ ಮಾಡುವಂತಹ ಕೊನೆಯ ದಿನ ಕೂಡ ಆಗಿದೆ.

SBI ಗ್ರಹಸಾಲದ ಬಡ್ಡಿಯ ಮೇಲೆ ರಿಯಾಯಿತಿ:

 

Image Source: Mint

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಗ್ರಾಹಕರಿಗೆ ಮಾರ್ಚ್ 31ರವರೆಗೆ ಕೂಡ ಹೋಂ ಲೋನ್ (Home Loan) ಮೇಲೆ ಕಡಿಮೆ ಬಡ್ಡಿ ದರದ ಆಫರ್ ನೀಡಿದೆ. ಜನವರಿ ಒಂದರಿಂದ ಪರಿಚಯಿಸಿರುವಂತಹ ಈ ಯೋಜನೆ ಅಡಿಯಲ್ಲಿ ಕೆಲವೊಂದು ಸನ್ನಿವೇಶಗಳಲ್ಲಿ 65 ರಿಂದ 75 ಆಧಾರ್ ಅಂಕಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದು ಬೇರೆ ಬೇರೆ ವಿಧದ ಹೋಂ ಲೋನ್ (Home Loan) ಮೇಲೆ ಅನ್ವಯವಾಗುತ್ತದೆ. ಇದರಲ್ಲಿ ನಾನ್ ಸ್ಯಾಲರಿಡ್, NRI ಹಾಗೂ ಹಿರಿಯ ನಾಗರಿಕರು ಕೂಡ ಒಳಗೂಡಿರುತ್ತಾರೆ.

SBI Amrit Kalash and WeCare Scheme:

 

Image Source: Mint

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕಡೆಯಿಂದ ನೀಡಲಾಗುವಂತಹ ಸ್ಪೆಷಲ್ Fixed Deposit Scheme ಆಗಿರುವ SBI Amrit Kalash ಸ್ಕೀಮ್ ಮಾರ್ಚ್ 31ರವರೆಗೆ ಕೂಡ ಲಭ್ಯವಿದೆ. Wecare ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಐದರಿಂದ ಹತ್ತು ವರ್ಷಗಳ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತದೆ. ಅಮೃತ್ ಕಲಷ್ ಯೋಜನೆ ಅಡಿಯಲ್ಲಿ ಕೂಡ ಇದೇ ರೀತಿ ಹೆಚ್ಚಿನ ಬಡ್ಡಿದರವನ್ನು ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ ನೀಡಲಾಗುತ್ತದೆ.

advertisement

Leave A Reply

Your email address will not be published.