Karnataka Times
Trending Stories, Viral News, Gossips & Everything in Kannada

ITR Form: ಆದಾಯ ತೆರಿಗೆ ಫಾರಂ ನಲ್ಲಿ ಭಾರೀ ಬದಲಾವಣೆ, ಈ ವಿಷಯಗಳು ನಿಮ್ಮ ಗಮನದಲ್ಲಿರಲಿ!

advertisement

ITR-4 ಫಾರಂನ ಸೆಕ್ಷನ್ 44AD ಅಡಿಯಲ್ಲಿನ ವ್ಯಾಪಾರ ವಹಿವಾಟಿನ ಮಿತಿಯನ್ನು 3 ಕೋಟಿಗೆ ಏರಿಕೆ ಮಾಡಲಾಗಿದೆ. ನಗದು ವಹಿವಾಟು ಶೇಕಡಾ 5 ಅಥವಾ ಅದಕ್ಕಿಂತ ಕಡಿಮೆ ಇರಬೇಕು ಎಂದು ತಿಳಿಸಲಾಗಿದೆ. ಅದೇ ರೀತಿ ಸೆಕ್ಷನ್ 44ADA ಅಡಿಯಲ್ಲಿ ವೃತ್ತಿಪರರ ಮಿತಿಯನ್ನು 50 ಲಕ್ಷದಿಂದ 75 ಲಕ್ಷಕ್ಕೆ ಹೆಚ್ಚಿಸಲಾಗಿದೆ. ತೆರಿಗೆದಾರರೇ ದಯವಿಟ್ಟು ಗಮನಿಸಿ 2024-25ರ ಅಸೆಸ್​ಮೆಂಟ್ ಇಯರ್​ನ ಆದಾಯ ತೆರಿಗೆ ರಿಟರ್ನ್ ಫಾರ್ಮ್ (ITR Form) ಅನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷದ ಫಾರ್ಮ್​ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು, ಇದರ ಬಗ್ಗೆ ನೀವು ತಿಳಿದುಕೊಂಡಿರಬೇಕು. ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಈ ತಿಂಗಳ ಆರಂಭದಿಂದಲೇ ಅವಕಾಶ ನೀಡಲಾಗಿದೆ. ಆದಾಯ ತೆರಿಗೆ ಇಲಾಖೆ ITR-1 ಮತ್ತು ITR-4 ಫಾರಂ ಬಿಡುಗಡೆ ಮಾಡಿದೆ.

ಬದಲಾವಣೆಗಳೇನು?

 

 

ಸಾಮಾನ್ಯವಾಗಿ ಈ ಫಾರಂ (ITR Form) ಅನ್ನು ಆರ್ಥಿಕ ವರ್ಷದ ಕೊನೆಯ ತಿಂಗಳು ಅಂದ್ರೆ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಬಾರಿ ಆದಾಯ ತೆರಿಗೆ ಇಲಾಖೆ 2-3 ತಿಂಗಳುಗಳ ಮೊದಲೇ ಬಿಡುಗಡೆ ಮಾಡಿದೆ. ತೆರಿಗೆದಾರರು 2023-24ರ ಹಣಕಾಸು ವರ್ಷ ಅಂದ್ರೆ 2024-25 ರ ಅಸೆಸ್ ಮೆಂಟ್ ಇಯರ್​ಗೆ ಸಂಬಂಧಿಸಿದ ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ (Income Tax Returns) ಅಂದ್ರೆ ಐಟಿಆರ್ ಅನ್ನು ಜುಲೈ 31ರೊಳಗೆ ಸಲ್ಲಿಸಬೇಕು ಅಂತ ಸರ್ಕಾರ ಹೇಳಿದೆ. ಹಾಗಿದ್ದರೆ ಐಟಿಆರ್ ಫಾರ್ಮ್​ಗಳಲ್ಲಿ (ITR Forms) ಆಗಿರುವ ಪ್ರಮುಖ ಬದಲಾವಣೆ ನಾವು ತಿಳಿದುಕೊಳ್ಳಬೇಕು.

