Karnataka Times
Trending Stories, Viral News, Gossips & Everything in Kannada

Govt Rules: 2024 ಜನವರಿ 1 ರಿಂದ 4 ಹೊಸ ರೂಲ್ಸ್ ಗಳು ಜಾರಿ, ಯಾವೆಲ್ಲಾ ನಿಯಮಗಳು ಬದಲಾಗಲಿವೆ ಗೊತ್ತಾ?

advertisement

2023 ವರ್ಷದ ಕೊನೆಯ ತಿಂಗಳಿನಲ್ಲಿ ನಾವಿದ್ದೇವೆ. ಹಲವರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ. ಆದರೆ 2024 ವರ್ಷ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಮಾತ್ರ ಉಳಿದಿರುವಾಗಲೇ, 2024 ರಿಂದ ಕೆಲವು ನಿಯಮಗಳು ಬದಲಾಗಲಿವೆ ಎನ್ನಲಾಗಿದೆ. ಹಾಗಾದ್ರೆ 2024 ರಿಂದ ಯಾವೆಲ್ಲಾ ನಿಯಮ (Govt Rules) ಗಳಲ್ಲಿ ಬದಲಾಗಳಿವೆ ಎನ್ನುವ ಮಾಹಿತಿಯು ಇಲ್ಲಿದೆ.

ಜಿಎಸ್‌ಟಿ (GST) ದರದಲ್ಲಿ ಬದಲಾವಣೆ:

 

 

ಮುಂದಿನ ವರ್ಷ 2024ರಲ್ಲಿ GST ದರದಲ್ಲಿ ಬದಲಾವಣೆಯಾಗಲಿದ್ದು, GST Rate ಶೇ 8ರಿಂದ ಶೇ 9ಕ್ಕೆ ಏರಿಕೆಯಾಗಲಿದೆ. ಈ ಜಿಎಸ್ಟಿ ದರದಲ್ಲಿನ ಬದಲಾವಣೆಗಳು ಜನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಜನವರಿ 1 ರಿಂದ ಈ ಜಿಎಸ್ ಟಿ ದರಗಳು ಜಾರಿಗೆ ಬರಲಿದೆ.

ಸಿಮ್ ಕಾರ್ಡ್‌ ನಿಯಮ (SIM Card Rules)ದಲ್ಲಿಯು ಬದಲಾವಣೆ:

 

 

advertisement

ಸಿಮ್ ಕಾರ್ಡ್ ಖರೀದಿ ಹಾಗೂ ಮಾರಾಟ ಮಾಡಬೇಕೆಂದುಕೊಳ್ಳುವವರು ಸಿಮ್ ಕಾರ್ಡ್ (SIM Card) ಗೆ ಸಂಬಂಧ ಪಟ್ಟ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಸಿಮ್ ಕಾರ್ಡ್ ಖರೀದಿ ಮತ್ತು ಮಾರಾಟದ ನಿಯಮಗಳಲ್ಲೂ ಬದಲಾವಣೆಯಾಗಲಿದ್ದು, ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಬೇಕಾದರೆ ಮೊದಲಿಗೆ ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ಅದಲ್ಲದೇ ಮಾರಾಟಗಾರರು ಯಾರಿಗೆ ಸಿಮ್ ಮಾರಾಟ ಮಾಡಿದ್ದಾರೆ ಎಂಬ ದಾಖಲೆಗಳನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಗ್ರಾಹಕರ ಗುರುತಿನ ಮಾಹಿತಿಯನ್ನು ಕೂಡ ಮಾರಾಟಗಾರರು ಒದಗಿಸುವುದು ಕಡ್ಡಾಯವಾಗಿದೆ.

ಹೊಸ ರಜಾ ವಿಧಾನ (New Leave Sysetm) ಜಾರಿ:

ಹೊಸ ವರ್ಷದಿಂದ ಉದ್ಯೋಗದಲ್ಲಿರುವವರಿಗೆ ಸಂಬಂಧ ಪಟ್ಟಂತೆ ಹೊಸ ನಿಯಮಗಳು ಜಾರಿಗೆ ಬರಲಿವೆ. ಇಲ್ಲಿ ಮುಖ್ಯವಾಗಿ ಅರೆಕಾಲಿಕ ಕೆಲಸಗಾರರಿಗೆ ಹಾಗೂ ಅನಿಯಮಿತ ಸಮಯಗಳಿಗೆ ಅನುಗುಣವಾಗಿ ದುಡಿಯುವವರಿಗೆ ಹೊಸ ರಜೆ ವಿಧಾನವು ಜಾರಿಗೆ ಬರಲಿದ್ದು, ಇದು ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ವಿದ್ಯಾರ್ಥಿ ವೀಸಾ (Student Visa) ಗೆ ಹೊಸ ನಿಯಮ ಅನ್ವಯ:

 

 

ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಪೂರ್ಣಗೊಳಿಸುವವರೆಗೆ ಕೆಲಸದ ಮಾರ್ಗದ ವೀಸಾಗಳನ್ನು ಪಡೆಯಲು ಆಗುವುದಿಲ್ಲ. ಕೆಲಸ ಮಾಡಲು ಬಯಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸುವ ಮೊದಲು ಕೆಲಸದ ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ನಿಯಮವು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಅನ್ವಯವಾಗುತ್ತದೆ.

 

 

advertisement

Leave A Reply

Your email address will not be published.