Karnataka Times
Trending Stories, Viral News, Gossips & Everything in Kannada

Traffic Rule: ವಾಹನ ಸವಾರರಿಗೆ ಸ್ಟ್ರಿಕ್ಟ್ ರೂಲ್ಸ್ ಜಾರಿಗೆ, ಈ ತಪ್ಪು ಮಾಡಿದ್ರೆ ವಾಹನ ಸೀಜ್ ಆಗುತ್ತೆ!

advertisement

2023ರ ವರ್ಷ ನಿಮ್ಮ ಜೀವನದಲ್ಲಿ ಅನೇಕ ಸಂಗತಿಗಳು ಬದಲಾಗಿರಬಹುದು. ಈಗ 2023ರ ಅಂತಿಮ ಕಾಲ ಘಟ್ಟದಲ್ಲಿ ನಾವಿಂದು ಇದ್ದೇವೆ. ಈಗಾಗಲೇ ಬೆಲೆ ಏರಿಕೆ ಸಾಮಾನ್ಯ ವಿಚಾರದಿಂದ ಆರ್ಥಿಕ, ಸಾಮಾಜಿಕ , ಶೈಕ್ಷಣಿಕ , ಸಾಂಸ್ಕೃತಿಕ ಎಂಬ ಅನೇಕ ಸಂಗತಿಗಳು ಬದಲಾಗಿವೆ. ಅದೇ ರೀತಿ 2023ರ ಅಂತಿಮವಾಗಿ 2024ಅನ್ನು ಇನ್ನೇನು ಕೆಲವೇ ದಿನದಲ್ಲಿ ನಾವು ಬರಮಾಡಿಕೊಳ್ಳಲಿದ್ದೇವೆ.

ಹೊಸವರ್ಷ ಹಾಗೂ ಕ್ರಿಸ್ಮಸ್ ಎರಡೂ ಕೂಡ ಒಟ್ಟೊಟ್ಟಿಗೆ ಬರುವ ಕಾರಣ ಅದಕ್ಕಾಗಿ ಮಾಡುವ ಪಾರ್ಟಿಗಳು ಕೂಡ ಬಹಳ ಜೋರಾಗೇ ಇರಲಿದೆ. ಅದೇ ರೀತಿ ಆ ಸಂದರ್ಭದಲ್ಲಿ ಪಾರ್ಟಿ ಮಾಡಿ ಮದ್ಯಪಾನ ಸೇವನೆ ಮಾಡಿ ಗಾಡಿ ಚಲಾಯಿಸಿದರೆ ಈ ಸಂದರ್ಭ ನಿಮ್ಮ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಲಾಗುವುದು ಎಂಬ ಮಹತ್ವದ ಮಾಹಿತಿಯೊಂದು ಇದೀಗ ತಿಳಿದು ಬಂದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದ ಮೂಲಕ ನಾವಿಂದು ನಿಮಗೆ ತಿಳಿಸಲಿದ್ದೇವೆ.

ಈಗಲೇ ಈ ಬಗ್ಗೆ ಎಚ್ಚರಿಕೆ ವಹಿಸಿ

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರು ಮನೆ, ಆಫೀಸ್ ಎಂಬ ಗೊಜಲುಗಳ ಜೀವನದಲ್ಲಿ ಒಂದಿಷ್ಟು ರಿಲ್ಯಾಕ್ಸ್ ಟೈಂ ಕಳೆಯುವ ಮೂಲಕ ಮದ್ಯದ ನಶೆಯಲ್ಲಿ ತೇಲಿ ಒಂದಿಷ್ಟು ಖುಷಿಯ ಜೀವನ ಅನುಸರಿಸೋಣ ಎಂಬವರಿಗೆ ಈ ನಿಯಮ ಕಡ್ಡಾಯವಾಗಿ ತಿಳಿಯಬೇಕಿದೆ‌. ರಾಜ್ಯದಲ್ಲಿ ಸಾರಿಗೆ ವಿಚಾರದಲ್ಲಿ ಸಂಚಾರ ನಿಯಮ ಕಟ್ಟು ನಿಟ್ಟಾಗಿ ಪಾಲಿಸಲು ವ್ಯವಸ್ಥೆ ರೂಪಿಸಲಾಗಿದೆ. ಹಾಗಾಗಿ ಮದ್ಯಪಾನ ಮಾಡಿ ಡ್ರೈವ್ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೆ ತರಲು ಸರಕಾರ ಚಿಂತಿಸಿದೆ. ಬೆಂಗಳೂರಿನಲ್ಲಿ ಈಗಾಗಲೇ ಮದ್ಯಪಾನ ಮಾಡಿ ಗಾಡಿ ಚಲಾಯಿಸಿದ್ದವರ ಗಾಡಿ ಸೀಜ್ ಮಾಡಲಾಗುತ್ತಿದ್ದು ವಾಹನ ಸವಾರರು ಈ ಬಗ್ಗೆ ಮೊದಲೆ ಎಚ್ಚೆತ್ತುಕೊಳ್ಳುವುದು ಅತೀ ಅಗತ್ಯ.

advertisement

ನಿಮ್ಮ ವಾಹನ ಸೀಜ್ ಆಗಲಿದೆ

ಇನ್ನೇನು ಕ್ರಿಸ್ಮಸ್, ಹೊಸ ವರ್ಷ, ಮದುವೆ ಹಬ್ಬ ಸಮಾರಂಭ ಗಳು ಹೆಚ್ಚು ಇರಲಿದ್ದು ಜನದಟ್ಟಣೆ ಕೂಡ ಹೆಚ್ಚು ಇರಲಿದೆ. ಹೀಗಾಗಿ ಟ್ರಾಫಿಕ್ ನಿಯಮ (Traffic Rule) ಮೀರಿ ಚಲಾಯಿಸಿದ್ರೆ ನಿಮ್ಮ ವಾಹನ ಸೀಜ್ ಆಗಲಿದೆ. ಈಗಾಗಲೇ ಬೆಂಗಳೂರು ನಗರದಲ್ಲಿ ಹೈ ಅಲರ್ಟ್ ಆಗಿ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.

ದಂಡ ವಿಧಿಸಲಾಗುತ್ತದೆ

ಅದೇ ರೀತಿ ಕುಡಿದು ವಾಹನ ಚಲಾಯಿಸುವವರಿಗೂ ಟ್ರಾಫಿಕ್ ಪೊಲೀಸರು ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಆರಂಭಿಸಿದ್ದಾರೆ. ಈಗಾಗಲೇ ವಾಹನಗಳನ್ನು ಚಲಾವಣೆ ಮಾಡುವ ಡ್ರೈವರನ್ನು ತಪಾಸಣೆ ಮಾಡುತ್ತಿದ್ದು, ಕುಡಿದು ವಾಹನ ಚಲಾಯಿಸಿ ಪೊಲೀಸರಿಗೆ ಸಿಕ್ಕಿಬಿದ್ದರೆ ದಂಡ ವಿಧಿಸುದಲ್ಲದೇ ವಾಹನ ಸೀಜ್ ಮಾಡಲಾಗುತ್ತದೆ,ಈ ಬಗ್ಗೆ ಎಚ್ಚರ ವಹಿಸುವುದು ಸಹ ಬಹಳ ಮುಖ್ಯ ವಾಗುತ್ತದೆ.

advertisement

Leave A Reply

Your email address will not be published.