Karnataka Times
Trending Stories, Viral News, Gossips & Everything in Kannada

Home Loan: ಕೆನರಾ ಬ್ಯಾಂಕ್ ನಲ್ಲಿ 20 ವರ್ಷಗಳ ಅವಧಿಗೆ 25 ಲಕ್ಷ ಗೃಹ ಸಾಲ ಪಡೆದರೆ ಬರುವ EMI ಮೊತ್ತ ಎಷ್ಟು?

advertisement

ದೇಶದ ಅತ್ಯಂತ ನಂಬಿಕಾರ್ಹ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕೆನರಾ ಬ್ಯಾಂಕ್ (Canara Bank) ಕೂಡ ಒಂದು. ನೀವು ಈ ಬ್ಯಾಂಕ್ ನಲ್ಲಿ ಹಣ ಠೇವಣಿ ಇಡುವುದರಿಂದ ಹಿಡಿದು ಸಾಲ (Loan) ಸೌಲಭ್ಯವನ್ನು ಕೂಡ ಸುಲಭವಾಗಿ ಪಡೆದುಕೊಳ್ಳಬಹುದು. ನೀವು ಇಡುವ ಠೇವಣಿಗೆ ಉತ್ತಮ ಬಡ್ಡಿ ದರ ಸಿಗುತ್ತದೆ. ಅದೇ ರೀತಿ ಕಡಿಮೆ ಬಡ್ಡಿ ದರಕ್ಕೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ.

ಕೆನರಾ ಬ್ಯಾಂಕ್ ನೀಡುತ್ತಿದೆ ಕಡಿಮೆ ಬಡ್ಡಿ ದರದ ಗೃಹ ಸಾಲ:

 

Image Source: Hindustan Times

 

ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಲ್ಲಿ ಗೃಹ ಸಾಲ (Home Loan) ತೆಗೆದುಕೊಳ್ಳುವವರು ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಕೆನರಾ ಬ್ಯಾಂಕ್ ಸ್ಪರ್ಧಾತ್ಮಕ ಬೆಲೆಯಲ್ಲಿ, ಕಡಿಮೆ ಬಡ್ಡಿ ದರದ ಗೃಹ ಸಾಲವನ್ನು ಒದಗಿಸುತ್ತಿದೆ. ನೀವು ಕೆನರಾ ಬ್ಯಾಂಕ್ ನಲ್ಲಿ ಗೃಹ ಸಾಲ (Home Loan) ತೆಗೆದುಕೊಂಡರೆ 8.40% ನಿಂದ ಬಡ್ಡಿದರ ಆರಂಭವಾಗುತ್ತದೆ.

ಯಾರಿಗೆ ಸಿಗಲಿದೆ ಕಡಿಮೆ ಬಡ್ಡಿ ದರದಲ್ಲಿ ಸಾಲ?

 

advertisement

Image Source: Business Today

 

ಬ್ಯಾಂಕ್ ನಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ (Credit Card) ಉತ್ತಮವಾಗಿದ್ಯ? 800 ಗಿಂತ ಜಾಸ್ತಿ ಕ್ರೆಡಿಟ್ ಸ್ಕೋರ್ (Credit Score) ಇದ್ಯಾ? ಹಾಗಾದರೆ ನೀವು ಕೆನರಾ ಬ್ಯಾಂಕ್ ನಲ್ಲಿ ಆರಂಭಿಕ ಬಡ್ಡಿ ದರದಲ್ಲಿಯೇ ಸಾಲ (Loan) ಸೌಲಭ್ಯ ಪಡೆಯಬಹುದು.

25 ಲಕ್ಷಗಳ ಸಾಲ 20 ವರ್ಷಕ್ಕೆ ತೆಗೆದುಕೊಂಡರೆ ಪಾವತಿಸಬೇಕಾದ EMI ಎಷ್ಟು?

ನೀವು ಗೃಹ ಸಾಲ (Home Loan) ವನ್ನು ತೆಗೆದುಕೊಳ್ಳಲು ಬಯಸಿದರೆ ಖಂಡಿತವಾಗಿಯೂ ಈ ಮಾಹಿತಿ ನಿಮಗೆ ಉಪಯುಕ್ತ ಎನಿಸಬಹುದು. 20 ವರ್ಷಗಳ ಅವಧಿಗೆ 25 ಲಕ್ಷಗಳನ್ನು ನೀವು ಕೆನರಾ ಬ್ಯಾಂಕ್ (Canara Bank) ನಲ್ಲಿ ಗೃಹ ಸಾಲವಾಗಿ ತೆಗೆದುಕೊಂಡಿದ್ದೀರಿ ಎಂದು ಭಾವಿಸಿ. ಇದಕ್ಕೆ ಆರಂಭಿಕ 8.4% ಬಡ್ಡಿದರ ಅನ್ವಯವಾಗುತ್ತದೆ. ಅಂತಿಮವಾಗಿ ನೀವು ತೆಗೆದುಕೊಂಡು ಸಾಲಕ್ಕೆ ಒಟ್ಟಾರೆಯಾಗಿ ಪಾವತಿ ಮಾಡಬೇಕಾದ ಬಡ್ಡಿ 26,69,027,000. ಇದು ಸಾಲದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವಾಗಿದೆ.

ಅಲ್ಲಿಗೆ ನೀವು 20 ವರ್ಷಗಳ ಅವಧಿಗೆ 51,69,027ಗಳನ್ನು ಪಾವತಿ ಮಾಡುತ್ತೀರಿ. ಇದಕ್ಕೆ ನೀವು ಪ್ರತಿ ತಿಂಗಳು ಪಾವತಿ ಮಾಡಬೇಕಾದ EMI ಮೊತ್ತ 21,538 ರೂಪಾಯಿಗಳು.
ಈ ಲೆಕ್ಕಾಚಾರದ ಆಧಾರದ ಮೇಲೆ ನೀವು ಯಾವ ರೀತಿ ಯಾವ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳಬಹುದು ಎನ್ನುವುದನ್ನು ನಿರ್ಧರಿಸಿಕೊಳ್ಳಿ. ಮಾಹಿತಿಗಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸಿಬ್ಬಂದಿಗಳ ಬಳಿ ಕೇಳಿ ಮಾಹಿತಿ ಪಡೆಯಿರಿ.

advertisement

Leave A Reply

Your email address will not be published.