Karnataka Times
Trending Stories, Viral News, Gossips & Everything in Kannada

Swarnima Scheme: ಮಹಿಳೆಯರಿಗೆ ಸರ್ಕಾರದಿಂದ 2 ಲಕ್ಷ ರೂಪಾಯಿ ಸಾಲ ಸೌಲಭ್ಯ, ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ.

advertisement

ಕೇಂದ್ರ ಸರಕಾರವು ಈಗಾಗಲೇ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಈ ಮೂಲಕ ಕೇಂದ್ರ ಸರಕಾರದ ಹಲವು ಯೋಜನೆಗಳು ಈಗಾಗಲೇ ಪ್ರಸಿದ್ಧಿ ಪಡೆಯುತ್ತಿದೆ. ಪ್ರಧಾನ ಮಂತ್ರಿ (Prime Minister) ಅನೇಕ ಯೋಜನೆಗಳು ಚಿರಪರಿಚಿತವಾಗಿದೆ. ಇತ್ತೀಚೆಗಷ್ಟೇ ವಿಶ್ವಕರ್ಮ ಯೋಜನೆ (Vishwakarma Yojana) ಮೂಲಕ ಅನೇಕ ವೃತ್ತಿ ರಂಗವನ್ನು ಪ್ರೋತ್ಸಹಿಸಲು ಕಡಿಮೆ ಬಡ್ಡಿದರದ ಸಾಲ ಮತ್ತು ಸಹಾಯಧನ ನೀಡಲು ಮುಂದಾಗಿರುವ ಕೇಂದ್ರ ಸರಕಾರವು ಈಗ ಹೊಸತೊಂದು ಯೋಜನೆ ಜಾರಿಗೆ ತರಲು ಮುಂದಾಗಿದೆ.

ಮಹಿಳೆಯರಿಗೆ ಉತ್ತೇಜನೆ:

ಸ್ತ್ರೀ ಅಬಲೆ ಎಂಬ ಕಾಲ ಮರೆಯಾಗಿ ಪುರುಷರಷ್ಟೇ ಆಕೆ ಕೂಡ ಸದೃಢಳು ಎಂಬ ಕಾಲಕ್ಕೆ ನಾವೆಲ್ಲ ಇಂದು ಸನ್ನಿಹಿತವಾಗಿದ್ದೇವೆ. ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆರ್ಥಿಕ ಅಭಿವೃದ್ಧಿ ‌ಮಾಡುವ ಕಾರ್ಯಕ್ರಮಗಳಿಗೆ ಉತ್ತೇಜನೆ ನೀಡಲಾಗುತ್ತಿದೆ. ಹಾಗಾಗಿ ಮಹಿಳೆಯರಿಗೆ ಹೊಸ ರೀತಿಯ ಯೋಜನೆ ಜಾರಿಗೆ ತರಲು ಮುಂದಾಗಲಿದೆ. ಸ್ವರ್ಣಿಮಾ ಸಾಲ ಯೋಜನೆ (Swarnima Loan Scheme) ಜಾರಿಗೆ ತರುವ ಮೂಲಕ ಹಿಂದುಳಿದ ವರ್ಗದ ಮಹಿಳೆಯರಿಗೆ ಅವಧಿ ಸಾಲ (Loan) ನೀಡುವ ಮೂಲಕ ಮಹಿಳೆಯರ ಸ್ವ ಆರ್ಥಿಕ ಅಭಿವೃದ್ದಿಗೆ ಪ್ರೊತ್ಸಾಹಿಸಲಾಗುತ್ತಿದೆ.

ಈ ಯೋಜನೆ ಪ್ರಯೋಜನ?

 

 

ಹಿಂದುಳಿದ ವರ್ಗಗಳ ಮಹಿಳೆಯರಿಗೆ ಅವಧಿ ಸಾಲ (Loan) ನೀಡುವ ಮೂಲಕ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ಈ ಯೋಜನೆ (Swarnima Scheme) ಜಾರಿಗೆ ತರಲು ಮುಂದಾಗಿದೆ. ಈ ಯೋಜನೆ ಫಲಾನುಭವಿಗಳಾಗಲು ಮಹಿಳೆಯರು ಮಾತ್ರವೇ ಅರ್ಹ ಸದಸ್ಯರಾಗಿರುತ್ತಾರೆ. ಇದರ ಪ್ರಯೋಜನ ಏನೆಂದು ಯೋಚನೆ ಮಾಡುವುದಾದರೆ ಸಾಮಾನ್ಯ ಸಾಲಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಇಲ್ಲಿ ನಿಮಗೆ ಹಣಕಾಸಿನ ಸೌಲಭ್ಯ ಸಿಗಲಿದೆ.

advertisement

Swarnima Loan Scheme:

ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಮಹೀಳೆಯರಿಗೆ ಆರ್ಥಿಕ ಸಹಾಯವನ್ನು ನೀಡುವುದು ಮುಖ್ಯ ಗುರಿಯಾಗಿದೆ. ಕೃಷಿ, ಸಣ್ಣ ವ್ಯಾಪಾರ, ಕುಶಲಕರ್ಮಿ, ತಾಂತ್ರಿಕ, ವೃತ್ತಿಪರ, ಕೆಲಸಗಳಿಗೆ ‌ಸಾಲಗಳು ಲಭ್ಯವಿದೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಮಹೀಳೆಯರನ್ನು ಉತ್ತೇಜನ ಗೊಳಿಸಲು ಹೊಸ ಸ್ವರ್ಣಿಮಾ ಸಾಲ ಯೋಜನೆ (Swarnima Loan Scheme) ಯನ್ನು ಆರಂಭ ಮಾಡಲಾಗಿದ್ದು, ಇದರ ಮೂಲಕ ಹಿಂದುಳಿದ ವರ್ಗದ ಮಹಿಳೆಯರಿಗೆ ಸಹಾಯಕವಾಗಲಿದೆ. ಆದರೆ ಈ ಸೌಲಭ್ಯ ಪಡೆಯಬೇಕಾದರೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ 3.00 ಲಕ್ಷಕ್ಕಿಂತ ಕಡಿಮೆಯಿರಬೇಕು.

ಎಷ್ಟು ಸಾಲ ದೊರೆಯುತ್ತದೆ:

ಮಹಿಳಾ ಫಲಾನುಭವಿಗೆ ಗರಿಷ್ಠ 2 ಲಕ್ಷ ರೂ. ಸಾಲ ಸೌಲಭ್ಯ ದೊರೆಯಲಿದ್ದು ಈ ಯೋಜನೆಯ ಬಡ್ಡಿದರವು ವಾರ್ಷಿಕ 5% ಆಗಿದೆ. ಸಾಲವನ್ನು‌ EMI ‌ಮೂಲಕವು ಪಾವತಿಸಲು ಅವಕಾಶ ಇದ್ದು ಇದನ್ನು ತ್ರೈಮಾಸಿಕ ಆಧಾರದ ಮೇಲೆ ಅಂದರೆ 3 ತಿಂಗಳಿಗೆ ಪಾವತಿಸಬೇಕು.

ಇಲ್ಲಿ ಮಾಹಿತಿ ಪಡೆಯಿರಿ:

ಈ ಯೋಜನೆಯ ಸೌಲಭ್ಯ ಪಡೆಯಬೇಕಾದರೆ ಟೋಲ್ ಫ್ರೀ ಸಂಖ್ಯೆ 18001023399 ಅಥವಾ ನೀವು ಈ ವೆಬ್‌ಸೈಟ್ www.nbcfdc.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

advertisement

Leave A Reply

Your email address will not be published.