ಮೊದಲಿಗೆ ITR-1 ಬಗ್ಗೆ ಮಾತನಾಡೋಣ.. ಐಟಿಆರ್‌ ನಮೂನೆ 1 ಅನ್ನು ಸಹಜ್ ಅಂತ ಕರೆಯಲಾಗುತ್ತೆ.. ಯಾವ ವ್ಯಕ್ತಿ ವರ್ಷಕ್ಕೆ 50 ಲಕ್ಷ ರೂ. ಮತ್ತು ಅದಕ್ಕಿಂತ ಜಾಸ್ತಿ ಆದಾಯ ಹೊಂದಿದ್ದಾನೋ ಅಂದ್ರೆ ಈ 50 ಲಕ್ಷ ರೂಪಾಯಿ ಸಂಬಳ, ವಸತಿ ಮೂಲ ಹಾಗೂ 5 ಸಾವಿರವರೆಗಿನ ಕೃಷಿ ಆದಾಯದಿಂದ ಬರುತ್ತಿದ್ದರೆ ಅಂಥವರು ನಮೂನೆ 1ನ್ನು ಭರ್ತಿ ಮಾಡಬೇಕಾಗುತ್ತದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಹೊಸ ತೆರಿಗೆ ಪದ್ಧತಿಯನ್ನೇ ಡಿಫಾಲ್ಟ್ ಪದ್ಧತಿಯನ್ನಾಗಿ ಮಾಡಲಾಗಿದೆ.. ಇದರ ಅರ್ಥ ಏನೆಂದರೆ ಒಂದು ವೇಳೆ ನೀವು ವಿನಾಯಿತಿ ಮತ್ತು ಕಡಿತಗಳೊಂದಿಗೆ ಹಳೇ ತೆರಿಗೆ ಪದ್ಧತಿಯನ್ನೇ ಆಯ್ಕೆ ಮಾಡಿಕೊಳ್ಳೋದಾದ್ರೆ Yes ಆನ್ನೋದನ್ನ ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ನೀವು ಹೊಸ ತೆರಿಗೆ ಪದ್ಧತಿಯಿಂದ ಹೊರಗುಳಿಯಬಹುದು. ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರೋದಿಲ್ಲ.

ಯಾವ ಖಾತೆ ಎಂದು ತಿಳಿದಿರಬೇಕು!

advertisement

ಇನ್ನು ಕಡಿತಗಳ ಕಾಲಂ ಇರುವ ಫಾರಂನ ಪಾರ್ಟ್ C ವಿಭಾಗದಲ್ಲಿ ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡೋಡುವವರು ಅದರಲ್ಲೂ ನಿರ್ದಿಷ್ಟವಾಗಿ ಅಗ್ನಿವೀರ್ ಕಾರ್ಪಸ್ ಫಂಡ್ ನಲ್ಲಿ ಕೆಲಸ ಮಾಡೋರಿಗೆ 80CCH ಅಡಿಯಲ್ಲಿ ಕಡಿತಕ್ಕಾಗಿ ಪ್ರತ್ಯೇಕ ವಿಭಾಗವನ್ನು ಒದಗಿಸಲಾಗಿದೆ. ಅಗ್ನಿವೀರ್ ಕಾರ್ಪಸ್ ನಿಧಿಗೆ ನೀಡಿದ ಕೊಡುಗೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇನ್ನು ಈ ಫಾರಂನಲ್ಲಿ ಪಾರ್ಟ್ E ಎನ್ನುವ ವಿಭಾಗ ಇದೆ. ಇದರಲ್ಲಿ ನೀವು ಪ್ರಸ್ತುತ ಹಣಕಾಸು ವರ್ಷದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ನೀಡಬೇಕು. ಜೊತೆಗೆ ಅದು ಉಳಿತಾಯ ಖಾತೆನಾ ಅಥವಾ ಕರೆಂಟ್ ಅಕೌಂಟಾ ಅನ್ನೋದನ್ನು ನಿರ್ದಿಷ್ಟವಾಗಿ ತಿಳಿಸಬೇಕು..

ಈಗ ITR-4 ಫಾರಂ ಬಗ್ಗೆ ಮಾತನಾಡೋಣ. ಐಟಿಆರ್‌ ನಮೂನೆ 4 ಅನ್ನು ಸುಗಮ್ ಅಂತನೂ ಕರೆಯಲಾಗುತ್ತದೆ. ಬಿಸಿನಸ್ ಅಥವಾ ವೃತ್ತಿಯಿಂದ 50 ಲಕ್ಷದವರೆಗೆ ಆದಾಯ ಗಳಿಸುತ್ತಿರುವ ವ್ಯಕ್ತಿ, ಅವಿಭಕ್ತ ಹಿಂದೂ ಕುಟುಂಬ, ಮತ್ತು ಲಿಮಿಡೆಟ್ ಪಾಲುದಾರಿಕೆ ಕಂಪನಿಗಳು ಇದನ್ನು ಭರ್ತಿ ಮಾಡಬೇಕಾಗುತ್ತದೆ. ITR-4 ಫಾರಂ ಸಲ್ಲಿಸುವ ತೆರಿಗೆದಾರರು ಹಳೇ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಹೊಸ ತೆರಿಗೆ ಪದ್ಧತಿಯಿಂದ ಹೊರಗೆ ಉಳಿಯಲು ಫಾರಂ 10-IEA ಅನ್ನು ತುಂಬಬೇಕು. ಒಂದು ವೇಳೆ ನೀವು ಹಳೇ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವುದಾದರೆ ನಿಗದಿತ ದಿನಾಂಕದೊಳಗೆ ಅಂದ್ರೆ ಜುಲೈ 31 ರೊಳಗೆ ಐಟಿಆರ್ ಫೈಲ್ ಮಾಡಬೇಕು ಅಂತ ಉಲ್ಲೇಖಿಸಲಾಗಿದೆ.. ಇನ್ನು ITR Filing ಮಾಡೋವಾಗ ಜುಲೈ 31ರೊಳಗೆ ಹಳೇ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿಲ್ಲ ಅಂದ್ರೆ ಡಿಫಾಲ್ಟ್ ಆಗಿ ಹೊಸ ತೆರಿಗೆ ಪದ್ಧತಿ ಆಯ್ಕೆಯಾಗುತ್ತದೆ.

