Karnataka Times
Trending Stories, Viral News, Gossips & Everything in Kannada

ITR: ಆದಾಯ ತೆರಿಗೆ ಇಲಾಖೆಯ ಹೊಸ ರೂಲ್ಸ್! ಇನ್ಮೇಲೆ ಇಂತಹವರಿಗೆ 6 ತಿಂಗಳ ಜೈಲು ಶಿಕ್ಷೆ

advertisement

ಆದಾಯ ತೆರಿಗೆ ಸಲ್ಲಿಕೆ ಎನ್ನುವುದು ಈ ದೇಶದ ಪ್ರತಿ ನಾಗರಿಕರಿಗೂ ಮೂಲ ಭೂತ ಕರ್ತವ್ಯವಾಗಿದೆ. ಆದಾಯ ತೆರಿಗೆ ಸಲ್ಲಿಕೆ ಮಾಡದೆ ಇದ್ದರೆ ಅದು ಅಪರಾಧ ಕೃತ್ಯವಾಗುತ್ತದೆ. ಆದಾಯ ತೆರಿಗೆಯನ್ನು ಸಲ್ಲಿಕೆ ಮಾಡಲು ತಿಳಿಸಲಾಗುತ್ತಿದ್ದು ಇದನ್ನು ನಿರ್ಲಕ್ಷ್ಯ ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನಬಹುದು. ಈ ನಿಟ್ಟಿನಲ್ಲಿ ಆದಾಯ ತೆರಿಗೆ ಸಲ್ಲಿಕೆ ಅಂದರೆ ITR ಸಲ್ಲಿಕೆ ಮಾಡದ ಮಹಿಳೆ ಯೊಬ್ಬರಿಗೆ ಬರೋಬ್ಬರಿ ಆರು ತಿಂಗಳು ಜೈಲು ಶಿಕ್ಷೆಯ ಸಜೆ ನೀಡಿದ್ದು ಈ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ITR ಸಲ್ಲಿಕೆಯಲ್ಲಿ ಆಗಿದ್ದೇನು?

ದೆಹಲಿಯ ಮೂಲದ ‌ ಮಹಿಳೆಯೊಬ್ಬರು ಎರಡು ಕೋಟಿಗಿಂತ ಅಧಿಕ ಆದಾಯ ಹೊಂದಿದ್ದು ವಾರ್ಷಿಕ ITR ಸಲ್ಲಿಕೆ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ಮಹಿಳೆಯ ತನ್ನ ಎರಡು ಕೋಟಿ ರೂಪಾಯಿಗೆ 2ಲಕ್ಷ ರೂಪಾಯಿ ಯನ್ನು TDS ಅಮೌಂಟ್ ಎಂದು ಕಟ್ ಮಾಡಲಾಗಿದೆ. ಅದನ್ನು ವಾಪಾಸ್ಸು ನೀಡುವಂತೆ ಆದಾಯ ತೆರಿಗೆ ಇಲಾಖೆ ಕಚೇರಿಗೆ ದೂರು ನೀಡಿದ್ದಾರೆ. ಕಚೇರಿಯಿಂದ ಈ ದೂರನ್ನು ಪರಿಶೀಲನೆ ಮಾಡಿದಾಗ ಅಸಲಿ ವಿಚಾರ ಹೊರ ಬಂದಿದೆ.

