Karnataka Times
Trending Stories, Viral News, Gossips & Everything in Kannada

Enigma Ambier N8: ಅಗ್ಗದ ಬೆಲೆಗೆ ಸಿಗಲಿದೆ 200Km ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್; ವಾರಕ್ಕೆ ಒಮ್ಮೆ ಚಾರ್ಜ್ ಮಾಡಿದ್ರೆ ಸಾಕು!

advertisement

ದೇಶದಲ್ಲಿ ವಾಹನ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಗಳನ್ನು ಒದಗಿಸುವುದು ಕಷ್ಟವಾಗುತ್ತಿದೆ ಇದರಿಂದಾಗಿ ಇವುಗಳ ಬೆಲೆ ಕೂಡ ಜಾಸ್ತಿಯಾಗಿದೆ. ಹಾಗಾಗಿ ಸಾಕಷ್ಟು ಮೋಟಾರ್ ಕಂಪನಿಗಳು ಹೆಚ್ಚಾಗಿ ಇವಿ ವಾಹನಗಳನ್ನು ತಯಾರು ಮಾಡುತ್ತಿವೆ. ಸಬ್ಸಿಡಿ ದರದಲ್ಲಿಯೂ ಕೂಡ ಎಲೆಕ್ಟ್ರಿಕಲ್ ಸ್ಕೂಟರ್ (Electric Scooter) ಖರೀದಿ ಮಾಡಬಹುದು.

ಆದರೆ ಎಲ್ಲರಿಗೂ ತಿಳಿದಿರುವಂತೆ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ (Electric Scooter Price) ತುಸು ಜಾಸ್ತಿ. ಹಾಗಾಗಿ ಲಕ್ಷಗಟ್ಟಲೆ ಹಣವನ್ನು ಕೊಟ್ಟು ಹೇಗೆ ಖರೀದಿ ಮಾಡುವುದು ಎಂದು ಯೋಚನೆ ಮಾಡುತ್ತಿದ್ದರೆ ಅತ್ಯುತ್ತಮ ಕಾರ್ಯ ಕ್ಷಮತೆ ಹೊಂದಿರುವ ಎಲೆಕ್ಟ್ರಿಕಲ್ ಸ್ಕೂಟರ್ ಒಂದು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಕೆಲವೇ ದಿನದ ಆಫರ್ ಆಗಿದ್ದು, ತಕ್ಷಣವೇ ನೀವು ಖರೀದಿ ಮಾಡಿ.

Enigma Ambier N8 Electric Scooter:

 

 

ಪುಣೆ ಮೂಲದ ಎಲೆಕ್ಟ್ರಾನಿಕ್ ವಾಹನ ತಯಾರಿಕಾ ಕಂಪನಿ ಆಗಿರುವ ಎನಿಗ್ಮ ಅತ್ಯುತ್ತಮ ಎಲೆಕ್ಟ್ರಿಕ ಸ್ಕೂಟರ್ (Electric Scooter) ಅನ್ನು ಜುಲೈ 2023 ರಲ್ಲಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಕಾರ್ಯ ಕ್ಷಮತೆ ಹಾಗೂ ವಿನ್ಯಾಸ ಎಲ್ಲವೂ ಅದ್ಭುತವಾಗಿದ್ದು, ಕೈಗಟುಕುವ ಬೆಲೆಯಲ್ಲಿ ಲಭ್ಯವಿದೆ ಹಾಗಾಗಿ ನೀವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಬಯಸಿದರೆ ಈ ವಿಶೇಷವಾದ ಸ್ಕೂಟರ್ ಖರೀದಿ ಮಾಡಬಹುದು.

Enigma Ambier N8 Electric Scooter Design:

advertisement

ಈ ಸ್ಕೂಟರ್ ನಲ್ಲಿ ಸ್ಟೀಲ್ ಹಾಗೂ ಫ್ಯೂಚರ್ಸ್ಟಿಕ್ ವಿನ್ಯಾಸವನ್ನು ಕಾಣಬಹುದು. ಅತ್ಯಂತ ಗಮನ ಸೆಳೆಯುವ ಹಾಗೂ ಆಕರ್ಷಕವಾದ ವಿನ್ಯಾಸವನ್ನು ಹೊಂದಿದ್ದು ವಿನ್ಯಾಸದ ಗುಣಮಟ್ಟವೂ ಕೂಡ ಅಷ್ಟೇ ಉತ್ತಮವಾಗಿದೆ ಕಾಲೇಜು ವಿದ್ಯಾರ್ಥಿಗಳು, ಈಗ ತಾನೆ ಕೆಲಸಕ್ಕೆ ಸೇರಿದ ಹುಡುಗ ಹುಡುಗಿಯರು ಈ ಸ್ಕೂಟರ್ ಖರೀದಿ ಮಾಡಲು ಮುಗಿ ಬೀಳುತ್ತಿದ್ದಾರೆ. ವಿಶೇಷವಾಗಿ ಹುಡುಗಿಯರಿಗಾಗಿ ವಿನ್ಯಾಸ ಮಾಡಿದಂತೆಯೇ ಇರುವ ಈ ಎನಿಗ್ಮಾ ಸ್ಕೂಟರ್ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.

