Karnataka Times
Trending Stories, Viral News, Gossips & Everything in Kannada

IT Return: ITR ಫೈಲ್ಸ್ ಇನ್ನೂ ಮಾಡಿಲ್ಲವೇ? ಹಾಗಿದ್ದರೇ ಈ ನಿಯಮ ನಿಮಗೂ ಕಡ್ಡಾಯ!

advertisement

ಪ್ರತೀ ವರ್ಷವೂ ಕೂಡ ಆದಾಯ ತೆರಿಗೆ ಇಲಾಖೆಯಿಂದ IT Return ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಐಟಿ ಆರ್ ಸಲ್ಲಿಕೆ ಮಾಡಲು ನಿರ್ದಿಷ್ಟ ಅವಧಿ ನಿಗಧಿ ಪಡಿಸಲಾಗಿದ್ದು ಈಗಾಗಲೇ ಆ ಅವಧಿ ಮುಗಿಯುತ್ತಾ ಬಂದಿದೆ ಹಾಗಾಗಿ ನೀವು ಸ್ವಲ್ಪ ಯಾಮಾರಿದರೂ ಮುಂದೆ ದೊಡ್ಡ ಮೊತ್ತದ ದಂಡ ಕಟ್ಟಲು ರೆಡಿ ಆಗಿರಬೇಕು ಎನ್ನಬಹುದು‌. ಹಾಗಾಗಿ ಈ ಬಗ್ಗೆ ಕೂಡಲೇ ಗಮನ ಹರಿಸಿ ಸಮಸ್ಯೆ ಬಗೆಹರಿಸಿಕೊಂಡರೆ ನಿಶ್ಚಿಂತೆಯಿಂದ ಇರಬಹುದು.

ಆದಾಯ ತೆರಿಗೆ ನಿಯಮದ ಪ್ರಕಾರ ಪ್ರತೀ ವರ್ಷ ಆದಾಯ ತೆರಿಗೆ ರಿಟರ್ನಿಂಗ್ ಫೈಲ್ಸ್ (IT Returning File) ಕಳುಹಿಸುವುದು ಕಡ್ಡಾಯವಾಗಿದ್ದು ತಪ್ಪಿದ್ದಲ್ಲಿ ದಂಡ ಅಥವಾ ಶಿಸ್ತುಬದ್ಧ ಕ್ರಮ ರೂಪಿಸಲಾಗುವುದು. 2022-23ನೇ ವರ್ಷದ IT Return ಸಲ್ಲಿಕೆಯ ಗಡುವಿನ ಅವಧಿಯನ್ನು ಈಗಾಗಲೇ ವಿಸ್ತರಿಸಲಾಗಿದೆ. ಜುಲೈ 31, 2023ರ ಒಳಗೆ IT Return ಸಲ್ಲಿಕೆ ಮಾಡಲು ತಿಳಿಸಲಾಗಿದ್ದು ರಿಟರ್ನ್ ಅನ್ನು ಸಲ್ಲಿಕೆ ಮಾಡದೇ ಇದ್ದವರು ಡಿಸೆಂಬರ್ 31ರ ಒಳಗಾಗಿ ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಅವಶ್ಯಕವಾಗಿದೆ.

 

ಹಿಂದಿನಿಂದಲೂ ನಿಯಮ ಇದ್ದೇ ಇದೆ:

advertisement

ನಿಮ್ಮ ಒಟ್ಟು ಆದಾಯ ವಾರ್ಷಿಕವಾಗಿ ಅತೀ ಹೆಚ್ಚು ಇದೆ ಎಂದು ಅನಿಸಿದರೆ ನೀವು IT Return ಫೈಲ್ಸ್ ಮಾಡುವುದನ್ನು ತಪ್ಪಿಸುವಂತಿಲ್ಲ. ಯಾಕೆಂದರೆ ಇದು ಹಳೆಯ ನಿಯಮವಾಗಿದೆ‌. ವಾರ್ಷಿಕ ಆದಾಯದ ಇಂತಿಷ್ಟು ಪ್ರಮಾಣದ ಹಣ ತೆರಿಗೆ ರೂಪದಲ್ಲಿ ಕಾನೂನು ಸರಕಾರಕ್ಕೆ ಕಟ್ಟಬೇಕಾಗಿದ್ದು ಈ ನಿಯಮ ತಪ್ಪಿದಲ್ಲಿ ದೊಡ್ಡ ಮೊತ್ತದ ದಂಡ ಇಲ್ಲವೇ ಕಠಿಣ ಶಿಕ್ಷೆ ವಿಧಿಸಲಾಗುವುದು.

ಕೊನೆಯ ದಿನಾಂಕ ಯಾವಾಗ?

2022-23 ಹಣಕಾಸು ವರ್ಷಕ್ಕೆ ಇನ್ನೂ ಆದಾಯ ತೆರಿಗೆ ರಿಟರ್ನ್ (IT Return) ಅನ್ನು ಸಲ್ಲಿಸದಿದ್ದರೆ ನೀವು ಪಾವತಿ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ IT Return ಸಲ್ಲಿಕೆ ವಿಳಂಬ ವಾದರೆ ದಡ್ಡ ಪಾವತಿ ಮಾಡುವುದು ಕಡ್ಡಾಯವಾಗಿದೆ. 2022-23 ರಲ್ಲಿ ITR ಅನ್ನು ಸಲ್ಲಿಸಲು ಜುಲೈ 31, ಕೊನೆಯ ದಿನಾಂಕವಾಗಿತ್ತು. ಒಂದು ವೇಳೆ ತದನಂತರ ಸಲ್ಲಿಕೆ ಮಾಡುದಾದ್ರೆ ಡಿಸೆಂಬರ್ 31 ರವರೆಗೆ ತಡವಾದ ರಿಟರ್ನ್‌ಗಳನ್ನು ದಂಡದೊಂದಿಗೆ ಸಲ್ಲಿಸಲು ಅವಕಾಶ ಇದೆ.

ದಂಡ ಎಷ್ಟು?

ಆದಾಯ ತೆರಿಗೆ ನಿಯಮದ ಪ್ರಕಾರ, ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರುವ ತೆರಿಗೆದಾರರು ತಡವಾಗಿ ITR ಸಲ್ಲಿಕೆ ಮಾಡಿದ್ರೆ ರೂ 1,000 ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. 5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿದ್ದರೆ 5,000 ರೂ.ವರೆಗೆ ದಂಡ ಕಟ್ಟಬೇಕಾಗುತ್ತದೆ.

advertisement

Leave A Reply

Your email address will not be published.