ಮೂರನೇ ವಿಭಾಗದಲ್ಲಿ ಏನನ್ನು ಸಲ್ಲಿಸಬೇಕು?

ಇನ್ನು ITR-4 ಫಾರಂನ ಸೆಕ್ಷನ್ 44AD ಅಡಿಯಲ್ಲಿನ ವ್ಯಾಪಾರ ವಹಿವಾಟಿನ ಮಿತಿಯನ್ನು 3 ಕೋಟಿಗೆ ಏರಿಕೆ ಮಾಡಲಾಗಿದೆ. ನಗದು ವಹಿವಾಟು ಶೇಕಡಾ 5 ಅಥವಾ ಅದಕ್ಕಿಂತ ಕಡಿಮೆ ಇರಬೇಕು ಎಂದು ತಿಳಿಸಲಾಗಿದೆ. ಅದೇ ರೀತಿ ಸೆಕ್ಷನ್ 44ADA ಅಡಿಯಲ್ಲಿ ವೃತ್ತಿಪರರ ಮಿತಿಯನ್ನು 50 ಲಕ್ಷದಿಂದ 75 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇಲ್ಲಿ ಸಹ ನಗದು ವಹಿವಾಟು ಶೇಕಡಾ 5 ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಇನ್ನು ಈ ಎರಡೂ ಸೆಕ್ಷನ್ ಗಳಲ್ಲಿ ಕ್ಯಾಷ್ ರಿಸಿಪ್ಟ್ ಕಾಲಂ ಅನ್ನು ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ತೆರಿಗೆದಾರರು ಪ್ರಸಕ್ತ ಹಣಕಾಸು ವರ್ಷದಲ್ಲಿ ಎಷ್ಟು ಕ್ಯಾಷ್ ಪಡೆದುಕೊಂಡಿದ್ದಾರೆ ಮತ್ತು ಎಲ್ಲಿಂದ ಪಡೆದುಕೊಂಡಿದ್ದಾರೆ ಎನ್ನುವುದನ್ನು ನಮೂದಿಸಬೇಕು. ಈ ಹಿಂದೆ ಕೇವಲ ಎರಡು ವಿಧಾನಗಳು ಇದ್ದಿದ್ದವು. ಆದರೆ ಈ ಬಾರಿ ಹೊಸದಾಗಿ ಕ್ಯಾಷ್ ಮೋಡ್ ಸಹ ಸೇರಿಸಲಾಗಿದೆ. ಹೀಗಾಗಿ ವಹಿವಾಟುಗಳನ್ನು ಮೂರು ವಿಭಾಗಗಳಲ್ಲಿ ನಮೂದಿಸಬೇಕು.

ITR Forms ಮೊದಲೇ ಬಿಡುಗಡೆ

ಮಾಡಿರುವುದು ತೆರಿಗೆದಾರರಿಗೆ ಅನುಕೂಲ ತಂದಿದೆ. ಹೊಸ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಸಮಯಕ್ಕೆ ಸರಿಯಾಗಿ ಐಟಿಆರ್ ರಿಟರ್ನ್ ಫೈಲ್ ಮಾಡಲು ಸಹಕಾರಿಯಾಗಲಿದೆ. PAN Card, Mobile Number ಮತ್ತು Bank Account ಇತ್ಯಾದಿಗಳ ಮೂಲಕ ನಿಮ್ಮ ಎಲ್ಲಾ ವಹಿವಾಟುಗಳ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ಸಿಗುತ್ತದೆ. ಇನ್ನು ನೀವು ಯಾವುದೇ ಹಣಕಾಸು ವರ್ಷದ ವಹಿವಾಟಿನ ಮಾಹಿತಿಯನ್ನ ಆನ್ಯುವಲ್ ಇನ್ಪಮೇಷನ್ ಸ್ಟೇಟ್ ಮೆಂಟ್ ಮೂಲಕ ಪರಿಶೀಲನೆ ಮಾಡಬಹದು. ಹೀಗಾಗಿ ಆದಾಯ ತೆರಿಗೆ ಇಲಾಖೆಗೆ ನಿಮ್ಮ ಆದಾಯದ ಬಗ್ಗೆ ಸರಿಯಾದ ಮಾಹಿತಿ ನೀಡೋದು ಅತ್ಯಗತ್ಯವಾಗಿದೆ. ಒಂದು ವೇಳೆ ತಪ್ಪು ಮಾಹಿತಿ ನೀಡಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆಯಲು ಸಿದ್ಧರಾಗಿರಿರಾಗಿರಿ.

advertisement

Leave A Reply

Your email address will not be published.