Image Source: Business Today

ಅಪರಾಧ ಕೃತ್ಯ

advertisement

ಮಹಿಳೆಯ ದೂರನ್ನು ಪರಿಶೀಲನೆ ಮಾಡಲಾಗಿದ್ದು 2014- 15ರ ಮೇಲೆ ಆದಾಯ ತೆರಿಗೆ ಮೇಲೆ ಯಾವುದೆ ತರವಾಗಿ ಐಟಿ ರಿಟರ್ನ್ ಸಲ್ಲಿಕೆ ಮಾಡಿಲ್ಲ ಎಂದು ತಿಳಿದು ಬಂದಿದೆ. ಇದು ಅಪರಾಧ ಕೃತ್ಯವಾಗಿದೆ. ಹೆಚ್ಚುವರಿ ಮೆಟ್ರೋ ಪಾಲಿಟೆನ್ ಮ್ಯಾಜಿಸ್ಟ್ರೇಟ್‌ ಮಯ್ಯಾಂಕ್ ಮಿತ್ತಲ್ ಅವರ ದೂರನ್ನು ಆಲಿಸಿದ್ದಾರೆ. ಬಳಿಕ ಮಹಿಳೆ ITR ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ 5000 ದಂಡ ಸಹಿತ 6ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಅದನ್ನು ತಪ್ಪಿದ್ದಲ್ಲಿ ಹೆಚ್ಚುವರಿ ಒಂದು ತಿಂಗಳ‌ಜೈಲು ಶಿಕ್ಷೆ ವಿಧಿಸಲು ನ್ಯಾಯಮೂರ್ತಿಗಳು ತೀರ್ಪನ್ನು ನೀಡಿದ್ದಾರೆ.

Image Source: Studycafe

ಜಾಮೀನು

ಮಹಿಳೆಯ ಪರವಾದ ವಕೀಲರು ಈ ಬಗ್ಗೆ ಆಕ್ಷೇಪ ವೆತ್ತಿದ್ದಾರೆ. ಮಹಿಳೆ ತೆರಿಗೆ ವಂಚನೆ ಮಾಡಲಿಲ್ಲ ಆದರೆ ನಿಬಂಧನೆಯ ನಿಯಮ ಪಾಲನೆ ಮಾಡದಿದ್ದದ್ದು ಅಪರಾಧ ಆಗಿದೆ. ಹಾಗಾಗಿ ಈ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆ ಸರಿಯಲ್ಲ. ಆಕೆ ಮುಗ್ದೆಯಾಗಿದ್ದು, ಅವಿದ್ಯಾವಂತೆ ಮತ್ತು ವಿಧವೆ ಕೂಡ ಆಗಿದ್ದಾರೆ. ಹಾಗಾಗಿ ಈ ಮಾಹಿತಿ ಯಾರೂ ಕೂಡ ಆಕೆಗೆ ತಿಳಿಸಿರಲಿಲ್ಲ. ಮಹಿಳೆ ಒಬ್ಬಂಟಿಗಳಾಗಿದ್ದು ಕುಟುಂಬದಲ್ಲಿ ಯಾರೂ ಇಲ್ಲ ಎಂಬುದು ಸಹ ಆರೋಪಿ ಪರ ವಕೀಲರು ತಿಳಿಸಿದ್ದಾರೆ. ಈ ನಡುವೆ 30 ದಿನಗಳ ನಿಬಂಧನೆ ಜಾಮೀನನ್ನು ನೀಡಲಾಗಿದೆ.

ಆರೋಪಿ ವಿರುದ್ಧ ವಾದ ಮಾಡುವ ವಕೀಲರು ಆಕೆ‌ ಮಾಡಿದ್ದು ತಪ್ಪು ಕೋಟ್ಯಾಂತರ ಹಣಕಾಸಿದ್ದರೂ ಅದರ ಮಾಹಿತಿಯನ್ನು ITR ಸಲ್ಲಿಕೆ ಮಾಡದಿದ್ದದ್ದು ಅಪರಾಧ ಹಾಗಾಗಿ ಶಿಕ್ಷೆ ವಿಧಿಸುವಂತೆ ಮತ್ತು ದೊಡ್ಡ ಮೊತ್ತದ ದಂಡ ವಿಧಿಸುವಂತೆ ಆರೋಪಿ ವಿರುದ್ಧ ವಕೀಲರು ತಮ್ಮ ವಾದ ಮಂಡಿಸಿದ್ದಾರೆ‌. ಈ ಪ್ರಕರಣ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಸದ್ಯ ಮಹಿಳೆ ಜಾಮೀನನ ಮೇಲೆ ಹೊರಗಿದ್ದಾರೆ ಎಂಬುದು ತಿಳಿದು ಬಂದಿದೆ.

advertisement

Leave A Reply

Your email address will not be published.