Enigma Ambier N8 ಎಲೆಕ್ಟ್ರಿಕಲ್ ಸ್ಕೂಟರ್ 1500W BLDC hum motor ಹೊಂದಿದೆ. ಇದು 120 ಎನ್ ಎಂ ಪಿಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಸ್ಕೂಟರ್ ಬ್ಯಾಟರಿ (Scooter Battery) ವಿಚಾರಕ್ಕೆ ಬಂದರೆ 3.78 ಕಿಲೋ ವ್ಯಾಟ್ ಲೀಥಿಯಂ ಅಯಾನ್ ಬ್ಯಾಟರಿ ಅಳವಡಿಸಲಾಗಿದೆ. ಇದರಲ್ಲಿ ಅಳವಡಿಸಿರುವ ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದಿಂದಾಗಿ ನೀವು ಒಮ್ಮೆ ಚಾರ್ಜ್ ಮಾಡಿದರೆ, ಇತರ ಎಲ್ಲಾ ಎಲೆಕ್ಟ್ರಿಕಲ್ ಸ್ಕೂಟರ್ ಗಳಿಗಿಂತಲೂ ಹೆಚ್ಚಿನ ಸಮಯ ಓಡಿಸಬಹುದು.

Enigma Electric Scooter Range & Price:

ಈ ಸ್ಕೂಟರ್ ಗಂಟೆಗೆ 60 ಕಿಲೋಮೀಟರ್ ವೇಗವನ್ನ ಪಡೆದುಕೊಳ್ಳುತ್ತದೆ ಹಾಗೂ 200 ಕಿಲೋ ಮೀಟರ್ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಈ ಸ್ಕೂಟರ್ ನಲ್ಲಿ ಇಕೋ, ಸಿಟಿ ಹಾಗೂ ಸಪೋರ್ಟ್ ಎನ್ನುವ ಮೂರು ರೈಡಿಂಗ್ ಮೂಡ್ ಕೂಡ ಲಭ್ಯವಿದೆ.

ಇನ್ನು ಭಾರತದಲ್ಲಿ ಲಭ್ಯ ಇರುವ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಹೋಲಿಸಿದರೆ ಎನಿಗ್ಮಾ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ ಎಂದೇ ಹೇಳಬಹುದು. ಈ ಸ್ಕೂಟರ್ ನ ಎಕ್ಸ್ ಶೋರೂಮ್ ಬೆಲೆ ರೂ.95,000 ಗಳಿಂದ ಆರಂಭವಾಗುತ್ತದೆ. ಇನ್ನು ಟಾಪ್ ವೇರಿಯಂಟ್ ಖರೀದಿ ಮಾಡುವುದಾದರೆ ರೂ.1,05,000 ವರೆಗೆ ಇರಬಹುದು. ಈ ಸ್ಕೂಟರ್ ಖರೀದಿ ಮಾಡಲು ಕಂಪನಿ ಇಎಂಐ ಯೋಜನೆಯನ್ನು ಕೂಡ ಒದಗಿಸುತ್ತದೆ ಹಾಗಾಗಿ ಗ್ರಾಹಕರು ಕೇವಲ ಪ್ರತಿ ತಿಂಗಳು 2,864 ರೂಪಾಯಿಗಳನ್ನು EMI ಪಾವತಿ ಮಾಡುವುದರ ಮೂಲಕ ಈ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಗಳ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳು ಕೂಡ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಎಲೆಕ್ಟ್ರಿಕಲ್ ಸ್ಕೂಟರ್ ಬಿಡುಗಡೆ ಮಾಡುತ್ತಿವೆ. ಅಂತವುಗಳಲ್ಲಿ ಎನಿಗ್ಮಾ ಕೂಡ ಒಂದು. ಹಾಗಾಗಿ ಅತ್ಯಂತ ಆಕರ್ಷಕವಾದ ಹಾಗೂ ಕೈ ಕೆಡುಕುವ ಬೆಲೆಯಲ್ಲಿ ಎಲೆಕ್ಟ್ರಿಕ ಸ್ಕೂಟರ್ ಖರೀದಿ ಮಾಡಲು ಬಯಸಿದರೆ ತಕ್ಷಣ ಬುಕಿಂಗ್ ಮಾಡಿ.

advertisement

Leave A Reply

Your email address will not be published.